ETV Bharat / business

ಫ್ಲಿಪ್​ಕಾರ್ಟ್​ನಲ್ಲಿ ನೋಕಿಯಾದ ಬ್ಲೂಟೂತ್ ನೆಕ್​ಬ್ಯಾಂಡ್​, ವೈರ್​ಲೆಸ್​ ಇಯರ್​ಫೋನ್ ಲಾಂಚ್​

ನೆಕ್​ಬ್ಯಾಂಡ್ ಅತ್ಯಂತ ವೇಗವಾಗಿ ಚಾರ್ಜಿಂಗ್ ಆಗುವ ಫೀಚರ್ ಹೊಂದಿದೆ. ನೆಕ್​ ಬ್ಯಾಂಡ್​ನ 'ಹಾಪ್ ಮೋಡ್​'ನಲ್ಲಿ ಬಳಸಿ ಒಂದು ಡಿವೈಸ್​​ನಿಂದ ಮತ್ತೊಂದು ಡಿವೈಸ್​ಗೆ ಸುಲಭವಾಗಿ ಬದಲಾಗಬಹುದಾಗಿದೆ.

Nokia Bluetooth neckband, wireless earphones launched on Flipkart

author img

By

Published : Apr 6, 2021, 10:07 PM IST

ಬೆಂಗಳೂರು: ನೋಕಿಯಾ ತನ್ನ ಬ್ಲೂಟೂತ್ ನೆಕ್​ಬ್ಯಾಂಡ್ ಮತ್ತು ವೈರ್​ಲೆಸ್​ ಇಯರ್​ಫೋನ್​ಗಳನ್ನು ಫ್ಲಿಪ್​ಕಾರ್ಟ್​ನಲ್ಲಿ ಲಾಂಚ್​ ಮಾಡುವುದಾಗಿ ಘೋಷಿಸಿದ್ದು, ಈ ಮೂಲಕ ಫ್ಲಿಪ್​ಕಾರ್ಟ್​​​ ಆಡಿಯೋ ಮತ್ತು ವೈರ್​ಲೆಸ್​ ಸಾಧನಗಳ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲಿದೆ.

ನೆಕ್​ಬ್ಯಾಂಡ್​ನ ಬೆಲೆ 1,999 ರೂಪಾಯಿ ಇದ್ದರೆ, ಇಯರ್​ಫೋನ್ ಬೆಲೆ 3,999 ರೂಪಾಯಿ ಇರಲಿದೆ. ಈ ಎರಡೂ ಉತ್ಪನ್ನಗಳು ಏಪ್ರಿಲ್ 9ರಿಂದ ಫ್ಲಿಪ್​ಕಾರ್ಟ್​ನಲ್ಲಿ ದೊರಕಲಿವೆ ಎಂದು ಸಂಸ್ಥೆ ತಿಳಿಸಿದೆ.

Nokia Bluetooth neckband, wireless earphones launched on Flipkart
ನೋಕಿಯಾದ ಬ್ಲೂಟೂತ್ ನೆಕ್​ಬ್ಯಾಂಡ್

ನೋಕಿಯಾ ಬ್ಲೂಟೂತ್ ಹೆಡ್​ಸೆಟ್​ ಆದ T-2000 ಮತ್ತು ವೈರ್​ಲೆಸ್​ ಇಯರ್​ಫೋನ್ ಆದ T-3110 ಪ್ರಮುಖವಾಗಿ ನಗರ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದೆ.

ಹೆಡ್​ಸೆಟ್​​ ಕ್ವಾಲ್ಕಂ QCC3034 ಬ್ಲೂಟೂತ್ ಆಡಿಯೋ ಚಿಪ್​ ಸೆಟ್​ ಹೊಂದಿರುವುದರ ಜೊತೆಗೆ ಗದ್ದಲ ನಿರೋಧಕ ತಂತ್ರಜ್ಞಾನದೊಂದಿಗೆ ಹಿನ್ನೆಲೆಯಲ್ಲಿ ಬರುವ ಗದ್ದಲವನ್ನು ತಡೆಯುವ ಅಥವಾ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: 6ನೇ ವೇತನ ಆಯೋಗ ಜಾರಿ ಸಾಧ್ಯವಿಲ್ಲ, ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ: ಬಿಎಸ್​ವೈ ಮನವಿ

ನಮ್ಮ QCC3034 ಬ್ಲೂಟೂತ್ ಆಡಿಯೋ aptX ಆಡಿಯೋ ಟೆಕ್ನಾಲಜಿ ಹೊಂದಿದ್ದು, ಶಬ್ದದ ಗುಣಮಟ್ಟ, ಕಡಿಮೆ ವಿದ್ಯುತ್ ಬಳಕೆ, ಬಳಕೆದಾರ ಸ್ನೇಹಿ ಆಗಿರಲಿದೆ ಎಂದು ಕ್ವಾಲ್ಕಂ ಇಂಡಿಯಾದ ಬ್ಯುಸಿನೆಸ್ ಡೆವೆಲೆಪ್​ಮೆಂಟ್​ನ ಸೀನಿಯರ್ ಡೈರೆಕ್ಟರ್ ಉದಯ್ ದೊಡ್ಲ ಹೇಳಿದ್ದಾರೆ.

Nokia Bluetooth neckband, wireless earphones launched on Flipkart
ನೋಕಿಯಾದ ಬ್ಲೂಟೂತ್ ನೆಕ್​ಬ್ಯಾಂಡ್

ನೆಕ್​ಬ್ಯಾಂಡ್ ಅತ್ಯಂತ ವೇಗವಾಗಿ ಚಾರ್ಜಿಂಗ್ ಆಗುವ ಫೀಚರ್ ಹೊಂದಿದೆ. ನೆಕ್​ ಬ್ಯಾಂಡ್​ನ 'ಹಾಪ್ ಮೋಡ್​'ನಲ್ಲಿ ಬಳಸಿ ಒಂದು ಡಿವೈಸ್​​ನಿಂದ ಮತ್ತೊಂದು ಡಿವೈಸ್​ಗೆ ಸುಲಭವಾಗಿ ಬದಲಾಗಬಹುದಾಗಿದೆ.

ನೋಕಿಯಾ ವೈರ್​ಲೆಸ್​ ಇಯರ್​ಫೋನ್ ಆದ T3110 ಗದ್ದಲವನ್ನು ನಿವಾರಿಸುವ ಅಥವಾ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದ್ದು, IPX7 ತಂತ್ರಜ್ಞಾನವನ್ನು ಹೊಂದಿದೆ. ಎರಡೂ ಉತ್ಪನ್ನಗಳು ಬ್ಲೂಟೂತ್​ನ 5.1 ಟೆಕ್ನಾಲಜಿ ಹೊಂದಿವೆ, ದಕ್ಷತೆ ಹೊಂದಿರುತ್ತವೆ.

ನೋಕಿಯಾದ ಉತ್ಪನ್ನಗಳನ್ನು ಪರಿಚಯಿಸಲು ನಮಗೆ ಖುಷಿಯಾಗುತ್ತದೆ. ಈ ಉತ್ಪನ್ನಗಳ ಕೆಟಗರಿ ಹೆಚ್ಚು ಬೇಡಿಕೆ ಹೊಂದಿದೆ ಎಂದು ಫ್ಲಿಪ್​ಕಾರ್ಟ್​ನ ಪ್ರೈವೇಟ್​​ ಬ್ರಾಂಡ್ಸ್​ ವಿಭಾಗದ ಉಪಾಧ್ಯಕ್ಷ ಚಾಣಕ್ಯ ಗುಪ್ತ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.