ETV Bharat / business

ಮೋದಿ ಜತೆ ಚೌಕಾಸಿ ಮಾಡಿ ವ್ಯವಹಾರ ಕುದುರಿಸುವುದು ಅಷ್ಟು ಸುಲಭವಲ್ಲ:  ಟ್ರಂಪ್ ಆಂಬೋಣ​ - ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್

ಗುಜರಾತ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನೆರೆದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸುವುದು ಅಮೆರಿಕದ ಅಧಿಕಾರಿಗಳಿಗೆ ಅಷ್ಟು ಸುಲಭದ ಮಾತಲ್ಲ ಎಂದರು.

Modi- Trump
ಮೋದಿ ಟ್ರಂಪ್
author img

By

Published : Feb 24, 2020, 5:53 PM IST

ಅಹಮದಾಬಾದ್​: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸುವುದು ಅಮೆರಿಕದ ಅಧಿಕಾರಿಗಳಿಗೆ ಸುಲಭದ ಮಾತಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​ ಒಪ್ಪಿಕೊಂಡಿದ್ದಾರೆ.

ಗುಜರಾತ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನೆರೆದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಟ್ರಂಪ್, ಪ್ರಧಾನಿ ಮೋದಿ ಮತ್ತು ನಾನು ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ಪ್ರಯತ್ನಗಳ ಬಗ್ಗೆ ಚರ್ಚಿಸುತ್ತೇವೆ. ಇದುವರೆಗೆ ಮಾಡಿದ್ದ ಅತಿದೊಡ್ಡ ವ್ಯಾಪಾರ ಒಪ್ಪಂದಗಳಿಗಿಂತ ದೊಡ್ಡ ಪ್ರಮಾಣದ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಟ್ರಂಪ್​ ಸುಳಿವು ಬಿಟ್ಟುಕೊಟ್ಟರು.

ಅಮೆರಿಕ ಮತ್ತು ಭಾರತದ ನಡುವಿನ ಹೂಡಿಕೆಯ ಅಡೆತಡೆಗಳನ್ನು ತಗ್ಗಿಸಲು ನಂಬಲಾಗದ ವ್ಯಾಪಾರ ಒಪ್ಪಂದಕ್ಕಾಗಿ ಉಭಯ ದೇಶಗಳ ಚರ್ಚೆಯು ಆರಂಭಿಕ ಹಂತದಲ್ಲಿದೆ ಎಂದೂ ಇದೇ ವೇಳೆ, ಒಪ್ಪಿಕೊಂಡರು.

ಗುಜರಾತ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನೆರೆದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

ದ್ವಿಪಕ್ಷೀಯ ವ್ಯಾಪಾರವನ್ನು ವಿಸ್ತರಿಸುವ ತನ್ನ ಯೋಜನೆಯನ್ನು ರೂಪಿಸುವಾಗ ಭಾರತದಿಂದ ಯಾವುದೇ ವ್ಯಾಪಾರ ರಿಯಾಯಿತಿಗಳನ್ನು ಪಡೆಯುವುದು ಸುಲಭವಲ್ಲ ಎಂಬುದನ್ನೂ ಇದೇ ವೇಳೆ ಟ್ರಂಪ್​ ಒಪ್ಪಿಕೊಂಡರು.

ನಾನು ಒಟ್ಟಾಗಿ ಕೆಲಸ ಮಾಡುತ್ತೇನೆ. ಪ್ರಧಾನಿ ಮತ್ತು ನಾನು ಅದ್ಭುತವಾದ ಒಪ್ಪಂದವನ್ನು ತಲುಪಬಹುದು ಎಂಬ ಬಗ್ಗೆ ತಾವು ಆಶಾವಾದಿಯಾಗಿದ್ದೇವೆ. ಅದು ನಮ್ಮ ಎರಡೂ ದೇಶಗಳಿಗೆ ಒಳ್ಳೆಯದು ಮತ್ತು ಅದ್ಭುತವಾದ ಭವಿಷ್ಯ ರೂಪಿಸಲಿದೆ ಎಂದು ಟ್ರಂಪ್ ಭವಿಷ್ಯವನ್ನೂ ನುಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.