ETV Bharat / business

ರೆಪೋ ದರದಲ್ಲಿ ಮತ್ತೆ ಯಥಾಸ್ಥಿತಿ ಕಾಯ್ದಿರಿಸಿದ ಆರ್​ಬಿಐ.. - ಬ್ಯಾಂಕ್ ದರ ಹಾಗೂ ಎಂಎಸ್​ಎಲ್​ಆರ್ ದರ

ರೆಪೋ ದರ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯನ್ನು ಆರ್​ಬಿಐ ಕಾಯ್ದುಕೊಂಡಿದೆ..

RBI keeps repo rate unchanged at 4 pc
ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ​ದಾಸ್
author img

By

Published : Feb 5, 2021, 11:04 AM IST

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್​ನ ವಿತ್ತೀಯ ನೀತಿ ಸಮಿತಿ (ಎಂಪಿಸಿ) ಸಲಹೆ ಮೇರೆಗೆ ಈ ಬಾರಿ ಕೂಡ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿರುವುದಾಗಿ ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ​ದಾಸ್ ತಿಳಿಸಿದ್ದಾರೆ.

ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಫೆಬ್ರವರಿ 3ರಿಂದ ಇಂದಿನವರೆಗೆ ಸಭೆ ನಡೆಸಿರುವ ಹಣಕಾಸು ನೀತಿ ಸಮಿತಿಯು, ಪ್ರಸ್ತುತ ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿನ ಆರ್ಥಿಕ ಸ್ಥಿತಿ ಹಾಗೂ ಆರ್ಥಿಕ ಬೆಳವಣಿಗೆಗಳ ಕುರಿತು ಚರ್ಚಿಸಿದೆ. 2021-22ರ ಕೇಂದ್ರ ಬಜೆಟ್​ ಬಳಿಕ ಆರ್​ಬಿಐ ನಡೆಸಿರುವ ಮೊದಲ ಎಂಪಿಸಿ ಸಭೆ ಇದಾಗಿದೆ.

ರೆಪೋ, ರಿವರ್ಸ್​ ರೆಪೋ, ಬ್ಯಾಂಕ್ ದರದಲ್ಲಿ ಯಥಾಸ್ಥಿತಿ

ಸಭೆಯಲ್ಲಿ ಸರ್ವಾನುಮತದಿಂದ ರೆಪೋ ದರವನ್ನು ಶೇ.4 ರಲ್ಲೇ ಮುಂದುವರೆಸಿಕೊಂಡು ಹೋಗಲು ಎಂಪಿಸಿ ಸಮಿತಿ ನಿರ್ಧರಿಸಿದೆ. ಬ್ಯಾಂಕ್ ದರ ಹಾಗೂ ಎಂಎಸ್​ಎಲ್​ಆರ್ ದರ ಕೂಡಾ ಮೊದಲಿದ್ದ ಶೇ. 4.25 ರಲ್ಲಿ ಹಾಗೂ ರಿವರ್ಸ್​ ರೆಪೋ ದರ ಶೇಕಡಾ 3.35 ರಲ್ಲೇ ಮುಂದುವರೆಯಲಿದೆ ಎಂದು ಆರ್​ಬಿಐ ಮಾಹಿತಿ ನೀಡಿದೆ.

ಹೊಸ ಆರ್ಥಿಕ ಯುಗಕ್ಕೆ 2021 ವೇದಿಕೆ ಕಲ್ಪಿಸುತ್ತಿದೆ

ಭಾರತದ ಆರ್ಥಿಕತೆ ಮೇಲೆ ಕೋವಿಡ್​ ಬಿಕ್ಕಟ್ಟು ವ್ಯತಿರಿಕ್ತ ಪರಿಣಾಮ ಬೀರಿದ್ದು, ದೇಶದ ಆರ್ಥಿಕ ವ್ಯವಸ್ಥೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಆರ್​ಬಿಐ ಈ ನಿರ್ಧಾರ ತೆಗೆದುಕೊಂಡಿದೆ. ಅಗತ್ಯವಿರುವವರೆಗೂ ವಿತ್ತೀಯ ನೀತಿಯ ಈ ನಿಲುವನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ ಶಕ್ತಿಕಾಂತ ದಾಸ್, ಕಳೆದ ವರ್ಷವು (2020) ನಮ್ಮ ಸಾಮರ್ಥ್ಯ ಮತ್ತು ಸಹಿಷ್ಣುತೆಯನ್ನು ಪರೀಕ್ಷಿಸಿದರೆ, 2021 ಭಾರತದ ಇತಿಹಾಸದ ಹಾದಿಯಲ್ಲಿ ಹೊಸ ಆರ್ಥಿಕ ಯುಗಕ್ಕೆ ವೇದಿಕೆ ಕಲ್ಪಿಸುತ್ತಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.