ETV Bharat / business

ಪ್ರವಾಸೋದ್ಯಮ ಪ್ರಚಾರಕ್ಕಾಗಿ ಮಾಧ್ಯಮಗಳಲ್ಲಿ 124 ಕೋಟಿ ರೂ. ಖರ್ಚು: ಕೇಂದ್ರ - ಬಜೆಟ್ ಅಧಿವೇಶನ ಪ್ರಶ್ನಾವಳಿ

ಭಾರತದಲ್ಲಿ ದೇಶೀಯ ಪ್ರವಾಸೋದ್ಯಮ ಉತ್ತೇಜಿಸಲು ಪ್ರವಾಸೋದ್ಯಮ ಸಚಿವಾಲಯವು ವಿವಿಧ ಮಾಧ್ಯಮ ಪ್ರಚಾರಗಳನ್ನು ನಡೆಸುತ್ತದೆ. ಕಳೆದ ಮೂರು ವರ್ಷಗಳಲ್ಲಿ ಮುದ್ರಣ ಮಾಧ್ಯಮ, ಟೆಲಿವಿಷನ್, ಆನ್‌ಲೈನ್, ರೆಡಿಯೋ, ಥಿಯೇಟರ್ ಮತ್ತು ಎಸ್‌ಎಂಎಸ್‌ಗಳಲ್ಲಿ ಪ್ರಚಾರ ನಡೆಸಲಾಯಿತು ಎಂದು ಪಟೇಲ್​ ತಿಳಿಸಿದ್ದಾರೆ.

tourism
tourism
author img

By

Published : Feb 3, 2021, 2:23 PM IST

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಪ್ರವಾಸೋದ್ಯಮ ಪ್ರಚಾರಕ್ಕಾಗಿ ಮಾಧ್ಯಮಗಳಲ್ಲಿ 124 ಕೋಟಿ ರೂ.ಗೂ ಅಧಿಕ ಖರ್ಚು ಮಾಡಲಾಗಿದೆ ಎಂದು ಕೇಂದ್ರವು ರಾಜ್ಯಸಭೆಗೆ ತಿಳಿಸಿದೆ.

ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಬಿಜು ಜನತಾದಳ (ಬಿಜೆಡಿ) ಸಂಸದರಾದ ಭಾಸ್ಕರ್ ರಾವ್ ನೆಕ್ಕಂತಿ ಮತ್ತು ಪ್ರಶಾಂತ ನಂದಾ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿ ಈ ಮಾಹಿತಿ ನೀಡಿದರು.

ಭಾರತದಲ್ಲಿ ದೇಶೀಯ ಪ್ರವಾಸೋದ್ಯಮ ಉತ್ತೇಜಿಸಲು ಪ್ರವಾಸೋದ್ಯಮ ಸಚಿವಾಲಯವು ವಿವಿಧ ಮಾಧ್ಯಮ ಪ್ರಚಾರಗಳನ್ನು ನಡೆಸುತ್ತದೆ. ಕಳೆದ ಮೂರು ವರ್ಷಗಳಲ್ಲಿ ಮುದ್ರಣ ಮಾಧ್ಯಮ, ಟೆಲಿವಿಷನ್, ಆನ್‌ಲೈನ್, ರೆಡಿಯೋ, ಥಿಯೇಟರ್ ಮತ್ತು ಎಸ್‌ಎಂಎಸ್‌ಗಳಲ್ಲಿ ಪ್ರಚಾರ ನಡೆಸಲಾಯಿತು ಎಂದು ಪಟೇಲ್​ ತಿಳಿಸಿದ್ದಾರೆ.

ಇದನ್ನೂ ಓದಿ: ರಿಲಯನ್ಸ್​- ಫ್ಯೂಚರ್​ ಒಪ್ಪಂದಕ್ಕೆ ಅಮೆಜಾನ್ ಅಡ್ಡಿ: ದೆಹಲಿ ಹೈಕೋರ್ಟ್​ ಆದೇಶದ ವಿರುದ್ಧ ಮೇಲ್ಮನವಿ

2017-18ರಲ್ಲಿ 25,70,95,135 ರೂ, 2018-19ರಲ್ಲಿ 65,25,12,193 ಮತ್ತು 2019-20ರಲ್ಲಿ 33,27,44,370 ರೂ. ಸೇರಿ ಕಳೆದ ಮೂರು ವರ್ಷಗಳಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಮಾಧ್ಯಮ ಪ್ರಚಾರಕ್ಕಾಗಿ 1,24,23,51,698 ರೂ. ಖರ್ಚು ಮಾಡಲಾಗಿದೆ.

ಮಾಧ್ಯಮ ಯೋಜನೆಗಳನ್ನು ಪ್ರವಾಸೋದ್ಯಮ ಸಚಿವಾಲಯವು ಬ್ಯೂರೋ ಆಫ್ ಔಟ್ರೀಚ್ ಮತ್ತು ಸಂವಹನ, ದೂರದರ್ಶನ ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಮೂಲಕ ಸ್ವೀಕರಿಸುತ್ತದೆ. ಈ ಅಭಿಯಾನವನ್ನು ಎಲ್ಲಾ ರಾಜ್ಯಗಳಿಗೆ ನಡೆಸಲಾಗುತ್ತದೆ ಎಂದು ರಾಜ್ಯಸಭೆಯ ಗಮನಕ್ಕೆ ತಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.