ETV Bharat / business

17 ರಾಜ್ಯಗಳಿಗೆ ₹ 9,871 ಕೋಟಿ ಆದಾಯ ಕೊರತೆ ಅನುದಾನ ಬಿಡುಗಡೆ: ಕರ್ನಾಟಕಕ್ಕೆ ಸಿಕ್ಕಿದೆಷ್ಟು? - 15ನೇ ಹಣಕಾಸು ಆಯೋಗ

ಸಂವಿಧಾನದ ವಿಧಿ 275ರ ಅಡಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಂಚಿಕೆ ನಂತರದ ಆದಾಯ ಕೊರತೆಯ ಅನುದಾನವನ್ನು ಒದಗಿಸುತ್ತದೆ. ಹಂಚಿಕೆ ನಂತರದ ಆದಾಯ ಕೊರತೆಯನ್ನು ಸರಿದೂಗಿಸಲು ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಈ ಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡಲಾಗುತ್ತದೆ. 15ನೇ ಹಣಕಾಸು ಆಯೋಗವು ರಾಜ್ಯಗಳಿಗೆ ಹಂಚಿಕೆ ನಂತರದ ಕೊರತೆಯ ಅನುದಾನಕ್ಕೆ ಶಿಫಾರಸು ಮಾಡಿತ್ತು.

Cash
Cash
author img

By

Published : Jun 9, 2021, 2:33 PM IST

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು 17 ರಾಜ್ಯಗಳಿಗೆ 2021-22ನೇ ಸಾಲಿನ ಹಂಚಿಕೆ ನಂತರದ ಆದಾಯ ಕೊರತೆಯ (ಪಿಡಿಆರ್​ಡಿ) 3ನೇ ತಿಂಗಳ ಕಂತು 9,871 ಕೋಟಿ ರೂ. ಬಿಡುಗಡೆ ಮಾಡಿದೆ.

ಈ ಮೂರನೆ ಕಂತಿನ ಬಿಡುಗಡೆಯೊಂದಿಗೆ ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾದ ಹಂಚಿಕೆ ನಂತರದ ಆದಾಯ ಕೊರತೆಯ ಒಟ್ಟು ಮೊತ್ತ 29,613 ಕೋಟಿ ರೂ. ಆಗಿದೆ.

ರಾಜ್ಯವಾರು ಹಂಚಿಕೆ
ರಾಜ್ಯವಾರು ಹಂಚಿಕೆ

ಸಂವಿಧಾನದ ವಿಧಿ 275ರ ಅಡಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಂಚಿಕೆ ನಂತರದ ಆದಾಯ ಕೊರತೆಯ ಅನುದಾನವನ್ನು ಒದಗಿಸುತ್ತದೆ. ಹಂಚಿಕೆ ನಂತರದ ಆದಾಯ ಕೊರತೆ ಸರಿದೂಗಿಸಲು ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಈ ಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡಲಾಗುತ್ತದೆ. 15ನೇ ಹಣಕಾಸು ಆಯೋಗವು ರಾಜ್ಯಗಳಿಗೆ ಹಂಚಿಕೆ ನಂತರದ ಕೊರತೆಯ ಅನುದಾನಕ್ಕೆ ಶಿಫಾರಸು ಮಾಡಿತ್ತು.

ಓದಿ: ಹ್ಯುಂಡೈ ಅಲ್ಕಾಜಾರ್‌​ ಎಸ್​ಯುವಿ ಬುಕ್ಕಿಂಗ್ ಶುರು

ಆಂಧ್ರಪ್ರದೇಶ, ಅಸ್ಸೋಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಪಂಜಾಬ್, ರಾಜಾಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಹಂಚಿಕೆ ನಂತರದ ಆದಾಯ ಕೊರತೆ ಅನುದಾನ ಪಡೆದ ರಾಜ್ಯಗಳಾಗಿವೆ.

ಈ ಅನುದಾನವನ್ನು ಪಡೆಯಲು ರಾಜ್ಯಗಳಿಗೆ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು ಆಯೋಗವು ಆದಾಯದ ಮೌಲ್ಯಮಾಪನ ಮತ್ತು ರಾಜ್ಯದ ಖರ್ಚಿನ ನಡುವಿನ ಅಂತರವನ್ನು ಆಧರಿಸಿ ನಿರ್ಧರಿಸುತ್ತದೆ. 2021-22ರ ಆರ್ಥಿಕ ವರ್ಷಕ್ಕೆ ಮೌಲ್ಯಮಾಪನ ಹಂಚಿಕೆಯನ್ನು ಆಯೋಗವು ಗಣನೆಗೆ ತೆಗೆದುಕೊಂಡಿದೆ.

15ನೇ ಹಣಕಾಸು ಆಯೋಗವು 2021-22ನೇ ಸಾಲಿಗೆ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ರೂ. ಹಂಚಿಕೆ ನಂತರದ ಆದಾಯ ಕೊರತೆಯ ಅನುದಾನವನ್ನು ಶಿಫಾರಸು ಮಾಡಿದೆ. ಈ ಅನುದಾನವನ್ನು 12 ಮಾಸಿಕ ಕಂತುಗಳಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.