ನವದೆಹಲಿ: ಕೈಗಾರಿಕಾ ಕಾರ್ಮಿಕರ ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 5.91ಕ್ಕೆ ಏರಿಕೆಯಾಗಿದೆ.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಇದು 5.62ರಷ್ಟಿತ್ತು. ಮುಖ್ಯವಾಗಿ ಕೆಲವು ಆಹಾರ ಪದಾರ್ಥಗಳ ಹೆಚ್ಚಿನ ಬೆಲೆಗಳಿಂದಾಗಿ ಏರಿಕೆಯಾಗಿದೆ. ಎಲ್ಲಾ ವಸ್ತುಗಳ ಆಧಾರದ ಮೇಲೆ ವರ್ಷದಿಂದ ವರ್ಷಕ್ಕೆ (ಚಿಲ್ಲರೆ) ಹಣದುಬ್ಬರವು 2020ರ ಅಕ್ಟೋಬರ್‌ನಲ್ಲಿ ಶೇ 5.91ರಷ್ಟು ಇತ್ತು. ಇದು ಹಿಂದಿನ ತಿಂಗಳಿನ ಶೇ 5.62ರಷ್ಟು ಮತ್ತು ಹಿಂದಿನ ವರ್ಷದ ಇದೇ ತಿಂಗಳಲ್ಲಿ ಶೇ 7.62ರಷ್ಟು ಎಂದು ಕಾರ್ಮಿಕ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಮಾಸಿಕ ಶೇಕಡಾವಾರು ಬದಲಾವಣೆಯಲ್ಲಿ ಸೂಚ್ಯಂಕವು 2020ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ಶೇ 1.19ರಷ್ಟು ಹೆಚ್ಚಳವಾಗಿದೆ. ಇದು ಹಿಂದಿನ ವರ್ಷದ ಈ ತಿಂಗಳಲ್ಲಿ ಶೇ 0.93ರಷ್ಟು ಹೆಚ್ಚಳವಾಗಿತ್ತು.
ಪ್ರಸ್ತುತ ಸೂಚ್ಯಂಕದಲ್ಲಿ ಗರಿಷ್ಠ ಏರಿಕೆಯು ಆಹಾರ ಮತ್ತು ಪಾನೀಯ ವಿಭಾಗದಲ್ಲಿ ಶೇ1.29 ಏರಿಕೆ ದಾಖಲಾಗಿದೆ. ಅರ್ಹರ್ ಬೇಳೆ, ಕೋಳಿ ಮಾಂಸ, ಕೋಳಿ ಮೊಟ್ಟೆ, ಮೇಕೆ ಮಾಂಸ, ಸಾಸಿವೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಬದನೆಕಾಯಿ, ಎಲೆಕೋಸು, ಕ್ಯಾರೆಟ್, ಹೂಕೋಸು, ಹಸಿರು ಮೆಣಸಿನಕಾಯಿ, ಸೋರೆಕಾಯಿ, ಬೆಂಡೆಕಾಯಿ, ಈರುಳ್ಳಿ, ಬಟಾಣಿ, ಆಲೂಗಡ್ಡೆ, ದೇಶೀಯ ವಿದ್ಯುತ್, ವೈದ್ಯರ ಶುಲ್ಕ, ಬಸ್ ದರ ಇತ್ಯಾದಿಗಳಿಂದಾಗಿ ಸೂಚ್ಯಂಕ ಹೆಚ್ಚಳವಾಗಿದೆ. ಆದರೆ ಗೋಧಿ, ಮೀನು, ಟೊಮೆಟೊ, ಸೇಬು ಇತ್ಯಾದಿಗಳು ಸೂಚ್ಯಂಕವು ಕೆಳಗಿಳಿದಿವೆ.
ಎಲ್ಲಾ ವಸ್ತುಗಳ ಆಧಾರದ ಮೇಲೆ ಹಣದುಬ್ಬರವು 2020ರ ಅಕ್ಟೋಬರ್‌ನಲ್ಲಿ ಶೇ 5.91ರಷ್ಟಿದ್ದು, ಹಿಂದಿನ ತಿಂಗಳು ಶೇ 5.62ರಷ್ಟಿತ್ತು. ಹಿಂದಿನ ವರ್ಷದ ಇದೇ ತಿಂಗಳಲ್ಲಿ ಶೇ 7.62ರಷ್ಟಿತ್ತು. ಹಾಗೆಯೇ, ಆಹಾರ ಹಣದುಬ್ಬರವು ಹಿಂದಿನ ತಿಂಗಳು ಶೇ 7.51ರಷ್ಟಿದ್ದರೆ, ಅಕ್ಟೋಬರ್‌ನಲ್ಲಿ ಶೇ .8.21ರಷ್ಟಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ಶೇ 8.60ರಷ್ಟಿತ್ತು.