ಮುಂಬೈ: ಜಾಗತಿಕವಾಗಿ ಕಂಡುಬಂದ ಸಕಾರಾತ್ಮಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಷೇರುಪೇಟೆ 499 ಅಂಕಗಳ ಏರಿಕೆ ದಾಖಲಿಸಿದೆ.
ಮುಂಬೈ ಷೇರುಪೇಟೆ ಆರಂಭದಲ್ಲೇ 499 ಅಂಕಗಳ ಏರಿಕೆ ದಾಖಲಿಸುವ ಮೂಲಕ 41,115 ಅಂಕಗಳಿಗೆ ತಲುಪಿದೆ. ಇನ್ನು ನಿಫ್ಟಿ ಸಹ 143 ಅಂಶಗಳ ಏರಿಕೆ ದಾಖಲಿಸಿದೆ.
ಕಳೆದ ಎಂಟು ತಿಂಗಳಲ್ಲಿ ಸೇವಾ ಒಲಯ ಚೇತರಿಸಿಕೊಂಡಿದೆ. ಈ ನಡುವೆ ಭಾರಿ ಲಾಭ ಗಳಿಸಿರುವ ಎಸ್ಬಿಐ ಷೇರುಗಳು ಶೇ 5 ರಷ್ಟು ಏರಿಕೆ ಕಾಣುವ ಮೂಲಕ ಷೇರುಪೇಟೆಯ ಚೇತರಿಕೆ ಕಾರಣವಾಯ್ತು.