ಮುಂಬೈ : ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಎಸ್‌ಬಿಐನಲ್ಲಿ ನಾಳೆ ಮಧ್ಯಾಹ್ನ 12.30 ರಿಂದ 2.30ರ ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆಗಳು ಸ್ಥಗಿತಗೊಳ್ಳಲಿವೆ ಎಂದು ಎಸ್‌ಬಿಐ ಹೇಳಿದೆ. ಅಂತರ್ಜಾಲ ನಿರ್ವಹಣೆಯ ಕಾರ್ಯ ಕೈಗೊಂಡಿರುವುದರಿಂದ ಈ ಅವಧಿಯಲ್ಲಿ ಯೊನೊ, ಯೊನೊ ಲೈಟ್ ಮತ್ತು ಯುಪಿಐ ಸಂಬಂಧಿತ ಯಾವುದೇ ಸೇವೆಗಳು ಲಭ್ಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
12.30 ರಿಂದ 2.30ರ ಅವಧಿಯಲ್ಲಿ ನಿರ್ವಹಣೆಯ ಕಾರ್ಯವನ್ನು ಕೈಗೊಂಡಿದ್ದೇವೆ. ಆಗ ಇಂಟರ್‌ನೆಟ್ ಸಂಬಂಧಿತ ಸೇವೆಗಳು ಲಭ್ಯ ಇರುವುದಿಲ್ಲ. ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಬದ್ಧರಾಗಿರುವುದಾಗಿ ಎಸ್‌ಬಿಐ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಚರ್ಚೆ ನಡೆದಿಲ್ಲ ಎಂದ್ರು ಅರುಣ್ ಸಿಂಗ್...No Change ಅಂದ್ರು ಕಟೀಲ್
ನಿರ್ವಹಣೆಯಿಂದಾಗಿ ಜೂನ್ 13 ರಂದು 4 ಗಂಟೆಗಳ ಕಾಲ ಬ್ಯಾಂಕಿನ ಆನ್‌ಲೈನ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಮೇ 21ರಿಂದ 23ರ ಅವಧಿಯಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್‌ನ ಯೊನೊ, ಯೊನೊ ಲೈಟ್ ಮತ್ತು ಯುಪಿಐ ಸೇವೆಗಳು ಕೆಲ ಗಂಟೆಗಳ ಕಾಲ ಕಾರ್ಯ ನಿರ್ವಹಿಸಿರಲಿಲ್ಲ.
ದೇಶದಲ್ಲಿ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ, 85 ಮಿಲಿಯನ್ ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು 19 ಮಿಲಿಯನ್ ಮೊಬೈಲ್ ಬ್ಯಾಂಕಿಂಗ್ ಬಳಕೆದಾರರನ್ನು ಹೊಂದಿದೆ. ಯೊನೊದಲ್ಲಿ 34.5 ಮಿಲಿಯನ್ ನೋಂದಾಯಿತ ಬಳಕೆದಾರರು ಮತ್ತು 9 ಮಿಲಿಯನ್ ಗ್ರಾಹಕರು ನಿತ್ಯ ಲಾಗಿನ್ ಆಗುತ್ತಾರೆ ಎಂದು ಎಸ್‌ಐಬಿ ಹೇಳಿದೆ.