ETV Bharat / business

ಎಸ್​ಬಿಐಗಿಂತ ಹೆಚ್ಚಾಗಿ ಎಲ್​ಐಸಿಗೆ ಹರಿದು ಹೋಗುತ್ತಿದೆ ಭಾರತೀಯರ ಉಳಿತಾಯದ ಹಣ: ಯುಬಿಎಸ್ ವರದಿ - Rs 10 out of every Rs 100 saved by Indian household goes to LIC

ಭಾರತೀಯರು ಪ್ರತಿ ವರ್ಷ ಉಳಿಸುವ ಪ್ರತಿ 100 ರೂ.ನಲ್ಲಿ 10 ರೂ. ಎಲ್ಐಸಿಗೆ ಹೋಗುತ್ತಿದೆ. ಇದು ಎಸ್‌ಬಿಐನಲ್ಲಿನ ಠೇವಣಿಗಿಂತ ದೊಡ್ಡದಾಗಿದೆ ಎಂದು ವಿದೇಶಿ ಬ್ರೋಕರೇಜ್ ಯುಬಿಎಸ್ ವರದಿಯಲ್ಲಿ ತಿಳಿಸಲಾಗಿದೆ.

ಎಲ್​ಐಸಿ
ಎಲ್​ಐಸಿ
author img

By

Published : Feb 16, 2022, 4:30 PM IST

ನವದೆಹಲಿ: ಭಾರತೀಯರು ಉಳಿತಾಯ ಮಾಡುವ ಪ್ರತಿ100 ರೂಪಾಯಿಯಲ್ಲಿ,10 ರೂಪಾಯಿ ಎಲ್​ಐಸಿಗೆ ಹೋಗುತ್ತಿದೆ. ಇದರಿಂದ ಎಸ್​​ಬಿಐನಲ್ಲಿ ಇಡುವ ಠೇವಣಿಗಿಂತ ಎಲ್​ಐಸಿಯಲ್ಲಿಯೇ ಹೆಚ್ಚಾಗಿದೆ ಎಂದು ​ವಿದೇಶಿ ಬ್ರೋಕರೇಜ್​ ಯುಬಿಎಸ್​ನ ವರದಿಯಲ್ಲಿ ಹೇಳಲಾಗಿದೆ.

ಭಾರತೀಯರ ಬಹುಪಾಲು ಉಳಿತಾಯದ ಹಣ ಎಲ್​ಐಸಿಯ ಪಾಲಾಗುತ್ತಿದೆ. ಉದಾಹರಣೆಗೆ 100 ರೂ. ಉಳಿತಾಯ ಮಾಡಿದ್ರೆ, ಶೇ.10ರಷ್ಟು ಎಲ್​ಐಸಿಗೆ ಹೋಗುತ್ತಿದೆ. ಎಲ್​ಐಸಿ ಎಸ್‌ಬಿಐನ ಠೇವಣಿಗಿಂತ ಮುನ್ನಡೆ ಕಾಯ್ದುಕೊಂಡಿದೆ.

ಎಲ್ಐಸಿ ಐಪಿಒಗಾಗಿ SEBIಗೆ ಕರಡು ಪ್ರತಿಗಳನ್ನು ಸಲ್ಲಿಕೆ ಮಾಡಿದ್ದು, ಇದು ದೇಶದ ಅತೀದೊಡ್ಡ ಐಪಿಒ ಆಗಿ ಮೂಡಿಬರಲಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಎಲ್ಐಸಿ ಐಪಿಒ ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಕಾರ್ಯಕ್ರಮದ ಒಂದು ಭಾಗವಾಗಿದೆ. 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ಬಂಡವಾಳ ಹಿಂತೆಗೆತದ ಗುರಿ ತಲುಪಲು ಈ ಐಪಿಒ ನಿರ್ಣಾಯಕವಾಗಲಿದೆ.

ಇದನ್ನೂ ಓದಿ: ಕ್ರಿಪ್ಟೋ ನಿಷೇಧಿಸುವುದು ಭಾರತದ ಮಟ್ಟಿಗೆ ಉತ್ತಮ ಆಯ್ಕೆ: ಆರ್​ಬಿಐ ಡೆಪ್ಯುಟಿ ಗವರ್ನರ್​

2021 ಎಲ್​ಐಸಿಯೂ ದಾಖಲೆ ಮಟ್ಟದಲ್ಲಿ ಬಂಡವಾಳ - ಸಂಗ್ರಹವನ್ನು ಮಾಡಿದೆ. 2021 ರಲ್ಲಿ ಶೇ.32 ರಷ್ಟು ಚಿಲ್ಲರೆ ಹೂಡಿಕೆದಾರರು ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು ಶೇ.21ರಷ್ಟು IPO ಚಂದಾದಾರಿಕೆಯನ್ನು ಹೊಂದಿದ್ದಾರೆ.

ಭಾರತೀಯ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಬೋರ್ಡ್ (SEBI) ನ ಮಾರ್ಗಸೂಚಿಗಳ ಪ್ರಕಾರ, ನಿರಂತರ ಪೂರೈಕೆಯನ್ನು ಖಾತ್ರಿಪಡಿಸುವ ಮೂಲಕ 2 ವರ್ಷಗಳಲ್ಲಿ 10 ಪ್ರತಿಶತದಷ್ಟು ಮತ್ತು 5 ವರ್ಷಗಳಲ್ಲಿ 25 ಪ್ರತಿಶತದಷ್ಟು ಸಾರ್ವಜನಿಕ ಷೇರುಗಳನ್ನು ಅನುಮತಿಸಲು ಸರ್ಕಾರವು ತನ್ನ LIC ಪಾಲನ್ನು ಕಡ್ಡಾಯವಾಗಿ ದುರ್ಬಲಗೊಳಿಸಬೇಕಾಗುತ್ತದೆ ಎಂದು ಯುಬಿಎಸ್​​ ಹೇಳಿದೆ.

ಎಲ್​ಐಸಿಯು ಭಾರತೀಯ ಈಕ್ವಿಟಿಗಳಲ್ಲಿ ಸುಮಾರು 4 ಪ್ರತಿಶತ ಪಾಲನ್ನು ಹೊಂದಿದೆ. ಇದು ಸರ್ಕಾರದ ಅತಿದೊಡ್ಡ ಷೇರುದಾರನಾಗಿದೆ. ಎಲ್ಐಸಿ ಐಪಿಒಗಾಗಿ ಡ್ರಾಫ್ಟ್ ಪ್ರಾಸ್ಪೆಕ್ಟಸ್ ಅನ್ನು ಈಗಾಗಲೇ ಸಲ್ಲಿಸಿದೆ. ಮಾರ್ಚ್​ ಅಂತ್ಯದ ವೇಳೆಗೆ ಎಲ್​​ಐಸಿ ಐಪಿಒ ಮಾರುಕಟ್ಟೆಗೆ ಬರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.