ತಿರುಪತಿ(ಆಂಧ್ರಪ್ರದೇಶ): ಭಾರತದ ಅತಿ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ತಿರುಪತಿ ತಿರುಮಲದ ಬಾಲಾಜಿ ದೇವಸ್ಥಾನದ ಆದಾಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ಆಂಧ್ರಪ್ರದೇಶದಲ್ಲಿನ ಟಿಟಿಡಿ ಟ್ರಸ್ಟ್‌ಗೆ 2018-19ರ ವಿತ್ತೀಯ ವರ್ಷದಲ್ಲಿ ಒಟ್ಟು ₹ 507 ಕೋಟಿ ರೂಪಾಯಿ ದೇಣಿಗೆ ಬಂದಿದೆ. ಇದು ಈ ಹಿಂದಿನ ವರ್ಷಕ್ಕಿಂತ ₹ 206 ಕೋಟಿ ಅಧಿಕ ಮೊತ್ತ ಸಂಗ್ರಹವಾಗಿದೆ. 2017-18ರ ಹಣಕಾಸು ವರ್ಷದಲ್ಲಿ ₹ 301 ಕೋಟಿ ದೇಗುಲದ ಹುಂಡಿಗೆ ಹರಿದು ಬಂದಿತ್ತು.
ದೇವಸ್ಥಾನ ಟ್ರಸ್ಟ್‌ಗೆ ಅತ್ಯಧಿಕ ಪ್ರಮಾಣದ ಹಣ ಹುಂಡಿಯಿಂದಲೇ ಸಂದಾಯವಾಗುತ್ತಿದೆ. ಈ ಬಾರಿ ತಿರುಪತಿ ದೇಗುಲದ ಹುಂಡಿಯಲ್ಲಿ ₹ 1,214 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಮೊತ್ತ ₹ 67 ಕೋಟಿ ಹೆಚ್ಚಳವಾಗಿದೆ. 2017-18ರ ಆರ್ಥಿಕ ವರ್ಷದಲ್ಲಿ ಹುಂಡಿಗೆ ₹ 1, 147 ಕೋಟಿ ಹರಿದು ಬಂದಿತ್ತು.
2018-19ರಲ್ಲಿ ಅನ್ನ ಪ್ರಸಾದಂ ಟ್ರಸ್ಟ್‌ಗೆ ₹ 140 ಕೋಟಿ ಸಂದಾಯವಾಗಿದೆ. ಹಿಂದಿನ ವರ್ಷ ₹ 127 ಕೋಟಿ ಸಂಗ್ರಹವಾಗಿತ್ತು. ಬಾಲಾಜಿ ದುರ್ಬಲರ ಸರ್ಜರಿ, ಸಂಶೋಧನೆ ಹಾಗೂ ಪುನರ್ವಸತಿ ಸಂಸ್ಥೆ (ಬಿಐಆರ್‌ಆರ್‌ಡಿ) ಟ್ರಸ್ಟ್‌ಗೆ ₹ 21 ಕೋಟಿ, ಎಸ್‌ವಿ ಸರ್ವ ಶ್ರೇಯ ಟ್ರಸ್ಟ್‌ಗೆ ₹ 10.40 ಕೋಟಿ ಹಾಗೂ ಎಸ್‌ವಿ ವಿದ್ಯಾ ದಾನ ಟ್ರಸ್ಟ್‌ಗೆ ₹ 11.37 ಕೋಟಿ ಹರಿದು ಬಂದಿದೆ.