ನ್ಯೂಯಾರ್ಕ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಟಾಪ್ 42 ಉದ್ಯಮಿಗಳನ್ನು ಭೇಟಿಯಾಗಿ ವಾಣಿಜ್ಯಾತ್ಮಕ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಇದೇ ಸಭೆಯಲ್ಲಿ ವಾಣಿಜ್ಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಪಿಯೂಶ್ ಗೋಯಲ್ ಸಹ ಪಾಲ್ಗೊಂಡಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಪೂರ್ವ ನಿಗದಿತ ಸಭೆಗಳು ಮುಂದುವರೆದಿವೆ. ವ್ಯಾಪಾರ-ವಹಿವಾಟು ಮತ್ತು ಸಿಇಒಗಳ ಜೊತೆಗಿನ ದುಂಡು ಮೇಜಿನ ಸಭೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಉನ್ನತ ಉದ್ಯಮಿಗಳೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದೆ. ಪಿಎಂ ನರೇಂದ್ರ ಮೋದಿ ಅವರು ಇದಕ್ಕೂ ಮೊದಲು ಬ್ಲೂಮ್‌ಬರ್ಗ್ ಗ್ಲೋಬಲ್ ಬಿಸಿನೆಸ್ ಫೋರಂನಲ್ಲಿ ಮುಖ್ಯ ಭಾಷಣ ಮಾಡುತ್ತಾ ಹಲವು ಉದ್ಯಮಿ ಸ್ನೇಹಿ ನಿರ್ಧಾರಗಳನ್ನು ಇಲ್ಲಿನ ಉದ್ಯಮಿಗಳಿಗೆ ತಿಳಿಸಿದರು.