ಹೈದರಾಬಾದ್ : ಬ್ಯಾಂಕ್ಗಳ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಆರ್‌ಬಿಐನ ಆಂತರಿಕ ಕಾರ್ಯ ಗುಂಪು (ಐಡಬ್ಲ್ಯುಜಿ) ಕೆಲವು ಮಾರ್ಗಸೂಚಿಗಳನ್ನೊಳಗೊಂಡ ವರದಿಯನ್ನು ಆರ್‌ಬಿಐಗೆ ಸಲ್ಲಿಸಿದೆ. ಈ ವರದಿಯೂ ಮಾಜಿ ಕೇಂದ್ರೀಯ ಬ್ಯಾಂಕರ್‌ಗಳು, ತಜ್ಞರು ಮತ್ತು ಸಂಶೋಧನಾ ಸಂಸ್ಥೆಗಳ ಟೀಕೆಗೆ ಗುರಿಯಾಗಿದೆ.
ನವೆಂಬರ್ 20 ರಂದು ಪಿ ಕೆ ಮೊಹಂತಿ ನೇತೃತ್ವದ ಅಧಿಕಾರಿಗಳ ತಂಡ 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ತಂದು, ದೊಡ್ಡ ಕಾರ್ಪೊರೇಟ್/ಕೈಗಾರಿಕಾ ಸಂಸ್ಥೆಗಳು, ಬ್ಯಾಂಕ್ಗಳನ್ನು ಸ್ಥಾಪಿಸಲು ಅನುಮತಿ ನೀಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ಗೆ ಶಿಫಾರಸು ಮಾಡಿದೆ.
“ಕೈಗಾರಿಕಾ ಸಂಸ್ಥೆಗಳಿಗೆ ಹಣಕಾಸು ಅಗತ್ಯವಿರುತ್ತದೆ ಮತ್ತು ಅವರು ಅದನ್ನು ಸುಲಭವಾಗಿ ಪಡೆಯಬಹುದು. ಹೌಸ್ ಬ್ಯಾಂಕ್ ಸಾಲಗಾರನ ಒಡೆತನದಲ್ಲಿದ್ದಾಗ ಉತ್ತಮ ಸಾಲವನ್ನು ಹೇಗೆ ಪಡೆಯಬಹುದು?” ಎಂದು ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಮತ್ತು ಆರ್‌ಬಿಐ ಮಾಜಿ ಉಪ ಗವರ್ನರ್ ವೈರಲ್ ಆಚಾರ್ಯ ಅವರು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರನೇ ದಿನ ಸ್ವಲ್ಪ ಚೇತರಿಕೆಯಾದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುಗಳ ಪ್ರಮಾಣ
ಆರ್‌ಬಿಐ 2016ರಲ್ಲಿ ಬಿಡುಗಡೆ ಮಾಡಿದ ಖಾಸಗಿ ಬ್ಯಾಂಕ್ ಪರವಾನಿಗೆ ಮಾರ್ಗಸೂಚಿಗಳು ದೊಡ್ಡ ಕೈಗಾರಿಕಾ ಮತ್ತು ವ್ಯಾಪಾರ ಸಂಸ್ಥೆಗಳನ್ನು ಅರ್ಹ ಘಟಕಗಳಾಗಿ ಮಾಡಿದ್ದು, ಒಟ್ಟು ಹೂಡಿಕೆಯ ಶೇ.10ರವರೆಗೆ ಅನುಮತಿ ನೀಡಿವೆ.
ಇದೇ ರೀತಿಯ ಅಭಿಪ್ರಾಯಗಳನ್ನು ಪ್ರತಿಧ್ವನಿಸುತ್ತಾ ಮ್ಯಾಕ್ವಾರಿ ರಿಸರ್ಚ್ ತನ್ನ ಇತ್ತೀಚಿನ ವರದಿಯಲ್ಲಿ ಹೀಗೆ ಹೇಳಿದೆ: “ಕಾರ್ಪೊರೇಟ್ ಸಂಸ್ಥೆಗಳಿಗೆ ಬ್ಯಾಂಕುಗಳನ್ನು ನಡೆಸಲು ಅವಕಾಶ ನೀಡಿದ ಅನುಭವವು ಆರ್‌ಬಿಐಗೆ ಬಹಳ ಕೆಟ್ಟದಾಗಿದೆ. (ಉದಾ: ಟೈಮ್ಸ್ ಬ್ಯಾಂಕ್, ಬ್ಯಾಂಕ್ ಆಫ್ ರಾಜಸ್ಥಾನ್ ಇತ್ಯಾದಿ).
ಆರ್‌ಬಿಐ ಇವುಗಳಿಗೆ ಅನುದಾನ ನೀಡುತ್ತದೆ ಎಂಬುದನ್ನು ನಾವು ನಂಬುವುದಿಲ್ಲ ಎಂದಿದೆ. ಚೆನ್ನೈ ಮೂಲದ 92 ವರ್ಷದ ಖಾಸಗಿ ಸಾಲಗಾರ ಲಕ್ಷ್ಮಿ ವಿಲಾಸ್ ಬ್ಯಾಂಕ್ ಕುಸಿದ ಕೆಲವೇ ದಿನಗಳಲ್ಲಿ ಈ ವರದಿಯನ್ನು ಬಿಡುಗಡೆ ಮಾಡಿರುವುದು ಹೆಚ್ಚಿನ ತಜ್ಞರನ್ನು ಅಚ್ಚರಿಗೊಳಿಸಿದೆ.