ತಿರುವನಂತಪುರಂ: ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಬಲಿಯಾದ 49 ಹುತಾತ್ಮ ಸೈನಿಕರಲ್ಲಿ ಕೇರಳದ ವಯ್ನಾಡ್ ಜಿಲ್ಲೆಯ ಲಕ್ಕಿದಿ ಯೋಧ ವಸಂತ್ಕುಮಾರ್ ವಿ.ವಿ. ಸಹ ಒಬ್ಬರು. ಯೋಧನ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ಉದ್ಯೋಗ ಮತ್ತು ಹಣಕಾಸಿನ ನೆರವು ನೀಡಿದೆ.
ಸಚಿವ ಸಂಪುಟದ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್ ಅವರು, ಯೋಧನ ಕುಟುಂಬಕ್ಕೆ ₹ 25 ಲಕ್ಷ ರೂ. ನೀಡಲಾಗಿದ್ದು, ಅದರಲ್ಲಿ ₹ 15 ಲಕ್ಷ ಪತ್ನಿಗೆ ಹಾಗೂ ₹ 10 ಲಕ್ಷ ತಾಯಿಗೆ ನೀಡಲಾಗುತ್ತಿದೆ. ಇಬ್ಬರು ಮಕ್ಕಳ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ಭರಿಸಿ ಸರ್ಕಾರಿ ಉದ್ಯೋಗ ಸಹ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಯೋಧನ ಪತ್ನಿಗೆ ವಯನಾಡು ಜಿಲ್ಲೆಯ ಪಶುವೈದ್ಯಕೀಯ ಕಾಲೇಜಿನಲ್ಲಿ ತಾತ್ಕಾಲಿಕ ಹುದ್ದೆ ನೀಡಲಾಗಿದೆ. ಮುಂದೆ ಶಾಶ್ವತ ಉದ್ಯೋಗ ಒದಗಿಸಲಾಗುವುದು. ಸದ್ಯ ಈ ಕುಟುಂಬಸ್ಥರು ಹುತಾತ್ಮ ತಂದೆ ನಿರ್ಮಿಸಿದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರದ ವತಿಯಿಂದ ಒಂದು ಮನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.