ETV Bharat / business

RBI ಹೊಸ ರೂಲ್ಸ್​​: ATMನಲ್ಲಿ ಹಣ ಇಲ್ಲದಿದ್ದರೆ ಬ್ಯಾಂಕ್​ಗಳಿಗೆ 10 ಸಾವಿರ ರೂ. ದಂಡ!

ಅಕ್ಟೋಬರ್ ತಿಂಗಳಿಂದ ಬ್ಯಾಂಕ್​ಗಳಿಗೆ ಮತ್ತೊಂದು ಕಠಿಣ ರೂಲ್ಸ್ ಜಾರಿಗೊಳ್ಳಲಿದ್ದು, ಈ ತಿಂಗಳಿಂದ ಎಲ್ಲ ಎಟಿಎಂಗಳಲ್ಲಿ ಕಡ್ಡಾಯವಾಗಿ ಹಣ ಜಮಾವಣೆ ಮಾಡಬೇಕಾಗುತ್ತದೆ.

RBI
RBI
author img

By

Published : Aug 11, 2021, 7:30 PM IST

ಮುಂಬೈ(ಮಹಾರಾಷ್ಟ್ರ)​: ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ಬ್ಯಾಂಕಿಂಗ್​​ ಕ್ಷೇತ್ರದಲ್ಲಿ ಈಗಾಗಲೇ ಅನೇಕ ರೀತಿಯ ಹೊಸ ಬದಲಾವಣೆ ತಂದಿದ್ದು, ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದ ಬ್ಯಾಂಕ್​​ ಗ್ರಾಹಕರಿಗೆ ಈ ಹಿಂದೆ ಆಗುತ್ತಿದ್ದ ಕಿರಿಕಿರಿ ತಪ್ಪಿಸಿದಂತಾಗುತ್ತದೆ.

ಆಗಸ್ಟ್​​ 1ರಿಂದಲೇ ಎಟಿಎಂ ವಿನಿಮಯ ಶುಲ್ಕ ಹೆಚ್ಚಳ ಮಾಡಿ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಿದ್ದ ಆರ್​ಬಿಐ ಇದೀಗ ಬ್ಯಾಂಕ್​ಗಳಿಗೆ ಶಾಕಿಂಗ್​ ನ್ಯೂಸ್​ ನೀಡಿದೆ. ಇದೀಗ ಆರ್​ಬಿಐ ಹೊಸ ನಿಯಮದ ಪ್ರಕಾರ ಬರುವ ಅಕ್ಟೋಬರ್​ ತಿಂಗಳಿಂದ ಬ್ಯಾಂಕ್​​ನ ಎಲ್ಲ ಎಟಿಎಂಗಳಲ್ಲಿ ಕಡ್ಡಾಯವಾಗಿ ಹಣ ಇರಲೇಬೇಕು. ಇದರಲ್ಲಿ ಬ್ಯಾಂಕ್​ಗಳು ವಿಫಲವಾದರೆ 10 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ.

ಎಟಿಎಂ ಮೂಲಕ ಹಣ ವಿತ್​ ಡ್ರಾ ಮಾಡುವ ಗ್ರಾಹಕರಿಗೆ ಆಗುತ್ತಿದ್ದ ತೊಂದರೆ ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಎಟಿಎಂನಲ್ಲಿ ಇನ್ಮುಂದೆ ಹಣವಿಲ್ಲದಿದ್ದರೆ ಆರ್​ಬಿಐಗೆ 10 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಆರ್​ಬಿಐ ಇದಕ್ಕೆ ಸಂಬಂಧಿಸಿದಂತೆ ಮಹತ್ವದ ಸುತ್ತೋಲೆ ಹೊರಡಿಸಿದೆ. ವಿವಿಧ ಬ್ಯಾಂಕ್​​ಗಳ ಎಟಿಎಂನಲ್ಲಿ ನಗದು ಹಣ ಖಾಲಿಯಾದ ಬಳಿಕ ಕೂಡ ಅವುಗಳಲ್ಲಿ ಬ್ಯಾಂಕ್​​ ಹಣ ತುಂಬುತ್ತಿಲ್ಲ. ಇದರಿಂದ ಅನೇಕ ಗ್ರಾಹಕರು ತೊಂದರೆಗೊಳಗಾಗುತ್ತಿದ್ದು, ಅದನ್ನ ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿರಿ: ಗ್ರಾಹಕರ ಗಮನಕ್ಕೆ: ಇಂದಿನಿಂದ ಎಟಿಎಂ ವಿನಿಮಯ ಶುಲ್ಕ ಹೆಚ್ಚಳ

ಎಟಿಂಎಗಳಿಗೆ ತೆರಳಿದಾಗ ಅಲ್ಲಿ ಕ್ಯಾಶ್ ಇಲ್ಲ ಎಂದು ತೋರಿಸಿದಾಗ ಈ ನಿಯಮ ಅನ್ವಯವಾಗಲಿದ್ದು, ಆರ್​ಬಿಐ ನಿಯೋಜಿತ ಅಧಿಕಾರಿಗಳು ಇದರ ಮೇಲೆ ಕೆಲಸ ಮಾಡಲಿದ್ದಾರೆ. ಆಗಸ್ಟ್​ 1ರಿಂದಲೇ ಬೇರೆ ಬ್ಯಾಂಕಿನ ಎಟಿಎಂ ಮೂಲಕ ವಿತ್​ ಡ್ರಾ ಮಾಡುವ ಪ್ರತಿಯೊಂದು ಹಣಕಾಸು ವಹಿವಾಟಿನಲ್ಲೂ ಎಟಿಎಂ ಇಂಟರ್ಚೇಂಜ್ ಶುಲ್ಕವನ್ನು 15 ರಿಂದ 17 ರೂ.ಗೆ ಹೆಚ್ಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.