ETV Bharat / business

ವಿದ್ಯುತ್, ಸಿಲಿಂಡರ್, ಟೆಲಿಫೋನ್​, ನೀರಿನ ಬಿಲ್ ಪಾವತಿಯ 'ನ್ಯಾಚ್' ಡಿಜಿಟಲ್​ ಸಿಸ್ಟಂ 24x7 ಲಭ್ಯ - ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ

ಪ್ರಸ್ತುತ, ನ್ಯಾಚ್​ ಪಾವತಿ ವ್ಯವಸ್ಥೆಯು ಬ್ಯಾಂಕ್ ಕೆಲಸದ ದಿನಗಳಲ್ಲಿ ಮಾತ್ರವೇ ಲಭ್ಯವಿದೆ. ಆಗಸ್ಟ್​ನಿಂದ 24x7 ಲಭ್ಯವಾಗಲಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ನಿರ್ವಹಿಸುತ್ತಿರುವ ಬೃಹತ್ ಪಾವತಿ ವ್ಯವಸ್ಥೆ ಜಾಲ ನ್ಯಾಚ್, ಲಾಭಾಂಶ, ಬಡ್ಡಿ, ಸಂಬಳ ಮತ್ತು ಪಿಂಚಣಿ ಪಾವತಿಯಂತಹ ಹಲವು ಸಾಲ ವರ್ಗಾವಣೆಗೆ ಅನುಕೂಲ ಮಾಡಿಕೊಡುತ್ತಿದೆ.

RBI
RBI
author img

By

Published : Jun 4, 2021, 2:15 PM IST

ಮುಂಬೈ: ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (ನ್ಯಾಚ್) ವಾರದ ಎಲ್ಲಾ ದಿನಗಳಲ್ಲಿ 2021ರ ಆಗಸ್ಟ್ 1ರಿಂದ ಲಭ್ಯವಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಿಳಿಸಿದೆ.

ಪ್ರಸ್ತುತ, ಪಾವತಿ ವ್ಯವಸ್ಥೆಯು ಬ್ಯಾಂಕ್ ಕೆಲಸದ ದಿನಗಳಲ್ಲಿ ಮಾತ್ರವೇ ಲಭ್ಯವಿದೆ. ಆಗಸ್ಟ್​ನಿಂದ 24x7 ಲಭ್ಯವಾಗಲಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ನಿರ್ವಹಿಸುತ್ತಿರುವ ಬೃಹತ್ ಪಾವತಿ ವ್ಯವಸ್ಥೆ ಜಾಲ ನ್ಯಾಚ್, ಲಾಭಾಂಶ, ಬಡ್ಡಿ, ಸಂಬಳ ಮತ್ತು ಪಿಂಚಣಿ ಪಾವತಿಯಂತಹ ಹಲವು ಸಾಲ ವರ್ಗಾವಣೆಗೆ ಅನುಕೂಲ ಮಾಡಿಕೊಡುತ್ತಿದೆ.

ಇದನ್ನೂ ಓದಿ: ಭಾರತದ ವಿದೇಶಿ ವಿನಿಮಯ ನಿಧಿ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಏರಿಕೆ

ವಿದ್ಯುತ್, ಸಿಲಿಂಡರ್, ದೂರವಾಣಿ, ನೀರು, ಸಾಲಗಳ ಆವರ್ತಕ ಕಂತು, ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆ ಮತ್ತು ವಿಮಾ ಪ್ರೀಮಿಯಂಗೆ ಸಂಬಂಧಿಸಿದ ಪಾವತಿಗಳನ್ನು ಸಂಗ್ರಹಿಸಲು ಇದು ಅನುಕೂಲ ಮಾಡಿಕೊಡುತ್ತದೆ.

ಗ್ರಾಹಕರ ಅನುಕೂಲವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ರಿಯಲ್ ಟೈಮ್​ ಗ್ರಾಸ್ ಸೆಟ್ಲ್​ಮೆಂಟ್​ನ (ಆರ್‌ಟಿಜಿಎಸ್) 24x7 ಲಭ್ಯತೆ ಹೆಚ್ಚಿಸಲಿದೆ. ಪ್ರಸ್ತುತ ಬ್ಯಾಂಕ್ ಕೆಲಸದ ದಿನಗಳಲ್ಲಿ ಲಭ್ಯವಿರುವ ನ್ಯಾಚ್, ಆಗಸ್ಟ್‌ನಿಂದ ವಾರದ ಎಲ್ಲಾ ದಿನಗಳಲ್ಲಿ ಬಳಕೆ ಮಾಡಬಹುದಾಗಿದೆ.

ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ನ್ಯಾಚ್ ಜನಪ್ರಿಯ ಮತ್ತು ಪ್ರಮುಖ ನೇರ ಲಾಭ ವರ್ಗಾವಣೆಯ (ಡಿಬಿಟಿ) ವಿಧಾನವಾಗಿ ಹೊರಹೊಮ್ಮಿದೆ. ಪ್ರಸ್ತುತ ಕೋವಿಡ್​ -19 ಅವಧಿಯಲ್ಲಿ ಸರ್ಕಾರದ ಸಬ್ಸಿಡಿಗಳನ್ನು ಸಮಯೋಚಿತ ಮತ್ತು ಪಾರದರ್ಶಕ ರೀತಿಯಲ್ಲಿ ವರ್ಗಾಯಿಸಲು ಇದು ಸಹಾಯ ಮಾಡಿದೆ ಎಂದು ಆರ್‌ಬಿಐ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.