ETV Bharat / business

ಕೌಂಟರ್ ಟೆರರಿಸಂ ಸಂಹಾರಕ್ಕೆ ಚೀನಾ ಸೇರಿ ಬ್ರಿಕ್ಸ್​ ನಾಯಕರು ಪಣ... ಪಾಕ್​ಗೆ ನಡುಕ ಶುರು..! - ಬ್ರಿಸಿಲ್ಲಾದಲ್ಲಿ ಬ್ರಿಕ್ಸ್​ ಶೃಂಗಸಭೆ

ಕೆಲವು ವಾರಗಳ ಹಿಂದೆ ನ್ಯೂಯಾರ್ಕ್​​ನಲ್ಲಿ ಭೇಟಿಯಾದ ಬ್ರಿಕ್ಸ್​ ನಾಯಕರು ಕೌಂಟರ್​ ಟೆರರಿಸಂ ಬಗ್ಗೆ ಚರ್ಚಿಸಿದ್ದರು. ರಾಸಾಯನಿಕ ಸಶಸ್ತ್ರ ಒಳಗೊಂಡಂತೆ ಎಲ್ಲ ವಿಧದ ಬೆಂಬಲವನ್ನು ಹತ್ತಿಕ್ಕುವ ಮಾತುಗಳನ್ನು ಆಡಿದ್ದರು. ಒಂದೂವರೆ ವರ್ಷದ ಹಿಂದೆ ಅಮೆರಿಕ, ಇಂಗ್ಲೆಂಡ್​, ಫ್ರಾನ್ಸ್​ ಮತ್ತು ಜರ್ಮನಿ ಪಾಕಿಸ್ತಾನ ಭಯೋತ್ಪಾದಕರಿಗೆ ಆರ್ಥಿಕ ಬೆಂಬಲ ನೀಡುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡು ಜಾಗತಿಕ ಹಣಕಾಸು ಕಾರ್ಯಪಡೆಯಲ್ಲಿ ನಿರ್ಬಂಧ ವಿಧಿಸಲು ಯತ್ನಿಸಿದ್ದವು. ಇದಕ್ಕೆ ಚೀನಾ ಆಕ್ಷೇಪವ್ಯಕ್ತಪಡಿಸಿತ್ತು. ಈಗ ಕೌಂಟರ್​ ಟೆರರಿಸಂ ಮಟ್ಟಹಾಕಲು ಬ್ರಿಕ್ಸ್​ ಸದಸ್ಯ ರಾಷ್ಟ್ರಗಳ ಜೊತೆ ಚೀನಾ ಕೈಜೋಡಿಸಲಿದೆ.

ಬ್ರಿಕ್ಸ್​
author img

By

Published : Nov 21, 2019, 6:42 PM IST

ನವದೆಹಲಿ: ಬ್ರೆಜಿಲ್​ ರಾಜಧಾನಿ ಬ್ರಿಸಿಲ್ಲಾದಲ್ಲಿ ನಡೆದ 11ನೇ ಬ್ರಿಕ್ಸ್​ ಶೃಂಗಸಭೆಯು ಮುಕ್ತಯವಾಗಿದ್ದು, ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ ಹಾಗೂ ವ್ಯಾಪಾರ ಮತ್ತು ಹಣಕಾಸು ಚಟುವಟಿಕೆಯಲ್ಲಿ ಪರಸ್ಪರ ಸಹಕಾರ ನೀಡುವುದಾಗಿ ಬ್ರಿಕ್ಸ್​​ ನಾಯಕರು ನಿರ್ಧರಿಸಿದ್ದಾರೆ.

ಜಾಗತಿ ಸಮಾನ ಅವಕಾಶ ಮತ್ತು ಭವಿಷ್ಯದ ಪ್ರಗತಿಯ ತತ್ವದೊಂದಿಗೆ ಬ್ರೆಜಿಲ್​, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಬ್ರಿಕ್ಸ್​ ಸಂಘಟನೆಯನ್ನು ದಶಕದ ಹಿಂದೆ ಕಟ್ಟಿಕೊಂಡವು.
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್​), ಚೀನಾ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಮರದಲ್ಲಿ ಸುಂಕ ದರ ಏರಿಕೆಯು ಜಾಗತಿಕ ಆರ್ಥಿಕತೆ ಹಿನ್ನಡೆ ಕಾರಣವಾಗಿದೆ ಎಂದು ಎಚ್ಚರಿಕೆ ನೀಡಿತ್ತು. ಇದರಿಂದ ಜಾಗತಿಕ ಜಿಡಿಪಿಯಲ್ಲಿ ಶೇ 0.5ರಷ್ಟು ಕುಸಿತಗೊಂಡಿದೆ. ನಷ್ಟದ ಪ್ರಮಾಣವು ದಕ್ಷಿಣ ಆಫ್ರಿಕಾದ ವಾರ್ಷಿಕ ಆದಾಯಕ್ಕಿಂತ ಅಧಿಕವಾಗಿದೆ ಎಂದಿತ್ತು. ಜಾಗತಿಕ ಹಣಕಾಸು ಸಂಸ್ಥೆಯ ಎಚ್ಚರಿಕೆಯ ಬಳಿಕ ಚೀನಾ ಒಳಗೊಂಡಂತೆ ಅಭಿವೃದ್ಧಿಶೀಲ ರಾಷ್ಟ್ರಗಳ ಒಕ್ಕೂಟದ ಸಭೆ ಸಮಾಪ್ತಿಗೊಂಡಿದೆ.

ಬ್ರಿಕ್ಸ್​ ನಾಯಕರು ಜಾಗತಿಕ ಆರ್ಥಿಕತೆಯ ಮೇಲೆ ಭಯೋತ್ಪಾದನೆ ಉಂಟುಮಾಡುತ್ತಿರುವ ಪರಿಣಾಮ ಬಗ್ಗೆ ಚರ್ಚಿಸಿದ್ದಾರೆ. ಪ್ರಧಾನಿ ಮೋದಿಯ, 'ಉಗ್ರರ ಕೃತ್ಯಗಳಿಂದ ಕೋಟ್ಯಂತರ ಡಾಲರ್​ ಮೌಲ್ಯದಷ್ಟು ಸಂಪತ್ತ ನಷ್ಟವಾಗುತ್ತಿದೆ ಮತ್ತು ವಿಶ್ವದಾದ್ಯಂತ ವಾರ್ಷಿಕ 2.25 ಲಕ್ಷ ಜನರು ಭಯೋತ್ಪಾದಕರ ದಾಳಿಗೆ ಬಲಿಯಾಗುತ್ತಿದ್ದಾರೆ' ಎಂಬ ಹೇಳಿಕೆಯನ್ನು ಬ್ರಿಕ್ಸ್​ ನಾಯಕರು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಕೆಲವು ವಾರಗಳ ಹಿಂದೆ ನ್ಯೂಯಾರ್ಕ್​​ನಲ್ಲಿ ಭೇಟಿಯಾದ ಬ್ರಿಕ್ಸ್​ ನಾಯಕರು ಕೌಂಟರ್​ ಟೆರರಿಸಂ ಬಗ್ಗೆ ಚರ್ಚಿಸಿದ್ದರು. ರಾಸಾಯನಿಕ ಸಶಸ್ತ್ರ ಒಳಗೊಂಡಂತೆ ಎಲ್ಲ ವಿಧದ ಬೆಂಬಲವನ್ನು ಹತ್ತಿಕ್ಕುವ ಮಾತುಗಳನ್ನು ಆಡಿದ್ದರು. ಒಂದೂ ವರೆ ವರ್ಷದ ಹಿಂದೆ ಅಮೆರಿಕ, ಇಂಗ್ಲೆಂಡ್​, ಫ್ರಾನ್ಸ್​ ಮತ್ತು ಜರ್ಮನಿ ಪಾಕಿಸ್ತಾನ ಭಯೋತ್ಪಾದಕರಿಗೆ ಆರ್ಥಿಕ ಬೆಂಬಲ ನೀಡುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡು ಜಾಗತಿಕ ಹಣಕಾಸು ಕಾರ್ಯಪಡೆಯಲ್ಲಿ ನಿರ್ಬಂಧ ವಿಧಿಸಲು ಯತ್ನಿಸಿದ್ದವು. ಇದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಕೌಂಟರ್​ ಟೆರರಿಸಂ ಮಟ್ಟಹಾಕಲು ಬ್ರಿಕ್ಸ್​ ಸದಸ್ಯ ರಾಷ್ಟ್ರಗಳ ಜೊತೆ ಚೀನಾ ಕೈಜೋಡಿಸಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.