ETV Bharat / business

ಬ್ಯಾಡ್ ಬ್ಯಾಂಕ್ ಅನುಷ್ಠಾನಕ್ಕೆ ಆರ್​ಬಿಐನಿಂದ ಅನುಮೋದನೆ ಪಡೆದ ಎಸ್​ಬಿಐ

ಮೊದಲಿಗೆ ಕೇವಲ 38 ಬ್ಯಾಂಕ್​ ಖಾತೆಗಳಿಂದ 82,845 ಕೋಟಿ ರೂಪಾಯಿ ವಸೂಲಿಯಾಗದ ಸಾಲವಿದ್ದು, ಅಂತಹ ಸಾಲವನ್ನು ಬ್ಯಾಡ್ ಬ್ಯಾಂಕ್​ಗೆ ವರ್ಗಾವಣೆ ಮಾಡಲು ಎಸ್​ಬಿಐ ಸಜ್ಜಾಗಿದೆ. ಈ ವರ್ಗಾವಣೆ ಪ್ರಕ್ರಿಯೆ ಹಲವು ಹಂತಗಳಲ್ಲಿ ಜರುಗಲಿದೆ ಎಂದು ತಿಳಿದುಬಂದಿದೆ.

SBI gets requisite approvals for setting up 'bad bank'
ಬ್ಯಾಡ್ ಬ್ಯಾಂಕ್ ಅನುಷ್ಠಾನಕ್ಕೆ ಆರ್​ಬಿಐನಿಂದ ಅನುಮೋದನೆ ಪಡೆದ ಎಸ್​ಬಿಐ
author img

By

Published : Jan 29, 2022, 9:54 AM IST

ಮುಂಬೈ: ಬ್ಯಾಡ್ ಬ್ಯಾಂಕ್ ಅನುಷ್ಠಾನಗೊಳಿಸುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೇರಿದಂತೆ ಹಲವೆಡೆಯಿಂದ ಅಗತ್ಯ ಅನುಮೋದನೆಗಳನ್ನು ಪಡೆಯಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಪಷ್ಟನೆ ನೀಡಿದೆ.

ಇದರ ಜೊತೆಗೆ ಭಾರತೀಯ ಸಾಲ ಪರಿಹಾರ ಕಂಪನಿ (IDRCL-India Debt Resolution Company) ಅನುಷ್ಠಾನಗೊಳಿಸಲೂ ಆರ್​ಬಿಐನಿಂದ ಅನುಮೋದನೆಗಳನ್ನು ಪಡೆಯಲಾಗಿದ್ದು, ಈಗಾಗಲೇ ಬ್ಯಾಡ್ ಬ್ಯಾಂಕ್ ಮತ್ತು ಭಾರತೀಯ ಸಾಲ ಪರಿಹಾರ ಕಂಪನಿಗಳು ಹಲವಡೆ ಕಾರ್ಯನಿರ್ವಹಿಸುತ್ತಿವೆ.

ಏನಿದು ಬ್ಯಾಡ್ ಬ್ಯಾಂಕ್?: ಬ್ಯಾಡ್ ಬ್ಯಾಂಕ್ ಎಂಬುದು ಆಡುಭಾಷೆಯಲ್ಲಿ ಕರೆಯಲಾಗುವ ಪದವಾಗಿದ್ದು, ಇದನ್ನು ರಾಷ್ಟ್ರೀಯ ಆಸ್ತಿ ಪುನರ್ನಿರ್ಮಾಣ ಕಂಪನಿ (NARCL- National Asset Reconstruction Company) ಎಂದು ವ್ಯಾವಹಾರಿಕ ಪರಿಭಾಷೆಯಲ್ಲಿ ಕರೆಯಲಾಗುತ್ತದೆ.

ಸರಳವಾಗಿ ಹೇಳುವುದಾದರೆ, ವಸೂಲಾಗದ ಸಾಲದ ಮೊತ್ತವನ್ನು ವಸೂಲಿ ಮಾಡುವ ಸಲುವಾಗಿರುವ ಸಂಸ್ಥೆಯೇ ಬ್ಯಾಡ್ ಬ್ಯಾಂಕ್ ಆಗಿದೆ. ಸಾರ್ವಜನಿಕ ವಲಯದ ಬ್ಯಾಂಕ್​ಗಳಲ್ಲಿ ವಸೂಲಿಯಾಗದ ಸಾಲಗಳನ್ನು ಈ ಬ್ಯಾಂಕ್​ಗೆ ವರ್ಗಾಯಿಸುವ ಮೂಲಕ ಬ್ಯಾಂಕ್​ಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲಾಗುತ್ತದೆ. ಒಂದು ಬಾರಿ ವರ್ಗಾವಣೆಯಾದ ಸಾಲವನ್ನು ಕೊನೆಯ ತನಕ ನಿರ್ವಹಿಸುವ ಜವಾಬ್ದಾರಿ ಈ ಬ್ಯಾಡ್ ಬ್ಯಾಂಕ್ ಮೇಲಿದೆ.

ಇದನ್ನೂ ಓದಿ: ವಿಶ್ವಾದ್ಯಂತ ಬಂಗಾರಕ್ಕೆ ಹೆಚ್ಚಿದ ಬೇಡಿಕೆ: ಇಟಿಎಫ್​​​​​​​​​​​​​​ ಭಾರಿ ಕುಸಿತ!

ಮೊದಲಿಗೆ ಕೇವಲ 38 ಬ್ಯಾಂಕ್​ ಖಾತೆಗಳಿಂದ 82,845 ಕೋಟಿ ರೂಪಾಯಿ ವಸೂಲಿಯಾಗದ ಸಾಲವಿದ್ದು, ಅಂತಹ ಸಾಲವನ್ನು ಬ್ಯಾಡ್ ಬ್ಯಾಂಕ್​ಗೆ ವರ್ಗಾವಣೆ ಮಾಡಲು ಎಸ್​ಬಿಐ ಸಜ್ಜಾಗಿದೆ. ಈ ವರ್ಗಾವಣೆ ಪ್ರಕ್ರಿಯೆ ಹಲವು ಹಂತಗಳಲ್ಲಿ ಜರುಗಲಿದೆ ಎಂದು ತಿಳಿದು ಬಂದಿದೆ.

ಮೊದಲ ಹಂತದಲ್ಲಿ 15 ಬ್ಯಾಂಕ್ ಖಾತೆಗಳ ಸುಮಾರು 50,335 ಕೋಟಿ ವಸೂಲಾಗದ ಸಾಲದ ಜವಾಬ್ದಾರಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಡ್ ಬ್ಯಾಂಕ್​ಗೆ ವರ್ಗಾವಣೆ ಮಾಡಲಿದೆ. ಇದೇ ಹಣಕಾಸು ವರ್ಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.