ವಾಷಿಂಗ್ಟನ್ : ಮೈಕ್ರೋಸಾಫ್ಟ್ ಸಾಫ್ಟ್‌ವೇರ್ ಆಧಾರವಾಗಿರುವ ಕೆಲವು ಕೋಡ್‌ಗಳನ್ನು ಹ್ಯಾಕರ್‌ಗಳು ವೀಕ್ಷಿಸಲು ಸಾಧ್ಯ. ಆದರೆ, ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಮೈಕ್ರೋಸಾಫ್ಟ್ ಕಂಪನಿ ತಿಳಿಸಿದೆ.
ಯುಎಸ್ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳ ಕುರಿತು ಆನ್ಲೈನ್ನಲ್ಲಿರುವ ಮಾಹಿತಿಯನ್ನು ಸೋರಿಕೆ ಮಾಡಲು ಹ್ಯಾಕರ್ಸ್ಗಳು ಪ್ರಯತ್ನಿಸಿದ್ದಾರೆ. ಆದರೆ, ಇದರಿಂದಾಗಿ ಯಾವುದೇ ಹಾನಿಯುಂಟಾಗಿಲ್ಲ ಎಂದು ಮೈಕ್ರೋಸಾಫ್ಟ್ ನಿನ್ನೆ ಬ್ಲಾಗ್ನಲ್ಲಿ ಪೋಸ್ಟ್ ಮಾಡಿದೆ.
ಮೈಕ್ರೋಸಾಫ್ಟ್ ಸಾಫ್ಟ್‌ವೇರ್ ಆಧಾರವಾಗಿರುವ ಕೆಲ ಕೋಡ್‌ಗಳನ್ನು ವೀಕ್ಷಿಸಲು ಸಾಧ್ಯವಿದ್ದು, ಅದರಲ್ಲಿ ಯಾವುದೇ ರೀತಿಯಾದ ಬದಲಾವಣೆ ಸಾಧ್ಯವಿಲ್ಲ ಎಂದು ತಿಳಿಸಿದೆ. ಮಾಹಿತಿ ಸೋರಿಕೆ ತಡೆಯಲು ಮೈಕ್ರೋಸಾಫ್ಟ್ ಕಂಪನಿ ಹೆಚ್ಚಿನ ಗಮನ ಹರಿಸುತ್ತಿದೆ. ಅದಕ್ಕಾಗಿ ಸಾಫ್ಟ್‌ವೇರ್‌ವೊಂದನ್ನ ಅಭಿವೃದ್ಧಿ ಪಡಿಸಿದ್ದು, ಇದು ಕೋಡ್ ಹಂಚಿಕೆಯನ್ನು ಅವಲಂಬಿಸಿದೆ. ಇದನ್ನು "ಆಂತರಿಕ ಮೂಲ" ಎಂದು ಕರೆಯಲಾಗುತ್ತದೆ.
ಇನ್ನು, ಸೈಬರ್ ಸೆಕ್ಯುರಿಟಿ ತಜ್ಞರು ಮತ್ತು ಯುಎಸ್ ಅಧಿಕಾರಿಗಳು ಹ್ಯಾಕ್‌ನ ಹಿಂದೆ ರಷ್ಯಾ ಇದೆ ಎಂದು ಶಂಕಿಸಿದ್ದಾರೆ. ಕಳೆದ ತಿಂಗಳ ಆರಂಭದಲ್ಲಿ 40ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಐಟಿ ಕಂಪನಿಗಳ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಲಾಗಿದೆ.