ಚೆನ್ನೈ: ಯಾವುದೇ ಕಾರಣವಿಲ್ಲದೆ ಬ್ಯಾಂಕ್ಗಳು ಸಾಲ ನೀಡಲು ನಿರಾಕರಿಸಿದರೆ ದೂರು ನೀಡುವಂತೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ತಿಳಿಸಿದ್ದಾರೆ.
ಇತ್ತೀಚೆಗೆ ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2020-21ರಲ್ಲಿ ಮಂಡಿಸಿದ ಪ್ರಸ್ತಾವನೆಗಳನ್ನು ಇಲ್ಲಿನ ವ್ಯಾಪಾರಿ ಮತ್ತು ಉದ್ಯಮಗಳಿಗೆ ವಿವರಿಸಿದ್ದಾರೆ. ಕಾರಣವಿಲ್ಲದೆ ಬ್ಯಾಂಕ್ಗಳು ಸಾಲವನ್ನು ನೀಡಲು ನಿರಾಕರಿಸುತ್ತಿದ್ದರೆ ಎಂಎಸ್‌ಎಂಇಗಳು ಕೇಂದ್ರಕ್ಕೆ ದೂರು ಕಳುಹಿಸಬಹುದು. ಇದಕ್ಕಾಗಿ ವಿಶೇಷ ಸೆಂಟರ್ ಅನ್ನು ಶೀಘ್ರವೇ ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ದೂರಿನ ಪ್ರತಿಯನ್ನು ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರಿಗೂ ಸಹ ಕಳುಹಿಸಬೇಕು. ಮೂಲಭೂತವಾದವುಗಳು ಉತ್ತಮವಾಗಿ ಇರುವುದರಿಂದ ವಿದೇಶಿ ವಿನಿಮಯ ಸಂಗ್ರಹವೂ ಉತ್ತಮವಾಗಿದೆ. ಬಜೆಟ್ನಲ್ಲಿನ ಘೋಷಣೆಗಳು ಸಮಾಜದ ಎಲ್ಲಾ ವರ್ಗದವರಿಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಿದ್ದಾರೆ ಎಂದರು.
ಒಟ್ಟಾರೆ ಆರ್ಥಿಕ ಮೂಲಭೂತ ಅಂಶಗಳು ಉತ್ತಮವಾಗಿವೆ. ನಮ್ಮ ಗಮನ ಆಸ್ತಿಗಳನ್ನು ಸೃಷ್ಟಿಸುವುದು ಹಾಗೂ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವುದಾಗಿದೆ ಎಂದು ಸೀತಾರಾಮನ್ ತಿಳಿಸಿದರು.