ಬೆಂಗಳೂರು: ಕೋವಿಡ್ -19 ಪ್ರಭಾವದಿಂದಾಗಿ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಈಗಿನ ಕಠಿಣ ಸವಾಲಿನ ಸಮಯ ಹಿಂದೆಂದು ಕಂಡಿರಲಿಲ್ಲ ಎಂದು ಐಟಿ ಉದ್ಯಮದ ಹಿರಿಯ ತಜ್ಞ ಎಸ್. ಮಹಾಲಿಂಗಂ ಅಭಿಪ್ರಾಯಪಟ್ಟಿದ್ದಾರೆ.
ಐಟಿ ಕಂಪನಿಗಳು ಲಾಕ್‌ಡೌನ್ ಅವಧಿಯಲ್ಲೂ ವಿಶ್ವಾಸಾರ್ಹ ಪಾಲುದಾರರಾಗುವಂತಹ ಸಾಮರ್ಥ್ಯ ತೋರುತ್ತಿರುವುದು ಶ್ಲಾಘನೀಯ. ನಾನು 1970ರಲ್ಲಿ ಐಟಿ ಉದ್ಯಮಕ್ಕೆ ಸೇರಿಕೊಂಡೆ. ಸಂಪೂರ್ಣ ರಫ್ತು ರಚನೆ ಮತ್ತು ಜಾಗತಿಕ ಗ್ರಾಹಕರಿಗೆ ಸೇವೆ ಸಲ್ಲಿಸುವಲ್ಲಿ ಸಹ ಭಾಗಿಯಾಗಿದ್ದೆ ಎಂದು ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಾರ್ಯನಿರ್ವಾಹಕ ನಿರ್ದೇಶಕರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಭಾರತೀಯ ಐಟಿ ಕಂಪನಿಗಳು ಏಷ್ಯಾದ ಬಿಕ್ಕಟ್ಟು, ವೈ 2 ಕೆ (2000 ಅವಧಿಯಲ್ಲಿನ ಸಮಸ್ಯೆಗಳು) ಮತ್ತು 2008ರ ಜಾಗತಿಕ ಆರ್ಥಿಕ ಹಿಂಜರಿತ ಅನೇಕ ಗ್ರಾಹಕರ ಮೇಲೆ ಪರಿಣಾಮ ಬೀರಿದ್ದವು ಎಂದರು.
ಈಗ ನಡೆಯುತ್ತಿರುವ ಸಂಗತಿಗಳಿಗೆ ಈ ಹಿಂದಿನ ಯಾವುದೇ ಸಂಗತಿಗಳನ್ನು ಹೋಲಿಕೆ ಮಾಡಲು ಆಗುವುದಿಲ್ಲ. ಇದು ಅತ್ಯಂತ ಗಂಭೀರವಾಗಿದ್ದು, ಇದರ ಪರಿಣಾಮ ಅಸಾಧಾರಣವಾಗಲಿದೆ. ಮೂಲಭೂತವಾಗಿ ಐಟಿ ಉದ್ಯಮದ ಸಾಮರ್ಥ್ಯ ಸಾಬೀತಾಗಲಿದೆ. ಆದರೆ, ಜಾಗತಿಕ ವ್ಯವಹಾರಗಳು ಪುನರಾರಂಭಗೊಳ್ಳುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಈಗಿನ ಸವಾಲಿನ ಸಮಯದಲ್ಲಿ ಅದು ಸುಲಭವಲ್ಲ ಎಂದರು.
ಮುಂಬರುವ ದಿನಗಳಲ್ಲಿ ವಲಸೆಯ ಜಾಗತಿಕ ನಿಯಮಗಳು ಬದಲಾಗುತ್ತವೆ. ಜನರ ಚಲನೆ ಬದಲಾಗುತ್ತದೆ. ಈ ಸಮಯದಲ್ಲಿ ಅನೇಕ ಸಂಗತಿಗಳು ಬದಲಾಗಲಿವೆ ಎಂದು ಮಹಾಲಿಂಗಂ ಮುನ್ಸೂಚನೆ ನೀಡಿದ್ದಾರೆ.
ರಫ್ತಿಗೆ ಸಂಬಂಧಿಸಿದಂತೆ ಭಾರತೀಯ ಐಟಿ ಕಂಪನಿಗಳು ದೇಶದಿಂದ ವಿತರಣೆಯು ದೋಷ ರಹಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕಾದ ನವೀನ ಮಾರ್ಗಗಳನ್ನು ಹೊರ ತಂದಿದೆ. ಲಾಕ್‌ಡೌನ್ ಪರಿಸ್ಥಿತಿಯಲ್ಲಿಯೂ ಸಹ ಉನ್ನತ ಮಟ್ಟದ ಸೇವೆಯನ್ನು ನೀಡುತ್ತಿವೆ ಎಂದು ಹೇಳಿದರು.
ಐಟಿ ಕಂಪನಿಗಳು ಸೇವೆ ಸಲ್ಲಿಸುವ ಕಂಪನಿಗಳು (ಗ್ರಾಹಕರು) ಆರೋಗ್ಯಕರವಾಗಿರಬೇಕು. ಇದನ್ನು ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿಯಾಗಿದೆ. ಜಾಗತಿಕ ಮೌಲ್ಯಯುಕ್ತ ಸರಪಳಿಯ ಬಿಕ್ಕಟ್ಟು ಭಾರತೀಯ ಕಂಪನಿಗಳು ಅತ್ಯಂತ ವಿಶ್ವಾಸಾರ್ಹ ಪಾಲುದಾರರು ಎಂದು ಸಾಬೀತಾಗಿದೆ ಎಂದರು.
ಲಾಕ್‌ಡೌನ್ ಅವಧಿಯ ನಂತರ ಭಾರತೀಯ ಐಟಿ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರದ ಕಂಪನಿಗಳು ತಮ್ಮ ವ್ಯವಹಾರದ ವಾತಾವರಣದ ಬಗ್ಗೆ ಮರು ಚಿಂತನೆ ಮಾಡಬೇಕಾದ ಅದ್ಭುತವಾದ ಅವಕಾಶವನ್ನು ಎದುರು ನೋಡುತ್ತಿವೆ ಎಂದು ಸಲಹೆ ನೀಡಿದ್ದಾರೆ.