ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆದಾರರ ಸ್ನೇಹಿ ಹಾಗೂ ಇನ್ನಷ್ಟು ಸುರಕ್ಷತೆ ಒದಗಿಸಲು ಬ್ಯಾಂಕ್ಗಳಿಗೆ ಹೊಸ ನಿಯಮ ಹೊರಡಿಸಿದೆ.
ಕಾರ್ಡ್ ವಿತರಣೆ/ ಮರುಹಂಚಿಕೆಯಲ್ಲಿಯೇ ಭಾರತದಲ್ಲಿನ ಎಟಿಎಂ ಮತ್ತು ಪಿಒಎಸ್ ಕೇಂದ್ರಗಳಲ್ಲಿ ದೇಶಿಯ ಕಾರ್ಡ್ ವಹಿವಾಟುಗಳಿಗೆ ಮಾತ್ರ ಅನುಮತಿಸುವಂತೆ ಆರ್‌ಬಿಐ ಬ್ಯಾಂಕ್ಗಳಿಗೆ ಸೂಚನೆ ನೀಡಿದೆ.
ಅಂತಾರಾಷ್ಟ್ರೀಯ ಹಾಗೂ ಆನ್‌ಲೈನ್ ವಹಿವಾಟುಗಳು, ಕಾರ್ಡ್ರಹಿತ ವ್ಯವಹಾರಗಳು ಮತ್ತು ಸಂಪರ್ಕವಿಲ್ಲದ ವಹಿವಾಟುಗಳಿಗಾಗಿ ಗ್ರಾಹಕರ ಕಾರ್ಡ್‌ಗಳನ್ನು ಪ್ರತ್ಯೇಕವಾದ ಸೇವೆಗಳನ್ನು ಹೊಂದಿಸಬೇಕಾಗುತ್ತದೆ. ಆನ್‌ಲೈನ್/ ಅಂತಾರಾಷ್ಟ್ರೀಯ/ ಸಂಪರ್ಕವಿಲ್ಲದ ವಹಿವಾಟುಗಳಿಗೆ ಎಂದಿಗೂ ಬಳಸದ ಅಸ್ತಿತ್ವದಲ್ಲಿರುವ ಕಾರ್ಡ್‌ಗಳನ್ನು ಕಡ್ಡಾಯವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ.
ಹೊಸ ಕಾರ್ಡ್‌ಗಳಿಗೂ ಈ ನಿಯಮಗಳು ಅನ್ವಯವಾಗುತ್ತವೆ. ಹಳೆಯ ಕಾರ್ಡ್‌ಗಳನ್ನು ಹೊಂದಿರುವವರು ಯಾವುದೇ ವೈಶಿಷ್ಟ್ಯಗಳನ್ನು ನಿಷ್ಕ್ರಿಯಗೊಳಿಸಬೇಕೆ. ಮೊಬೈಲ್ ಅಪ್ಲಿಕೇಷನ್/ ಇಂಟರ್ನೆಟ್ ಬ್ಯಾಂಕಿಂಗ್/ ಎಟಿಎಂ/ ಇಂಟರ್ ಆಕ್ಟಿವ್ ವಾಯ್ಸ್ ರೆಸ್ಪಾನ್ಸ್ (ಐವಿಆರ್) ಸೇರಿದಂತೆ ಲಭ್ಯವಿರುವ ಎಲ್ಲಾ ಚಾನಲ್‌ಗಳ ಮೂಲಕ ಬಳಕೆದಾರರು ಚಾಲನೆ ಅಥವಾ ನಿಷ್ಕ್ರಿಯಗೊಳಿಸಲು ಅಥವಾ ಎಲ್ಲ ವಹಿವಾಟು ಮಿತಿಗಳನ್ನು ಬದಲಾಯಿಸಲು 24x7 ಸೇವೆ ನೀಡಬೇಕು ಎಂದು ಆದೇಶಿಸಿದೆ.