ETV Bharat / business

ಹೋಟೆಲ್​ ಗ್ರಾಹಕರ ಗಮನಕ್ಕೆ! ಈ ಮಾರ್ಗಸೂಚಿಗಳು ಇದ್ದರೇ ರೆಸ್ಟೋರೆಂಟ್​ ಪ್ರವೇಶಿಸಿ

author img

By

Published : Jun 25, 2020, 9:09 PM IST

ಬೆಂಗಳೂರು ಮೂಲದ ಸ್ಕಿಲ್ ಟೆಕ್ ಕಂಪನಿಯಾದ ರೆಲೆಸ್ಕಿಯ ಸಹಭಾಗಿತ್ವದಲ್ಲಿ ರೂಪಿಸಲಾದ ಎಸ್‌ಒಪಿನಲ್ಲಿ ಬ್ಯಾಕ್​-ಟು-ಬ್ಯಾಕ್ ಕುಳಿತುಕೊಳ್ಳುವ ಮತ್ತು ಪರಸ್ಪರ ಬೆನ್ನಿನಿಂದ ಕುಳಿತುಕೊಳ್ಳುವ ಆಸನಗಳನ್ನು 'ಪ್ಲೆಕ್ಸಿಗ್ಲಾಸ್' ವಿಭಾಜಕದಿಂದ 2 ಮೀಟರ್​ ತನಕ ವಿಂಗಡಿಸಬಹುದು ಎಂದು ಸಲಹೆ ನೀಡಿದೆ. ಸಾಮಾಜಿಕ ಅಂತರವನ್ನು ಉತ್ತೇಜಿಸಲು ರೆಸ್ಟೋರೆಂಟ್‌ಗಳು ತಮ್ಮ ಹೆಚ್ಚುವರಿ ಆಸನಗಳ ಸಾಮರ್ಥ್ಯವನ್ನು ಅನಿವಾರ್ಯವಾಗಿ ಬಿಟ್ಟುಕೊಡಬೇಕಿದೆ. ಆರೋಗ್ಯ ಮತ್ತು ಸುರಕ್ಷತೆಯನ್ನು ಉತ್ತೇಜಿಸಿ ಗ್ರಾಹಕರ ವಿಶ್ವಾಸವನ್ನು ಗಳಿಸಬೇಕು ಎಂದಿದೆ.

restaurants
ರೆಸ್ಟೋರೆಂಟ್

ನವದೆಹಲಿ: ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಎನ್‌ಆರ್‌ಎಐ), ಗುರುವಾರ ರೆಸ್ಟೋರೆಂಟ್‌ಗಳಿಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್​ನ (ಎಸ್‌ಒಪಿ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮಾನದಂಡಗಳ ಮಧ್ಯೆ ಪ್ರತಿ ಟೇಬಲ್​ ನಡುವೆ 2 ಮೀಟರ್ ಅಂತರ ಇರಬೇಕು ಎಂದು ಅದು ಸೂಚಿಸಿದೆ.

ಬೆಂಗಳೂರು ಮೂಲದ ಸ್ಕಿಲ್ ಟೆಕ್ ಕಂಪನಿಯಾದ ರೆಲೆಸ್ಕಿಯ ಸಹಭಾಗಿತ್ವದಲ್ಲಿ ರೂಪಿಸಲಾದ ಎಸ್‌ಒಪಿನಲ್ಲಿ ಬ್ಯಾಕ್​-ಟು-ಬ್ಯಾಕ್ ಕುಳಿತುಕೊಳ್ಳುವ ಮತ್ತು ಪರಸ್ಪರ ಬೆನ್ನಿನಿಂದ ಕುಳಿತುಕೊಳ್ಳುವ ಆಸನಗಳನ್ನು 'ಪ್ಲೆಕ್ಸಿಗ್ಲಾಸ್' ವಿಭಾಜಕದಿಂದ 2 ಮೀಟರ್​ ತನಕ ವಿಂಗಡಿಸಬಹುದು ಎಂದು ಸಲಹೆ ನೀಡಿದೆ.

ಒಂದು ರೆಸ್ಟೋರೆಂಟ್‌ನಲ್ಲಿ ಸುಧಾರಿತ ಆಸನ ಯೋಜನೆಯು ಟೇಬಲ್​ ನಡುವೆ ಕನಿಷ್ಠ 2 ಮೀಟರ್ ದೂರ ಹೊಂದಿರಬೇಕು. ಟೇಬಲ್​ ನಡುವೆ 2 ಮೀಟರ್ (6 ಅಡಿ) ಅಂತರವು ಮೇಜಿನ ಒಂದು ಅಂಚಿನಿಂದ ಇನ್ನೊಂದು ಟೇಬಲ್‌ನ ಅಂಚಿಗೆ ಅಳೆಯಬೇಕು ಎಂದು ಹೇಳಿದೆ.

ಊಟದ ಅಥವಾ ಫುಡ್ ಕೋರ್ಟ್ ಶೈಲಿಯ ಆಸನದಂತಹ ಸಡಿಲವಾದ ಟೇಬಲ್​ಗಳ ನಡುವೆ ಕನಿಷ್ಠ 2 ಮೀಟರ್ ದೂರವನ್ನು ಸಹ ಕಾಪಾಡಿಕೊಳ್ಳಬೇಕು ಎಂದು ಆದೇಶಿಸಿದೆ.

ಸಾಮಾಜಿಕ ಅಂತರವನ್ನು ಉತ್ತೇಜಿಸಲು ರೆಸ್ಟೋರೆಂಟ್‌ಗಳು ತಮ್ಮ ಹೆಚ್ಚುವರಿ ಆಸನಗಳ ಸಾಮರ್ಥ್ಯವನ್ನು ಅನಿವಾರ್ಯವಾಗಿ ಬಿಟ್ಟುಕೊಡಬೇಕಿದೆ. ಆರೋಗ್ಯ ಮತ್ತು ಸುರಕ್ಷತೆಯನ್ನು ಉತ್ತೇಜಿಸಿ ಗ್ರಾಹಕರ ವಿಶ್ವಾಸವನ್ನು ಗಳಿಸಬೇಕು ಎಂದು ಕಿವಿಮಾತು ಹೇಳಿದೆ.

ಇದನ್ನು ನಿರ್ವಹಿಸಲು ನಿಮ್ಮ ರೆಸ್ಟೋರೆಂಟ್‌ಗಳನ್ನು ವಿವಿಧ ವಲಯಗಳ ಅಡಿಯಲ್ಲಿ ವಿಂಗಡಿಸಿ. ರೆಸ್ಟೋರೆಂಟ್‌ನ ನೆಲವನ್ನು ಬಣ್ಣ ಸಂಕೇತದಿಂದ ಮಾರ್ಗದರ್ಶನ ನೀಡಿ. ಕೆಂಪು ಬಣ್ಣ ಗರಿಷ್ಠ ಕಾಲುದಾರಿ ಅಥವಾ ದಟ್ಟಣೆಯ ಸಂಭಾವ್ಯ ಪ್ರದೇಶವೆಂದು ಮತ್ತು ಹಳದಿ ಬಣ್ಣವನ್ನು ಫುಟ್‌ಫಾಲ್‌ಗಳ ಸರಾಸರಿ ಇರುವ ಪ್ರದೇಶವೆಂದು ಗುರುತಿಸಿ ಎಂದು ಸಂಘಟನೆ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.