ETV Bharat / business

ಸತತ 7ನೇ ದಿನವೂ ಪೆಟ್ರೋಲ್​, ಡೀಸೆಲ್​​ ಬೆಲೆಯಲ್ಲಿ ಏರಿಕೆ: ಇನ್ನಾದರೂ ನಿಯಂತ್ರಿಸುತ್ತಾ ಕೇಂದ್ರ - ಇಂಧನ ಬೆಲೆ ಹೆಚ್ಚಳ

ಕಳೆದೊಂದು ವಾರದಿಂದ ನಿರಂತರವಾಗಿ ಇಂಧನ ಬೆಲೆಯಲ್ಲಿ ಹೆಚ್ಚಳವಾಗುತ್ತಿದ್ದು, ಇಂದು ಮತ್ತೆ ಲೀಟರ್​ ಪೆಟ್ರೋಲ್​​ಗೆ 59 ಪೈಸೆ ಹಾಗೂ ಡೀಸೆಲ್​​ಗೆ 58 ಪೈಸೆ ಏರಿಕೆಯಾಗಿದೆ.

fuel price hike
ಇಂಧನ ಬೆಲೆ
author img

By

Published : Jun 13, 2020, 12:43 PM IST

ನವದೆಹಲಿ: ಕಳೆದೊಂದು ವಾರದಿಂದ ನಿರಂತರವಾಗಿ ಪೆಟ್ರೋಲ್​, ಡೀಸೆಲ್​​ ಬೆಲೆ ಹೆಚ್ಚಳವಾಗುತ್ತಿದ್ದು, ಇಂದೂ ಕೂಡ ಗ್ರಾಹಕರು ಬಾಯಿ ಮೇಲೆ ಬೆರೆಳು ಇಡುವಂತಾಗಿದೆ.

ಇಂದು ಲೀಟರ್​ ಪೆಟ್ರೋಲ್​​ಗೆ 59 ಪೈಸೆ ಹಾಗೂ ಡೀಸೆಲ್​​ಗೆ 58 ಪೈಸೆ ಏರಿಕೆಯಾಗಿದೆ. ದೇಶದ ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಹೈದರಾಬಾದ್​ಗಳಲ್ಲಿ ಬೆಲೆ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಇಂದು ಪೆಟ್ರೋಲ್ ಹಾಗೂ ಡೀಸೆಲ್​ ಬೆಲೆ ಕ್ರಮವಾಗಿ 75.16 ರೂ ಮತ್ತು 73.39 ರೂ.ಇದೆ.

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಲೀಟರ್​ ಪೆಟ್ರೋಲ್​ಗೆ 77.59 ರೂ ಹಾಗೂ ಡೀಸೆಲ್​ಗೆ 69.22 ರೂಪಾಯಿ ನಿಗದಿಯಾಗಿದೆ.

ಜೂನ್​ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ 5 ರೂ. ವರೆಗೂ ಏರಿಕೆಯಾಗಬಹುದು ಎಂದು ಈ ಹಿಂದೆ ಹೇಳಲಾಗಿತ್ತು. 82 ದಿನಗಳ ಲಾಕ್​​ಡೌನ್​ ಬಳಿಕ ಜೂನ್​ 7 ರಿಂದ ತೈಲ ಕಂಪನಿಗಳು ಇಂಧನ ಬೆಲೆ ಹೆಚ್ಚಿಸಿದ್ದವು. ಇದೀಗ ಒಂದು ವಾರದಲ್ಲೇ ಲೀಟರ್​ ಪೆಟ್ರೋಲ್​​ ಮೇಲೆ 3.9 ರೂ ಹಾಗೂ ಡೀಸೆಲ್​ಗೆ 4 ರೂ. ಏರಿಕೆಯಾದಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.