ಮುಂಬೈ : ಕೋವಿಡ್ -19 ಸೋಂಕಿನ ತೀವ್ರತರವಾದ ಎರಡನೇ ಅಲೆಯನ್ನು ಭಾರತ ಎದುರಿಸುತ್ತಿದೆ. ಆರೋಗ್ಯ ವಲಯಕ್ಕೆ ಸಾಲದ ಪ್ರಮಾಣ ಹೆಚ್ಚಿಸಲು ಬ್ಯಾಂಕ್ಗಳಿಗೆ ವಿಶೇಷ ದ್ರವ್ಯತೆ ಸೌಲಭ್ಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಒದಗಿಸುತ್ತಿದೆ.
ಆಸ್ಪತ್ರೆಗಳು, ಲಸಿಕೆ ತಯಾರಕರು, ವೈದ್ಯಕೀಯ ಸಲಕರಣೆಗಳ ಆಮದುದಾರರು ಮತ್ತು ರೋಗಿಗಳ ತುರ್ತು ನಿಧಿಯ ಅಗತ್ಯೆಗಳನ್ನು ಪೂರೈಸಬಲ್ಲ ‘ಕೋವಿಡ್ ಸಾಲ ಬುಕ್’ ರಚಿಸಲು ಬ್ಯಾಂಕ್ಗಳಿಗೆ ಕೇಂದ್ರೀಯ ಬ್ಯಾಂಕ್ ಆದೇಶಿಸಿದೆ.
ಆರ್‌ಬಿಐ 50,000 ಕೋಟಿ ರೂ. ಆನ್-ಟ್ಯಾಪ್ ಲಿಕ್ವಿಡಿಟಿ ವಿಂಡೋವನ್ನು ಮೂರು ವರ್ಷಗಳವರೆಗೆ ಬಡ್ಡಿದರ ಹೊಂದಿರಲಿದೆ. 2022ರ ಮಾರ್ಚ್ 31ರವರೆಗೆ ಬ್ಯಾಂಕ್ಗಳು ಈ ಸೌಲಭ್ಯದಿಂದ ಶೇ. 4ರಷ್ಟು ರೆಪೊ ದರದಲ್ಲಿ ಸಾಲ ಪಡೆಯಬಹುದು.
ಬ್ಯಾಂಕ್ಗಳು ಈ ಸೌಲಭ್ಯದಿಂದ ಸಾಲ ಪಡೆಯಬಹುದು. ಹಲವು ವ್ಯಾಪ್ತಿಯ ಘಟಕಗಳಿಗೆ ಸಾಲ ನೀಡಬಹುದು. ಆರೋಗ್ಯ ಕ್ಷೇತ್ರದೊಂದಿಗೆ ಸಂಪರ್ಕ ಸಾಧಿಸಬಹುದು. ಈ ಸಾಲಗಳ ಮರುಪಾವತಿ ಅಥವಾ ಮುಕ್ತಾಯ ಆಗುವವರೆಗೆ ಆದ್ಯತೆಯ ವಲಯದ ಅಡಿಯಲ್ಲಿ ವರ್ಗೀಕರಿಸಲಾಗುತ್ತದೆ.