ಮುಂಬೈ: ಕೊರೊನಾ ಮಹಾಮಾರಿಯ ನಡುವೆ ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇಂದು ಮಧ್ಯಾಹ್ನ 2 ಗಂಟೆಗೆ ವಾರ್ಷಿಕ ಸಾಮಾನ್ಯ ಸಭೆ ನಡೆಸಲಿದೆ.
ಇದೇ ಮೊದಲ ಬಾರಿಗೆ ರಿಲಯನ್ಸ್ ಇಂಡಸ್ಟ್ರೀಸ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದೆ. ಈ ವೇಳೆ, ಡಿಜಿಟಲ್ ದೈತ್ಯ ಫೇಸ್ಬುಕ್ ಮುಂತಾದ ಕಂಪನಿಗಳ ನಡುವೆ ಕೊರೊನಾ ನಂತರದ ಕೆಲವು ಯೋಜನೆಗಳನ್ನು ಘೋಷಿಸಲಿದ್ದಾರೆ ಹಾಗೂ 2021ರ ವೇಳೆ ಸಾಲ ರಹಿತ ಸಂಸ್ಥೆ ಮಾಡುವ ಬಗ್ಗೆ ಮುಖೇಶ್ ಅಂಬಾನಿ ಮಾತನಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ.
ರಿಲಯನ್ಸ್ನ ಅಂಗ ಸಂಸ್ಥೆಯಾದ ಜಿಯೋ ಪ್ಲಾಟ್ಫಾರ್ಮ್ಸ್ ಈ ಬಾರಿ ಅತಿ ಹೆಚ್ಚು ಕಂಪನಿಗಳೊಡನೆ ವ್ಯಾಪಾರ ವಹಿವಾಟು ಆರಂಭಿಸಿದೆ. ಫೇಸ್ಬುಕ್, ಕ್ವಾಲ್ಕಂ, ಜನರಲ್ ಅಟ್ಲಾಂಟಿಕ್ ಸೇರಿದಂತೆ ಹಲವಾರು ವಿದೇಶಿ ಕಂಪನಿಗಳ ಸುಮಾರು 1.2 ಲಕ್ಷ ಕೋಟಿಯಷ್ಟು ಹೂಡಿಕೆಯನ್ನು ಆಕರ್ಷಿಸಿದೆ. ಈ ಹಿನ್ನೆಲೆಯಲ್ಲಿ ವಾರ್ಷಿಕ ಸಾಮಾನ್ಯ ಸಭೆ ಮಹತ್ವ ಪಡೆದು ಕೊಂಡಿದೆ.