ನವದೆಹಲಿ : ಈ ತಿಂಗಳ ಆರಂಭದಲ್ಲಿ 25 ರೂ. ಏರಿಕೆಯಾಗಿದ್ದ ಅಡುಗೆ ಅನಿಲ ಬೆಲೆ ಇದೀಗ ಮತ್ತೆ 50 ರೂಪಾಯಿಯಷ್ಟು ಏರಿಕೆಯಾಗಿದೆ. 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ಒಂದೇ ತಿಂಗಳಲ್ಲಿ ಒಟ್ಟು 75 ರೂ. ಹೆಚ್ಚಳವಾಗಿದೆ. ಇದು ಜನರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ.
ಸೋಮವಾರ ಅಂದರೆ ನಾಳೆಯಿಂದ ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ಮೆಟ್ರೋ ನಗರಗಳಲ್ಲಿ ಈ ದರ ಅನ್ವಯವಾಗಲಿದೆ. ದೆಹಲಿಯಲ್ಲಿ ಜನರು ಎಲ್‌ಪಿಜಿ ಸಿಲಿಂಡರ್‌ಗೆ 769 ರೂ. ನೀಡಬೇಕಿದೆ. ಬೆಂಗಳೂರಿನಲ್ಲಿ 722 ರಿಂದ 772ರೂ.ಗೆ ಬೆಲೆ ಏರಿಕೆಯಾಗಿದೆ.
ಇದನ್ನೂ ಓದಿ: ಜನವರಿಯಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರ ಶೇ 2.03ಕ್ಕೆ ಏರಿಕೆ
ಫೆಬ್ರವರಿ 4ರಂದು ಮೆಟ್ರೋ ನಗರಗಳಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು 25 ರೂ.ಗೆ ಹೆಚ್ಚಿಸಿದ್ದವು. ಇದೀಗ 50 ರೂ.ಗೆ ಹೆಚ್ಚಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗರಿಷ್ಠ ಮಟ್ಟ ತಲುಪಿದ್ದು ಈ ಸಂದರ್ಭದಲ್ಲಿ ಅಡುಗೆ ಅನಿಲ ಬೆಲೆಯಲ್ಲೂ ಏರಿಕೆ ಕಂಡು ಜನರು ಶಾಕ್ ಆಗಿದ್ದಾರೆ.