ETV Bharat / business

ಇಂಡೋ - ಸೌದಿ ಭಾಯಿ, ಭಾಯಿ: ₹ 3 ಲಕ್ಷ ಕೋಟಿ ಪ್ರಾಜೆಕ್ಟ್​ಗೆ 'ನಮೋ' ಗ್ರೀನ್​ ಸಿಗ್ನಲ್​ - ಭಾರತ- ಸೌದಿ

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸೋಮವಾರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು. ಗಲ್ಫ್​ ದೇಶದ ಸೌದಿ ರಾಜ ಸಲ್ಮಾನ್ ಬಿನ್​ ಅಬ್ದುಲ್​ ಅಜೀಜ್​ ಅಲ್​ ಸೌದ್​ ಅವರ ಆಹ್ವಾನದ ಮೇರೆಗೆ ಮೋದಿ ಒಂದು ದಿನದ ಮಟ್ಟಿಗೆ ಅಧಿಕೃತ ಭೇಟಿ ನೀಡಿದ್ದಾರೆ.

ಸಂಗ್ರಹ ಚಿತ್ರ
author img

By

Published : Oct 29, 2019, 8:33 AM IST

Updated : Oct 29, 2019, 4:39 PM IST

ನವದೆಹಲಿ: 'ದಾವೋಸ್ ಇನ್ ಡಸರ್ಟ್' ಹೆಸರಿನಡಿ 3ನೇ ತಲೆಮಾರಿನ ಭವಿಷ್ಯದ ಹೂಡಿಕೆಯ (ಎಫ್‌ಐಐ) ಉನ್ನತ ಮಟ್ಟದ ಶೃಂಗದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾಕ್ಕೆ ತೆರಳಿದ್ದು, 3 ಲಕ್ಷ ಕೋಟಿ ರೂ. ಬೃಹತ್​ ಯೋಜನೆಗೆ ಅಂಗೀಕಾರ ನೀಡಿದ್ದಾರೆ.

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸೋಮವಾರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು. ಗಲ್ಫ್​ ದೇಶದ ಸೌದಿ ರಾಜ ಸಲ್ಮಾನ್ ಬಿನ್​ ಅಬ್ದುಲ್​ ಅಜೀಜ್​ ಅಲ್​ ಸೌದ್​ ಅವರ ಆಹ್ವಾನದ ಮೇರೆಗೆ ಮೋದಿ ಒಂದು ದಿನದ ಮಟ್ಟಿಗೆ ಅಧಿಕೃತ ಭೇಟಿ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಮೂರು ಸಾರ್ವಜನಿಕ ವಲಯದ ಕಂಪನಿಗಳು ಒಟ್ಟಾಗಿ ವಿಶ್ವದ ಅತಿದೊಡ್ಡ ಹಸಿರು ಕ್ಷೇತ್ರ ಸಂಸ್ಕರಣಾಗಾರವನ್ನು 40 ಬಿಲಿಯನ್ ಡಾಲರ್​ (3 ಲಕ್ಷ ಕೋಟಿ ರೂ.) ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿವೆ. ತೈಲ ಉದ್ಯಮದಲ್ಲಿ ನಿರಂತರವಾಗಿ ಬದಲಾಗುತ್ತಿರುವ ಮಾರುಕಟ್ಟೆ ಮೇಲೆ ಪ್ರಭಾವ ಬೀರಲು ಇದು ಭಾರತಕ್ಕೆ ನೆರವಾಗಲಿದೆ ಎಂದು ರತ್ನಗಿರಿ ಸಂಸ್ಕರಣಾಗಾರ ತನ್ನ ವೆಬ್‌ಸೈಟ್​ನಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.

ಪ್ರಧಾನಿ ಮೋದಿ ಅವರು 2016ರಲ್ಲಿ ಭೇಟಿ ನೀಡಿದ್ದಾಗ ಇಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿ ಕಾರ್ಯತಂತ್ರದ ಹೂಡಿಕೆ ಕ್ಷೇತ್ರಗಳತ್ತ ಗಮನಹರಿಸಿದ್ದರು. ಭಾರತ, ಚೀನಾ, ಇಂಗ್ಲೆಂಡ್​, ಅಮೆರಿಕ, ಫ್ರಾನ್ಸ್, ಜರ್ಮನಿ, ದಕ್ಷಿಣ ಕೊರಿಯಾ ಮತ್ತು ಜಪಾನ್ ಸೇರಿದಂತೆ ಎಂಟು ರಾಷ್ಟ್ರಗಳೊಂದಿಗೆ ಇಂಧನ ಸುರಕ್ಷತೆ ಮತ್ತು ಖರೀದಿದಾರರ ಕಾರ್ಯತಂತ್ರದ ಸಹಭಾಗಿತ್ವ ರೂಪಿಸುತ್ತಿದೆ. "ಇಂಧನ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಸೌದಿ ಅರೇಬಿಯಾ ಜೊತೆಗೆ ನಮ್ಮ ವ್ಯಾಪಾರ ಸಂಬಂಧವು ಇನ್ನೂ ಎತ್ತರಕ್ಕೆ ಏರಲಿದೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಸಂಸ್ಕರಣಾಗಾರಕ್ಕೆ ಅಂತಿಮ ರೂಪುರೇಷೆ ನೀಡಲು ಉಭಯ ರಾಷ್ಟ್ರಗಳು ಸಜ್ಜಾಗಿವೆ. ಇದರಲ್ಲಿ ಸೌದಿಯ ಅರಾಮ್ಕೊ, ಯುಎಇನ ಎಡಿಎನ್ಒಸಿ ಮತ್ತು ಭಾರತದ ಸಾರ್ವಜನಿಕ ವಲಯದ ತೈಲ ಕಂಪನಿಗಳ ಹೂಡಿಕೆ ಒಳಗೊಂಡಿದೆ. ಇದು ಭಾರತದ ಏಕೈಕ ಅತಿದೊಡ್ಡ ಗ್ರೀನ್‌ಫೀಲ್ಡ್ ಸಂಸ್ಕರಣಾಗಾರವಾಗಿದೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ಆರ್ಥಿಕ ಸಂಬಂಧಗಳ ಕಾರ್ಯದರ್ಶಿ ಟಿ.ಎಸ್.ತಿರುಮೂರ್ತಿ ಹೇಳಿದರು.

ಸೌದಿ ಅರೇಬಿಯಾದಲ್ಲಿ ಚಿಲ್ಲರೆ ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಭಾರತದ ಇಂಡಿಯನ್ ಆಯಿಲ್ ಮತ್ತು ಇಲ್ಲಿನ ಅಲ್-ಜೆರಿ ಕಂಪನಿಯೊಂದಿಗೆ ಜಂಟಿ ಸಹಭಾಗಿತ್ವದ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ. ಭಾರತವು ಪ್ರಸ್ತುತ ತನ್ನ ರಾಷ್ಟ್ರೀಯ ಮೂಲ ಸೌಕರ್ಯ ಹೂಡಿಕೆ ನಿಧಿಯಲ್ಲಿ ತನ್ನ ಹೂಡಿಕೆಯನ್ನು ಅಂತಿಮಗೊಳಿಸಲಿದೆ.

ಭಾರತ- ಸೌದಿ ಅರೇಬಿಯಾ ಸ್ನೇಹ ಸಂಬಂಧ ಸಾಂಪ್ರದಾಯಿಕ ತಳ ಹದಿಯ ಮೇಲಿದೆ. ಸೌದಿ ಭಾರತಕ್ಕೆ ಅಗತ್ಯವಿರುವಷ್ಟು ತೈಲ ಪೂರೈಸುವ ನಂಬಿಕಸ್ಥ ದೇಶವಾಗಿದೆ. ಭಾರತದಲ್ಲಿ 100 ಬಿಲಿಯನ್​ ಡಾಲರ್​ (ಸುಮಾರು 7 ಲಕ್ಷ ಕೋಟಿ ರೂ.) ಹೂಡಿಕೆ ಮಾಡುವ ಬಗ್ಗೆ 2019ರ ವೇಳೆ ದೆಹಲಿಗೆ ಆಗಮಿಸಿದ್ದಾಗ ಭರವಸೆ ನೀಡಿರುವಂತೆ ಹೂಡಿಕೆ ಮಾಡುವ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

Intro:Body:Conclusion:
Last Updated : Oct 29, 2019, 4:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.