ETV Bharat / business

ಬಿಲ್ ಪಾವತಿ ವಿಳಂಬವಾದ್ರೆ, E-Way ಸೇವೆ ರದ್ದು!

author img

By

Published : Apr 24, 2019, 7:52 PM IST

ನೂತನ ನಿಯಮವು ಜೂನ್ 21ರಿಂದ ಜಾರಿಗೆ ಬರಲಿದ್ದು, ಇ- ವೇ ಬಿಲ್ ಪಾವತಿದಾರರು ನಿಗದಿತ ಆರು ತಿಂಗಳಲ್ಲಿ ತೆರಿಗೆ ಸಲ್ಲಿಸಲು ವಿಫಲವಾದರೇ ಈಗಾಗಲೇ ನೀಡಲಾದ ಇ- ವೇ ಬಿಲ್​ ಸೇವೆ ಕಡಿತವಾಗಲಿದೆ ಎಂದು ನೇರ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ (ಸಿಬಿಐಸಿ) ಎಚ್ಚರಿಕೆ ನೀಡಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಸರಕು ಸಾಗಾಣೆ ಜಿಎಸ್​ಟಿ ರಿಟರ್ನ್ಸ್​ ಸಲ್ಲಿಕೆಯ ಇ-ವೇ ಬಿಲ್​ ಪಾವತಿದಾರರು ಎರಡು ತಿಂಗಳು ತೆರಿಗೆ ಸಲ್ಲಿಸದಿದರೇ ಇ-ವೇ ಬಿಲ್ ವ್ಯವಸ್ಥೆ ಕಡಿತಗೊಳಿಸಲಾಗುವುದು ಎಂದು ಹಣಕಾಸು ಸಚಿವಾಲಯ ಎಚ್ಚರಿಕೆಯ ಕರೆಗಂಟೆ ಬಾರಿಸಿದೆ.

ಸಕಾಲದಲ್ಲಿ ಇ- ವೇ ಬಿಲ್​ ಸಲ್ಲಿಕೆ ಆಗದಿದ್ದಲ್ಲಿ ಸರಕು ರವಾನೆದಾರ, ಸರಕು ಸ್ವೀಕಾರದಾರ, ಸಾಗಾಣೆದಾರ, ಇ- ಕಾಮರ್ಸ್​ ನಿರ್ವಾಹಕ, ಕೊರಿಯರ್​ ಏಜೆನ್ಸಿ ಸೇರಿದಂತೆ ಇದರ ವ್ಯಾಪ್ತಿಯಲ್ಲಿ ಬರುವ ಉದ್ದಿಮೆಗಳ ವಿದ್ಯುನ್ಮಾನ ಹಾಗೂ ಇ-ವೇ ಬಿಲ್ ಸೇವಾ ವ್ಯವಸ್ಥೆ ನಿಷೇಧವಾಗಲಿದೆ ಎಂದು ನೇರ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ ತಿಳಿಸಿದೆ.

ನಿಯಮಗಳ ಅನುಸಾರ, ತೆರಿಗೆದಾರರು ಸತತ ಎರಡು ತಿಂಗಳು ಅಥವಾ ಆರು ತಿಂಗಳಲ್ಲಿ ಎರಡು ಬಾರಿ ಇ ವೇ ಬಿಲ್ ಪಾವತಿಗೆ ವಿಳಂಬ ಮಾಡಿದರೆ, ಈ ವ್ಯವಸ್ಥೆಯಿಂದ ನಿಷೇಧಕ್ಕೆ ಒಳಗಾಗಬೇಕಾಗುತ್ತದೆ. ವ್ಯಾಪಾರಿಗಳು ಹಿಂದಿನ ಮಾಸಿಕದ ತೆರಿಗೆಯನ್ನು ಮುಂದಿನ ತಿಂಗಳ 20ರೊಳಗೆ ಪಾವತಿಸಬೇಕು. ತ್ರೈಮಾಸಿಕದ ಆದಾಯ ತೆರಿಗೆಯನ್ನು ಸೂಚಿತ ತಿಂಗಳ 18ರ ಒಳಗೆ ಸಲ್ಲಿಸುವಂತೆ ಎಚ್ಚರಿಕೆ ನೀಡಿದೆ.

ಇ-ವೇ ಬಿಲ್​ ವಂಚನೆಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಅಧಿಕವಾಗುತ್ತಿವೆ. ಏಪ್ರಿಲ್​- ಡಿಸೆಂಬರ್ ಅವಧಿಯಲ್ಲಿ 3,626 ಪ್ರಕರಣಗಳು ದಾಖಲಾಗಿದ್ದು, ₹ 15,278 ಕೋಟಿಯಷ್ಟು ವಂಚಿಸಿದ್ದಾರೆ. ಒಂದೇ ಇ-ವೇ ಬಿಲ್‌ ಇಟ್ಟುಕೊಂಡು ಕೆಲವು ಸಾಗಣೆದಾರರು ಎರಡು ಮೂರು ಸಲ ನಾನಾ ಸರಕುಗಳನ್ನು ಸಾಗಣೆ ಮಾಡಿದ್ದಾರೆ ಎಂಬ ಆರೋಪಗಳು ಕೂಡಾ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸಿಬಿಐಸಿ ಕಠಿಣ ಕ್ರಮಕ್ಕೆ ಮುಂದಾಗಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.