ನವದೆಹಲಿ: ಭಾರತದ ಅತಿದೊಡ್ಡ ಧ್ರುವೀಕೃತ ನೈಸರ್ಗಿಕ ಅನಿಲ(ಎಲ್‌ಎನ್‌ಜಿ)ಆಮದುದಾರ ಪೆಟ್ರೋನೆಟ್ ಎಲ್ಎನ್‌ಜಿ ಲಿಮಿಟೆಡ್, ಲೂಸಿಯಾನದ ಟೆಲ್ಲುರಿಯನ್ ಇಂಕಾ ಪ್ರಸ್ತಾಪಿತ ಡ್ರಿಫ್ಟ್ವುಡ್ ಯೋಜನೆ ಪಾಲು ಖರೀದಿ ಮತ್ತು ವಾರ್ಷಿಕ 5 ಮಿಲಿಯನ್ ಟನ್ ಎಲ್‌ಎನ್‌ಜಿ ಆಮದು ಮಾಡಿಕೊಳ್ಳುವ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಿವೆ.
ಇಂಧನ ಬಂಡವಾಳ ಹೂಡಿಕೆಯ ಗುರಿಯಾಗಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿದ್ದು, ಅಮೆರಿಕಾದ ಕಾರ್ಪೊರೇಟ್ ಜಗತನ್ನು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ವ್ಯಾಪಾರದ ಸೇತುವೆಯಾಗಿ ಬಳಸಿಕೊಳ್ಳುವ ಆಸೆಯದೊಂದಿಗೆ ಇಂದು ಹೂಸ್ಟನ್‌ಗೆ ಬಂದಿಳಿದರು. ಬಲ್ಲ ಮೂಲಗಳ ಪ್ರಕಾರ, ಈ ಒಪ್ಪಂದವು 2.5 ಬಿಲಯನ್ ಡಾಲರ್ ಮೌಲ್ಯದಾಗಿದೆ. 2020ರ ಮಾರ್ಚ್ 31ರ ಒಳಗೆ ವಹಿವಾಟು ಒಪ್ಪಂದಗಳು ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಟೆಲ್ಲುರಿಯನ್ ಇಂಕಾ ಮತ್ತು ಪೆಟ್ರೋನೆಟ್ ಎಲ್ಎನ್‌ಜಿ ಲಿಮಿಟೆಡ್ ಕಂಪನಿಗಳು ಹೂಡಿಕೆದಾರ ಉದ್ದಿಮೆಗಳ ನಡುವೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸೆಪ್ಟೆಂಬರ್ 21ರಂದು ಸಹಿ ಮಾಡಿದ್ದವು. ಇದರ ಅಧಿಕೃತ ಘೋಷಣೆಯನ್ನು ಇಂದು ಬಹರಂಗ ಪಡಿಸಲಾಗಿದೆ. ಟೆಲ್ಲುರಿಯನ್ ಇಂಕಾ ಪ್ರಸ್ತಾಪಿತ ಡ್ರಿಫ್ಟ್ವುಡ್ ಯೋಜನೆ ಪಾಲು ಖರೀದಿ ಹಾಗೂ ವಾರ್ಷಿಕ 5 ಮಿಲಿಯನ್ ಟನ್ ಎಲ್‌ಎನ್‌ಜಿ ಆಮದು ಮಾಡಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ಅಮೆರಿಕದ ಉದ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರೊಪೇಟ್ ಮತ್ತು ಬುಟೇನ್ ಮಿಶ್ರಣವಾಗಿರುವ ಎಲ್ಪಿಜಿಯನ್ನು ಅಡುಗೆ ಮತ್ತು ಸಾರಿಗೆ ಇಂಧನವಾಗಿ ಬಳಸುವಂತೆ ಧ್ರೂವೀಕೃತ ನೈಸರ್ಗಿಕ ಅನಿಲವನ್ನು ಕೂಡ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಭಾರತಕ್ಕೆ ಮಧ್ಯಪ್ರಾಚ್ಯವೇ ಅತಿದೊಡ್ಡ ಅನಿಲ ಪೂರೈಕೆದಾರನಾಗಿದ್ದು, ಇದರ ಏಕಸ್ವಾಮ್ಯ ತಪ್ಪಿಸಿಲು ಬದಲಿ ರಾಷ್ಟ್ರಗಳತ್ತ ಮುಖ ಮಾಡಲಾಗುತ್ತಿದೆ. ಅಮೆರಿಕದ ಶೆಲ್ ಕಂಪನಿಗಳು ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಹೊರತೆಗೆದು ಭಾರತಕ್ಕೆ ಮಾರಾಟ ಮಾಡಲಿವೆ. ಮುಂದಿನ ದಿನಗಳಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಬಿಕ್ಕಟ್ಟು ಸಂಭವಿಸಿ ತೈಲದ ಅಭಾವ ಉಂಟಾದರೂ ಎಲ್ಪಿಜಿಯ ಬೆಲೆ ಏರಿಕೆಗೆ ನಿಯಂತ್ರಣ ಬೀಳುವ ಸಾಧ್ಯತೆ ಇದೆ.