ಮುಂಬೈ: ಇಂಧನ ಬೆಲೆ ಏರಿಕೆಗೆ ಎರಡು ದಿನಗಳ ಬ್ರೇಕ್ ಕೊಟ್ಟಿದ್ದ ತೈಲ ಮಾರುಕಟ್ಟೆ ಕಂಪನಿಗಳು ಇದೀಗ ಮತ್ತೆ ಇಂದು ಲೀಟರ್ ಪೆಟ್ರೋಲ್ಗೆ 26 ಪೈಸೆ ಹಾಗೂ ಡೀಸೆಲ್ಗೆ 34 ಪೈಸೆ ಹೆಚ್ಚಳ ಮಾಡಿವೆ.
ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 91.53 ರೂ. ಹಾಗೂ ಡೀಸೆಲ್ ಬೆಲೆ 82.06 ರೂ.ಗೆ ಏರಿಕೆಯಾಗಿದೆ. ಇದೇ ನಿಯಮ ದೇಶದ ಎಲ್ಲಾ ಮೆಟ್ರೋ ನಗರಗಳಿಗೂ ಅನ್ವಯವಾಗುತ್ತದೆ. ಬೆಂಗಳೂರು, ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿನ ಇಂಧನ ಬೆಲೆ ಈ ಕೆಳಕಂಡಂತಿದೆ.
ನಗರ | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 94.30 ರೂ. | 86.64 ರೂ. |
ದೆಹಲಿ | 91.53 ರೂ. | 82.06 ರೂ. |
ಕೋಲ್ಕತ್ತಾ | 91.66 ರೂ. | 84.90 ರೂ. |
ಮುಂಬೈ | 97.86 ರೂ. | 89.17 ರೂ. |
ಚೆನ್ನೈ | 93.38 ರೂ. | 86.96 ರೂ. |