ನವದೆಹಲಿ: ಇಂದು ದೇಶಾದ್ಯಂತ ಲೀಟರ್ ಪೆಟ್ರೋಲ್ಗೆ 47 ಪೈಸೆ ಹಾಗೂ ಡೀಸೆಲ್ಗೆ 93 ಪೈಸೆ ಹೆಚ್ಚಳವಾಗಿದೆ. ವಿಮಾನ ಇಂಧನ ಅಥವಾ ಏವಿಯೇಷನ್ ಟರ್ಬೈನ್ ಇಂಧನ (ATF) ದರ ಕೂಡ ಶೇ.16.3 ರಷ್ಟು ಏರಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಅಧಿಕವಾಗಿದ್ದು, 82 ದಿನಗಳ ಲಾಕ್ಡೌನ್ ಬಳಿಕ ಸತತ 10 ದಿನಗಳಿಂದ ತೈಲ ಕಂಪನಿಗಳು ಇಂಧನ ಬೆಲೆ ಏರಿಸುತ್ತಿವೆ. ಇದೀಗ ಲೀಟರ್ ಪೆಟ್ರೋಲ್ ಮೇಲೆ ಒಟ್ಟು 5.47 ರೂ. ಹಾಗೂ ಡೀಸೆಲ್ ಮೇಲೆ 5.8 ರೂ. ಹೆಚ್ಚಳವಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂಧನ ದರ: (ಪ್ರತಿ ಲೀಟರ್ಗೆ ರೂಪಾಯಿಗಳಲ್ಲಿ)
ನಗರ | ಪೆಟ್ರೋಲ್ | ಡೀಸೆಲ್ |
ದೆಹಲಿ | 76.73 | 75.19 |
ಬೆಂಗಳೂರು | 79.2 | 79.2 |
ಕೋಲ್ಕತ್ತಾ | 78.55 | 70.84 |
ಮುಂಬೈ | 83.62 | 73.75 |
ಚೆನ್ನೈ | 80.37 | 73.17 |
ಒಂದೇ ತಿಂಗಳಲ್ಲಿ ಎರಡು ಬಾರಿ ATF ದರ ಹೆಚ್ಚಳ:
ರಾಷ್ಟ್ರ ರಾಜಧಾನಿಯಲ್ಲಿ ಕಿಲೋ ಲೀಟರ್ಗೆ (ಸಾವಿರ ಲೀಟರ್) 5,494.5 ರೂ. ಇದ್ದ ವಿಮಾನ ಇಂಧನಕ್ಕೆ ಇದೀಗ 39,069.87 ರೂ. ಆಗಿದೆ. ಜೂನ್ 1 ರಂದು ATF ದರ ಶೇ. 56.5 ರಷ್ಟು ಹೆಚ್ಚಳವಾಗಿತ್ತು. ಇದೀಗ ಮತ್ತೆ ಶೇ.16.3 ರಷ್ಟು ಹೆಚ್ಚಳವಾಗಿದ್ದು, ಒಂದೇ ತಿಂಗಳಲ್ಲಿ ಎರಡು ಬಾರಿ ಏರಿಕೆಯಾದಂತಾಗಿದೆ.