ನವದೆಹಲಿ: ನವೆಂಬರ್ 23ರಿಂದ ವಾರದ ದಿನ ಹಾಗೂ ಭಾನುವಾರದಂದು ಫೀಕ್ ಅವರ್ರಹಿತದ ವೇಳೆ ಚೆನ್ನೈನ ವಿಶೇಷ ಉಪನಗರ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸಲು ಮಹಿಳೆಯರಿಗೆ ಅವಕಾಶ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.
ನವೆಂಬರ್ 23ರಿಂದ ರೈಲ್ವೆಯು ಮಹಿಳೆಯರಿಗೆ ಚೆನ್ನೈನಲ್ಲಿ ವಿಶೇಷ ಉಪನಗರ ಸೇವೆಗಳ ಮೂಲಕ ವಾರದ ದಿನಗಳಲ್ಲಿ ಮತ್ತು ಭಾನುವಾರದಂದು ಪೀಕ್ ಅವರ್ನಲ್ಲಿ ಪ್ರಯಾಣಿಸಲು ಅನುಮತಿ ನೀಡುತ್ತದೆ.
ಇದು ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಅವರ ಪ್ರಯಾಣವನ್ನು ಸುರಕ್ಷಿತ, ಸುಲಭ ಮತ್ತು ಅನುಕೂಲಕರವಾಗಿಸುತ್ತದೆಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.
ಅಗತ್ಯ ಸೇವಾ ಸಿಬ್ಬಂದಿಯ ಪ್ರಯಾಣದ ಅಗತ್ಯಗಳನ್ನು ಪೂರೈಸಲು ದಕ್ಷಿಣ ರೈಲ್ವೆಯ ಚೆನ್ನೈ ಪ್ರದೇಶದ ಉಪನಗರ ಸೇವೆಗಳ ಸಂಖ್ಯೆಯನ್ನು ದಿನಕ್ಕೆ 244 ರೈಲುಗಳಿಗೆ (ಪೂರ್ವಕೋವಿಡ್ ಮಟ್ಟದ ಸುಮಾರು 40 ಪ್ರತಿಶತ) ಹೆಚ್ಚಿಸಿದೆ ಎಂದು ಪ್ರಕಟಣೆಯಲ್ಲಿ ರೈಲ್ವೆ ಇಲಾಖೆ ತಿಳಿಸಿದೆ.
ಪೀಕ್ ಸಮಯದಲ್ಲಿ ಚೆನ್ನೈ ಉಪನಗರ ರೈಲುಗಳಲ್ಲಿ ಪ್ರಯಾಣಿಸಲು ನವೆಂಬರ್ 23ರಿಂದ ಮಹಿಳಾ ಪ್ರಯಾಣಿಕರು (ಅಗತ್ಯ ಸೇವೆಗಳ ಸಿಬ್ಬಂದಿ ವರ್ಗಕ್ಕೆ ಬರದವರು) ಅನುಮತಿ ನೀಡಲು ಈಗ ನಿರ್ಧರಿಸಲಾಗಿದೆ. ಮುಂಜಾನೆಯಿಂದ ಬೆಳಗ್ಗೆ 7 ಗಂಟೆಯ ತನಕ. ಬೆಳಗ್ಗೆ 10:00 ರಿಂದ ಸಂಜೆ 4.30ರ ತನಕ ಹಾಗೂ ರಾತ್ರಿ 7:30ರಿಂದದ ಮುಕ್ತಾಯದ ಗಂಟೆಗಳವರೆಗೆ ಅನುಮತಿಸಲಾಗುತ್ತದೆ.