ETV Bharat / business

Monsoon session : ಚರ್ಚೆ ಇಲ್ಲದೆ ಲೋಕಸಭೆಯಲ್ಲಿ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ-2021 ಅಂಗೀಕಾರ - ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ-2021

ಕೆಲ ಆದಾಯಗಳು ತೆರಿಗೆ ಕಾಯ್ದೆ ಅಡಿ ಬರುವುದಿಲ್ಲ. ಇದನ್ನು ಸುಪ್ರೀಂಕೋರ್ಟ್‌ ಕೂಡ ತಳ್ಳಿ ಹಾಕಿತ್ತು ಎಂದು ಹೇಳಿದ್ದಾರೆ. ಇದರ ಪರಿಣಾಮವಾಗಿ, ಆದಾಯ ತೆರಿಗೆ ಕಾಯಿದೆ-1961 ಅನ್ನು ತಿದ್ದುಪಡಿ ಮಾಡಿ ಹಣಕಾಸು ಕಾಯಿದೆ-2012ಯನ್ನು ಜಾರಿಗೆ ತರಲಾಗಿತ್ತು..

Monsoon session: Bill to nullify retrospective tax passed in LS amid protests by Opposition
Monsoon session: ಚರ್ಚೆ ಇಲ್ಲದೆ ಲೋಕಸಭೆಯಲ್ಲಿ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ-2021 ಅಂಗೀಕಾರ
author img

By

Published : Aug 6, 2021, 3:58 PM IST

ನವದೆಹಲಿ : ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ-2021 ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಈ ತಿದ್ದುಪಡಿ ಮಸೂದೆ ಮಂಡಿಸುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ಘೋಷಣೆ ಹಾಗೂ ಪ್ರತಿಭಟನೆ ನಡೆಸಿದರು. ಆದರೂ ಯಾವುದೇ ಚರ್ಚೆಯಿಲ್ಲದೆ ಮಸೂದೆ ಅಂಗೀಕಾರವಾಗಿದೆ.

ಈ ಬಗ್ಗೆ ಮಾತನಾಡಿದ ಹಣಕಾಸು ಸಚಿವೆ ಸೀತಾರಾಮನ್‌, ನಾವು ಈ ಮಸೂದೆಯನ್ನು ಏಕೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಕೆಲವು ಮಾತುಗಳನ್ನು ಹೇಳಲು ಬಯಸುತ್ತೇನೆ. ಆದಾಯದ ಮೇಲೆ ತೆರಿಗೆ ವಿಧಿಸುವ ವಿಷಯದ ಸಂಬಂಧ ಪೂರ್ವಾನ್ವಯ ತೆರಿಗೆ ಬೇಡಿಕೆಗಳನ್ನು ಹಿಂಪಡೆಯಲು ಹಾಗೂ ವಿದೇಶಿ ಕಂಪನಿಯ ಷೇರುಗಳ ವರ್ಗಾವಣೆಯಿಂದ ಭಾರತೀಯ ಸ್ವತ್ತುಗಳ ಸಮಸ್ಯೆಯು ಸುದೀರ್ಘ ವ್ಯಾಜ್ಯಗಳಿಗೆ ಒಳಪಟ್ಟಿತ್ತು.

ಕೆಲ ಆದಾಯಗಳು ತೆರಿಗೆ ಕಾಯ್ದೆ ಅಡಿ ಬರುವುದಿಲ್ಲ. ಇದನ್ನು ಸುಪ್ರೀಂಕೋರ್ಟ್‌ ಕೂಡ ತಳ್ಳಿ ಹಾಕಿತ್ತು ಎಂದು ಹೇಳಿದ್ದಾರೆ. ಇದರ ಪರಿಣಾಮವಾಗಿ, ಆದಾಯ ತೆರಿಗೆ ಕಾಯಿದೆ-1961 ಅನ್ನು ತಿದ್ದುಪಡಿ ಮಾಡಿ ಹಣಕಾಸು ಕಾಯಿದೆ-2012ಯನ್ನು ಜಾರಿಗೆ ತರಲಾಗಿತ್ತು.

ಇದರಿಂದ ಆದಾಯವನ್ನು ತೆರಿಗೆಗೆ ಒಳಪಡಿಸಬಹುದೆಂದು ಸ್ಪಷ್ಟಪಡಿಸಿತು. ಕೋರ್ಟ್‌ನಲ್ಲಿ ಪ್ರಕರಣ ಇದ್ದರೂ ಹಣಕಾಸು ಕಾಯಿದೆ-2012 ಕೂಡ ಈ ಆದಾಯಕ್ಕೆ ಏರಿಸಿದ ಬೇಡಿಕೆಯು ಮಾನ್ಯವಾಗಿರುತ್ತದೆ.

ಇದನ್ನೂ ಓದಿ: ತೆರಿಗೆ ಕಾನೂನುಗಳ ತಿದ್ದುಪಡಿ ಮಸೂದೆ-2021 ಲೋಕಸಭೆಯಲ್ಲಿ ಮಂಡನೆ: ವೊಡಾಫೋನ್‌, ಕೈರ್ನ್‌ ವ್ಯಾಜ್ಯಗಳಿಗೆ ಮುಕ್ತಿ!

ಈ ಹಿಂದಿನ ತೆರಿಗೆಗೆ ಸ್ಪಷ್ಟೀಕರಣ ನೀಡಿ ತಿದ್ದುಪಡಿ ಮಾಡಲಾಗಿದೆ. ಆದಾಗ್ಯೂ, ಈ ಕ್ರಮಕ್ಕೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ನಾವು ವಿರೋಧ ಪಕ್ಷದಲ್ಲಿದ್ದಾಗಲೂ ಇದನ್ನು ಸ್ಪಷ್ಟವಾಗಿ ಹೇಳಿದ್ದೇವೆ. ಕಾನೂನಿನಲ್ಲಿ ಕೆಟ್ಟದು ಹಾಗೂ ಹೂಡಿಕೆದಾರರ ಭಾವನೆಗಳಿಗೆ ಕೆಟ್ಟದು ಎಂದು ಆಕ್ಷೇಪಣೆ ವ್ಯಕ್ತಪಡಿಸಿದ್ದೆವು ಎಂದು ಕೇಂದ್ರ ಸಚಿವರು ವಿವರಿಸಿದ್ದಾರೆ.

ನಿನ್ನೆಯಷ್ಟೇ ತೆರಿಗೆ ಕಾನೂನುಗಳ ತಿದ್ದುಪಡಿ ಮಸೂದೆ-2021 ಅನ್ನು ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್‌ ಲೋಕಸಭೆಯಲ್ಲಿ ಮಂಡಿಸಿದ್ದರು. ಇಂದು ಮಸೂದೆಯನ್ನು ಅಂಗೀಕರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.