ನವದೆಹಲಿ: ಸಾಂಕ್ರಾಮಿಕ ರೋಗದಿಂದಾಗಿ ನೇರ ತೆರಿಗೆ ಸಂಗ್ರಹಕ್ಕೆ ಸಾಕಷ್ಟು ಹೊಡೆತ ಬಿದಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಶೇ 13ರಷ್ಟು ಇಳಿಕೆ ಕಂಡು 5.87 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ (ಏಪ್ರಿಲ್ 1- ಡಿಸೆಂಬರ್ 17) ನಿವ್ವಳ ತೆರಿಗೆ ಸಂಗ್ರಹವು 6.80 ಲಕ್ಷ ಕೋಟಿ ರೂ.ಯಷ್ಟಾಗಿತ್ತು. ಸಾಂಕ್ರಾಮಿಕ ರೋಗದ ಮಧ್ಯೆ ತೆರಿಗೆ ಸಂಗ್ರಹದಲ್ಲಿನ ಕುಸಿತ ತಡೆಗಟ್ಟಲು ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿದೆ. ರಿಟರ್ನ್ಸ್ ಸಲ್ಲಿಸಲು ಗಡುವು ವಿಸ್ತರಿಸಿದ್ದು ಸಹ ಸಂಗ್ರಹದ ಮೇಲೆ ಪರಿಣಾಮ ಬೀರಿತು.
ಈರುಳ್ಳಿ ಆಮದು ವಿನಾಯತಿ ಅವಧಿ ವಿಸ್ತರಣೆ: ಗಣನೀಯ ಇಳಿಕೆ ಕಂಡ ಉಳ್ಳಾಗಡ್ಡಿ ದರ!
ಮುಂಗಡ ತೆರಿಗೆಯ ಮೂರನೇ ಕಂತಿನ ಗಡುವು ಡಿಸೆಂಬರ್ 15 ಆಗಿತ್ತು. 2021 ಆರ್ಥಿಕ ವರ್ಷದಲ್ಲಿ ಇದುವರೆಗೆ ಕಾರ್ಪೊರೇಟ್ ತೆರಿಗೆ ಸಂಗ್ರಹವು 3.04 ಲಕ್ಷ ಕೋಟಿ ರೂ. ಆಗಿದೆ. ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು 2.70 ಲಕ್ಷ ಕೋಟಿ ರೂ.ನಷ್ಟಿದೆ. ದೆಹಲಿಯ ಸಂಗ್ರಹವು ಶೇ 22ರಷ್ಟು ಕಡಿಮೆಯಾಗಿದೆ.
ಮುಂಬೈ ಮತ್ತು ಚೆನ್ನೈನ ಸಂಗ್ರಹ ಶೇ 8.4 ಮತ್ತು ಶೇ 22.4ರಷ್ಟು ಕುಸಿದಿವೆ. ಆದರೆ, ಬೆಂಗಳೂರಿನ ಸಂಗ್ರಹವು ಶೇ 4.2ರಷ್ಟು ಬೆಳವಣಿಗೆ ದಾಖಲಿಸಿದೆ. ನೇರ ತೆರಿಗೆ ಸಂಗ್ರಹ ಕಡಿಮೆಯಾಗಿದ್ದರೂ ಜಿಎಸ್‌ಟಿ ಸಂಗ್ರಹ ಹೆಚ್ಚುತ್ತಿದೆ.