ವಾಷಿಂಗ್ಟನ್: 'ಮೇಕ್ ಇನ್ ಇಂಡಿಯಾ' ಅಭಿಯಾನದ ಮೂಲಕ ಭಾರತವು ಇತ್ತೀಚೆಗೆ ಆಮದು ಪರ್ಯಾಯ ಮಾರ್ಗಗಳಿಗೆ ಒತ್ತು ನೀಡುತ್ತಿದೆ. ಇದರಿಂದ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಎದುರಿಸುತ್ತಿರುವ ಸವಾಲುಗಳನ್ನು ಅದು ಸಂಕ್ಷಿಪ್ತಗೊಳಿಸಿ ಹೊರಗೆಡವಿದೆ ಎಂದು ಬೈಡನ್ ಆಡಳಿತ ಯುಎಸ್ ಕಾಂಗ್ರೆಸ್ಗೆ ತಿಳಿಸಿದೆ.
ಅಮೆರಿಕ ರಫ್ತುದಾರರ ಮೇಲೆ ಪರಿಣಾಮ ಬೀರುವ ದೀರ್ಘಕಾಲದ ಮಾರುಕಟ್ಟೆ ಪ್ರವೇಶ ಅಡೆತಡೆ ಪರಿಹರಿಸಲು 2020ರ ಅವಧಿಯಲ್ಲಿ ಅಮೆರಿಕ ಭಾರತದ ಜತೆಗೆ ತನ್ನ ಸ್ನೇಹವನ್ನು ಮುಂದುವರೆಸಿದೆ ಎಂದು ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್ (ಯುಎಸ್ಟಿಆರ್) ತನ್ನ 2021ರ ವ್ಯಾಪಾರ ನೀತಿ ಕಾರ್ಯಸೂಚಿ ಮತ್ತು 2020ರ ವಾರ್ಷಿಕ ವರದಿಯಲ್ಲಿ ಹೇಳಿದೆ.
ಭಾರತದ ದೊಡ್ಡ ಮಾರುಕಟ್ಟೆ, ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯತ್ತ ಪ್ರಗತಿಯು ಅನೇಕ ಅಮೆರಿಕದ ರಫ್ತುದಾರರಿಗೆ ಅತ್ಯಗತ್ಯ ಮಾರುಕಟ್ಟೆಯನ್ನಾಗಿ ಮಾಡಿದೆ. ವ್ಯಾಪಾರ ನಿರ್ಬಂಧಿತ ನೀತಿಗಳ ಸಾಮಾನ್ಯ ಮತ್ತು ಸ್ಥಿರವಾದ ಪ್ರವೃತ್ತಿಯ ದ್ವಿಪಕ್ಷೀಯ ವ್ಯಾಪಾರ ಬಂಧುತ್ವ ಸಾಮರ್ಥ್ಯದ ಪ್ರತಿಬಂಧಕವಾಗಿಸಿದೆ. ಆಮದು ಪರ್ಯಾಯಕ್ಕೆ ಇತ್ತೀಚಿಗೆ ಭಾರತ ಒತ್ತು ನೀಡಿದ ಮೇಕ್ ಇನ್ ಇಂಡಿಯಾ ಅಭಿಯಾನ, ದ್ವಿಪಕ್ಷೀಯ ವ್ಯಾಪಾರ ಸಂಬಂಧ ಎದುರಿಸುತ್ತಿರುವ ಸವಾಲುಗಳನ್ನು ನಿರೂಪಿಸಿದೆ ಎಂದು ಯುಎಸ್ಟಿಆರ್ ಕಾಂಗ್ರೆಸ್ಗೆ ನೀಡಿದ ವರದಿಯಲ್ಲಿ ತಿಳಿಸಿದೆ.
ಜಿಎಸ್ಟಿ ಮಾರುಕಟ್ಟೆ ಪ್ರವೇಶ ಮಾನದಂಡದ ಜತೆಗೆ ಭಾರತದ ಅನುಸರಿಸುತ್ತಿರುವ ನೀತಿಗಳ ಬಗೆಗಿನ ಕಳವಳ ಪರಿಶೀಲನೆಯ ನಂತರ, 2019ರ ಜೂನ್ 5ರಿಂದ ಸಾಮಾನ್ಯ ಪದ್ಧತಿಯ ಆದ್ಯತೆಗಳ (ಜಿಎಸ್ಟಿ) ಕಾರ್ಯಕ್ರಮದಡಿ ಭಾರತದ ಅರ್ಹತೆಯನ್ನು ರದ್ದುಗೊಳಿಸಿತ್ತು.
ಇದನ್ನೂ ಓದಿ: ಝೂಮ್ ಆದಾಯದಲ್ಲಿ ಶೇ 369ರಷ್ಟು ಏರಿಕೆ!
ಭಾರತದ ಜಿಎಸ್ಪಿ ಪ್ರಯೋಜನಗಳನ್ನು ಸ್ಥಗಿತಗೊಳಿಸಿದ ನಂತರ, ಅಮೆರಿಕ ಮತ್ತು ಭಾರತವು 2019ರ ಸೆಪ್ಟೆಂಬರ್- ಡಿಸೆಂಬರ್ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶ ಫಲಿತಾಂಶ ಪ್ರತಿನಿಧಿಸುವ ಅಂಶಗಳ ಮೇಲೆ ತೀವ್ರವಾಗಿ ಕೆಲಸ ಮಾಡಿದವು. ಈ ಸಂಬಂಧವು 2020ರ ಉದ್ದಕ್ಕೂ ಮುಂದುವರೆಯಿತು.
ಈ ಸಮಾಲೋಚನೆಯಲ್ಲಿ ವಿವಿಧ ಸುಂಕ ರಹಿತ ಅಡೆತಡೆಗಳ ಪರಿಹರಿ, ಕೆಲವು ಭಾರತೀಯ ಸುಂಕಗಳನ್ನು ಗುರಿಯಾಗಿರಿ ಮತ್ತು ಇತರ ಮಾರುಕಟ್ಟೆ ಪ್ರವೇಶ ಸುಧಾರಣೆಗಳನ್ನು ಒಳಗೊಂಡಿವೆ ಎಂದು ಹೇಳಿದೆ.
ಬೌದ್ಧಿಕ ಆಸ್ತಿ (ಐಪಿ) ರಕ್ಷಣೆ ಮತ್ತು ಅನುಷ್ಠಾನ, ಎಲೆಕ್ಟ್ರಾನಿಕ್ ವಾಣಿಜ್ಯ ಮತ್ತು ಡಿಜಿಟಲ್ ವ್ಯಾಪಾರದ ಮೇಲೆ ಪರಿಣಾಮ ಬೀರುವ ನೀತಿಗಳ ಅಭಿವೃದ್ಧಿ, ಕೃಷಿ ಮತ್ತು ಕೃಷಿಯೇತರ ಸರಕು ಮತ್ತು ಸೇವೆಗಳ ಮಾರುಕಟ್ಟೆ ಪ್ರವೇಶ ಸೇರಿದಂತೆ ದ್ವಿಪಕ್ಷೀಯ ವ್ಯಾಪಾರ ಸಮಸ್ಯೆಗಳ ಮೇಲೆ ಪರಿಣಾಮ ಬೀರುವ ನಿರ್ದಿಷ್ಟ ಕಾಳಜಿಗಳಿಗೆ ಅಮೆರಿಕ 2020ರ ಉದ್ದಕ್ಕೂ ಭಾರತದೊಂದಿಗೆ ನಿರಂತರವಾಗಿ ಮಾತುಕತೆ ನಡೆಸಿತ್ತು ಎಂದಿದೆ.
ಇಂಗ್ಲೆಂಡ್ ಅತಿದೊಡ್ಡ ಸೇವೆಗಳ ಪೂರೈಕೆದಾರರಾಗಿ ಉಳಿದಿದ್ದರೆ, 2019ರಲ್ಲಿ ಒಟ್ಟು ಅಮೆರಿಕ ಸೇವೆಗಳ ಆಮದುಗಳಲ್ಲಿ 62.3 ಬಿಲಿಯನ್ ಡಾಲರ್ಗಳಷ್ಟಿದೆ. ಕೆನಡಾ ಪಾಲು 38.6 ಬಿಲಿಯನ್ ಡಾಲರ್, ಜಪಾನ್ 35.8 ಬಿಲಿಯನ್ ಡಾಲರ್, ಜರ್ಮನಿ 34.9 ಬಿಲಿಯನ್ ಡಾಲರ್ ಮತ್ತು ಮೆಕ್ಸಿಕೊ 29.8 ಬಿಲಿಯನ್ ಡಾಲರ್ನಷ್ಟಿದೆ.