ನವದೆಹಲಿ: ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ 2022 ರ ಜನವರಿಯಲ್ಲಿ 1,28,924 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಇದೇ ಜನವರಿ 2021ರಲ್ಲಿ 1,39,002 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೇಶೀಯ PV ಮಾರಾಟದಲ್ಲಿ ಶೇಕಡಾ 7.25 ರಷ್ಟು ಕುಸಿತ ದಾಖಲಿಸಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆದಾಗ್ಯೂ, ಕಂಪನಿಯ ಒಟ್ಟಾರೆ ಮಾರಾಟವು ಈ ವರ್ಷದ ಜನವರಿಯಲ್ಲಿ 1,54,379 ಯುನಿಟ್‌ಗಳಷ್ಟಿತ್ತು. ಇದು 3.96 ಪ್ರತಿಶತದಷ್ಟು ಕುಸಿತವನ್ನು ದಾಖಲಿಸಿದೆ. ಒಟ್ಟು ಮಾರಾಟವು 1,32,461 ಯುನಿಟ್ಗಳಾಗಿವೆ (ಪ್ರಯಾಣಿಕರ ವಾಹನ + ಲಘು ವಾಣಿಜ್ಯ ವಾಹನ) ಇದರಲ್ಲಿ 17,937 ಯುನಿಟ್ ರಫ್ತು ಸಹ ಒಳಗೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 160,752 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಎಲೆಕ್ಟ್ರಾನಿಕ್ ಉಪಕರಣಗಳ ಕೊರತೆ ಪ್ರಾಥಮಿಕವಾಗಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ವಾಹನಗಳ ಉತ್ಪಾದನೆಯ ಮೇಲೆ ಸಣ್ಣ ಪರಿಣಾಮ ಬೀರಿರುವುದು ನಿಜ ಎಂದಿದ್ದು. ಇದನ್ನು ಸರಿದೂಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ:ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ಹಣಕಾಸು ನೆರವು.. ಬಜೆಟ್ನಲ್ಲಿ 1 ಲಕ್ಷ ಕೋಟಿ ರೂ. ಬಡ್ಡಿ ರಹಿತ ಸಾಲ