ETV Bharat / business

ಮಾರ್ಚ್​​ನಲ್ಲಿ ಚಿಲ್ಲರೆ ಹಣದುಬ್ಬರ ಶೇ 5.52ಕ್ಕೆ ಏರಿಕೆ - consumer inflation

ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಆಹಾರದ ಬಾಸ್ಕೆಟ್​​ಲ್ಲಿನ ಬೆಲೆ ಏರಿಕೆಯ ಪ್ರಮಾಣವು ಮಾರ್ಚ್‌ನಲ್ಲಿ ಶೇ 4.94ಕ್ಕೆ ಏರಿಕೆಯಾಗಿದೆ. 'ಇಂಧನ ಮತ್ತು ವಿದ್ಯುತ್​' ವಿಭಾಗದಲ್ಲಿ ಹಣದುಬ್ಬರವು ಫೆಬ್ರವರಿಯಲ್ಲಿ ಶೇ 3.53ರಷ್ಟಿತ್ತು.

Retail
Retail
author img

By

Published : Apr 12, 2021, 6:59 PM IST

ನವದೆಹಲಿ: ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದಾಗಿ ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 5.52ಕ್ಕೆ ಏರಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಫೆಬ್ರವರಿಯಲ್ಲಿ ಶೇ 5.03 ರಷ್ಟಿತ್ತು.

ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಆಹಾರದ ಬಾಸ್ಕೆಟ್​​ಲ್ಲಿನ ಬೆಲೆ ಏರಿಕೆಯ ಪ್ರಮಾಣವು ಮಾರ್ಚ್‌ನಲ್ಲಿ ಶೇ 4.94ಕ್ಕೆ ಏರಿಕೆಯಾಗಿದೆ. 'ಇಂಧನ ಮತ್ತು ವಿದ್ಯುತ್​' ವಿಭಾಗದಲ್ಲಿ ಹಣದುಬ್ಬರವು ಫೆಬ್ರವರಿಯಲ್ಲಿ ಶೇ 3.53ರಷ್ಟಿತ್ತು.

ಇದನ್ನೂ ಓದಿ: ಅದಾನಿ ಗ್ರೂಪ್​​ ಜತೆ ಫ್ಲಿಪ್‌ಕಾರ್ಟ್ ಜಂಟಿ ಒಪ್ಪಂದ: 2,500 ನೇರ ಉದ್ಯೋಗ ಸೃಷ್ಟಿ

ಈ ತಿಂಗಳ ಆರಂಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 2020 - 21ರ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ 5ರಷ್ಟು ಮತ್ತು ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತ್ರೈಮಾಸಿಕಗಳಲ್ಲಿ ಶೇ 5.2ರಷ್ಟು ಎಂದು ಅಂದಾಜಿಸಿತ್ತು.

ಸತತ ಆರು ತಿಂಗಳುಗಳವರೆಗೆ (2020ರ ಜೂನ್- ನವೆಂಬರ್ 2020) ಶೇ 6ರ ಮೇಲಿನ ಮಿತಿ ಹೆಚ್ಚಳದ ನಂತರ, ಸಿಪಿಐ ಹಣದುಬ್ಬರವು 2020ರ ಡಿಸೆಂಬರ್‌ನಲ್ಲಿ ಕುಸಿಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.