ನವದೆಹಲಿ: ಅಸ್ಟ್ರಾಜೆನೆಕಾ, ಜಾನ್ಸನ್ ಆ್ಯಂಡ್ ಜಾನ್ಸನ್ ಮತ್ತು ಭಾರತ್ ಬಯೋಟೆಕ್‌ನಿಂದ ಬರಲಿರುವ ಸಾಂಪ್ರದಾಯಿಕ ಕೊರೊನಾ ವೈರಸ್ ಲಸಿಕೆಗಳಿಗಾಗಿ ಭಾರತ ಕಾಯುವುದು ಉತ್ತಮ ಎಂದು ಬಯೋಕಾನ್ ಮುಖ್ಯಸ್ಥ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.
ಫಿಜರ್‌ನ ಕೋವಿಡ್-19 ಲಸಿಕೆಯ ವಿತರಣೆ ಮತ್ತು ಸಂಗ್ರಹಿಸಲು ಭಾರತ ಎದುರಿಸಬೇಕಾದ ಸವಾಲುಗಳ ಬಗ್ಗೆ ಮಜುಂದಾರ್ ಶಾ ಪ್ರತಿಕ್ರಿಯಿಸಿದ್ದಾರೆ.
ಮೂರನೇ ಹಂತದ ಪ್ರಯೋಗದಲ್ಲಿ ಶೇ 90ರಷ್ಟು ಯಶಸ್ವಿ ಆಗಿರುವ ಫಿಜರ್ ಅಭಿವೃದ್ಧಿಪಡಿಸಿದ ಕೊರಾನಾ ವೈರಸ್ ಲಸಿಕೆಯ ಸ್ಟೋರೇಜ್ ಹಾಗೂ ವಿತರಣೆ ದುಬಾರಿ ಆಗಲಿದೆ. ಈ ಲಸಿಕೆ ಅನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಬೇಕಿದೆ. ಅಂತಹ ಲಾಜಿಸ್ಟಿಕ್ಸ್ ಸ್ಟೋರೇಜ್ ಭಾರತದಲ್ಲಿ ವ್ಯವಸ್ಥೆ ಮಾಡಲು ಕಷ್ಟವಾಗಬಹುದು ಎಂದು ಏಮ್ಸ್ ದೆಹಲಿ ನಿರ್ದೇಶಕ ರಂದೀಪ್ ಗುಲೇರಿಯಾ ಹೇಳಿದ್ದರು.
ಈ ಬಳಿಕ ಟ್ವೀಟ್ ಮಾಡಿದ ಶಾ, ಅಮೆರಿಕದ ತಜ್ಞರು ಇದನ್ನು ಭೀಕರ ಸವಾಲು ಎಂದು ವಿವರಿಸಿದ್ದಾರೆ. ಭಾರತವು ದೇಶದಲ್ಲಿ ಇಂತಹ ಲಸಿಕೆಗಾಗಿ ಹೇಗೆ ಆಲೋಚಿಸಬಹುದು? ಎಝ್ಯಡ್, ಜೆ&ಜೆ, ಭಾರತ್ ಬಯೋಟೆಕ್ ಇತ್ಯಾದಿಗಳಿಂದ ಬರುವ ಹೆಚ್ಚು ಸಾಂಪ್ರದಾಯಿಕ ಲಸಿಕೆಗಳಿಗಾಗಿ ನಾವು ಕಾಯಬೇಕಾಗಿದೆ ಎಂದು ಬರೆದು ಕೊಂಡಿದ್ದಾರೆ.