ETV Bharat / business

ಸಾರ್ವಕಾಲಿಕ ದಾಖಲೆ ಬರೆದಿದೆ ಷೇರು ಮಾರುಕಟ್ಟೆ.. ವರ್ಷದ ಆರಂಭದಿಂದಲೂ ನಿಂತಿಲ್ಲ ಗೂಳಿ ಓಟ

author img

By

Published : Aug 27, 2021, 7:55 PM IST

ಜಾಗತಿಕ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಹೊಸ ದಾಖಲೆ ಬರೆಯುತ್ತಿದೆ. ಮುಂಬೈ ಷೇರುಪೇಟೆ ಈ ವರ್ಷದ ಆರಂಭದಿಂದಲೂ ಏರುಗತಿಯ ದಾಖಲೆಗೆ ಸಾಕ್ಷಿಯಾಗಿದೆ. ಇದೀಗ ಈ ಸೂಚ್ಯಾಂಕವು 56,000 ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ.

major-market-trends-in-2021
ಸಾರ್ವಕಾಲಿಕ ದಾಖಲೆ ಬರೆದಿದೆ ಷೇರು ಮಾರುಕಟ್ಟೆ

ನವದೆಹಲಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಕಳೆದೆರಡು ತಿಂಗಳಿನಿಂದಲೂ ಮಾರುಕಟ್ಟೆ ಸೂಚ್ಯಾಂಕ ಜಿಗಿಯುತ್ತಲೇ ಇದ್ದು, ಈ ವರ್ಷ ಮಾರುಕಟ್ಟೆ ಹಲವು ದಾಖಲೆಗೆ ಸಾಕ್ಷಿಯಾಗಿದೆ. ಬಿಇಎಸ್​ ಬೆಂಚ್ ಮಾರ್ಕ್​​​ ಸೂಚ್ಯಾಂಕವು ಈ ವರ್ಷ 8,373.39 ಅಂಕಗಳನ್ನು ಶೇ. 17.53ರಷ್ಟು ಏರಿಕೆಯಾಗಿದ್ದು, ಸರ್ವಕಾಲಿಕ ದಾಖಲೆ ಎನಿಸಿಕೊಂಡಿದೆ.

ಆದರೆ, ಯಾವ ದಿನಾಂಕದಲ್ಲಿ ಎಷ್ಟು ಅಂಕ ಏರಿಕೆಯಾಗಿದೆ ಹಾಗೂ ಯಾವ ಮಾಪಕಗಳು ಹೆಚ್ಚಿನ ವಹಿವಾಟು ನಡೆಸಿವೆ ಎಂಬ ಮಾಹಿತಿ ಇಂತಿದೆ. ಈ ವರ್ಷದ ಆರಂಭ ಜನವರಿ 21ರಂದು ಮೊದಲ ಬಾರಿಗೆ ಬಿಎಸ್​ಇ ಬೆಂಚ್​ ಮಾರ್ಕ್​​​​​​ ಸೆನ್ಸೆಕ್ಸ್ 50 ಸಾವಿರ ಗಡಿ ದಾಟಿತ್ತು.

  • ಇದಾದ ಬಳಿಕ ಫೆಬ್ರವರಿ 3ರಂದು 50 ಸಾವಿರ ಮಾರ್ಕ್​ನಲ್ಲಿ ದಿನದವಹಿವಾಟು ಅಂತ್ಯಗೊಂಡಿತ್ತು.
  • ಫೆಬ್ರವರಿ 5ರಂದು ದಿನದ ವಹಿವಾಟಿನಲ್ಲಿ 51,000 ಗಡಿದಾಟಿತ್ತು.
  • ಫೆಬ್ರವರಿ 8ರ ವಹಿವಾಟು ಅಂತ್ಯದಲ್ಲೂ 51 ಸಾವಿರ ದಾಟಿ ದಾಖಲೆ ಬರೆದಿತ್ತು.
  • ಫೆಬ್ರವರಿ 15ರಲ್ಲಿ ಇದೇ ದಾಖಲೆ ಮುಂದುವರಿದು ಸೂಚ್ಯಾಂಕ 52 ಸಾವಿರಕ್ಕೆ ಮುಟ್ಟಿತ್ತು.
  • ಜೂನ್ 22ರಂದು ಹೊಸದಾಗಿ 53 ಸಾವಿರಕ್ಕೆ ತಲುಪಿ ಹೊಸ ದಾಖಲೆಗೆ ಕಾರಣವಾಗಿತ್ತು.
  • ಜುಲೈ 7ರಂದು ದಿನದ ವಹಿವಾಟು 53 ಸಾವಿರದಲ್ಲಿ ಅಂತ್ಯಗೊಂಡಿತ್ತು.
  • ಆಗಸ್ಟ್ 4ರಲ್ಲಿ ಮೊದಲ ಬಾರಿಗೆ 54 ಸಾವಿರ ತಲುಪಿದ ಸೂಚ್ಯಾಂಕ ವಹಿವಾಟು ಅಂತ್ಯದ ವೇಳೆಯೂ 54 ಸಾವಿರಕ್ಕೂ ಅಧಿಕ ಅಂಕಗಳ ಮೂಲಕ ದಾಖಲೆ ಮಾಡಿತ್ತು.
  • ಆಗಸ್ಟ್ 13 ಈ ಓಟ 55 ಸಾವಿರಕ್ಕೆ ತಲುಪಿತ್ತು.
  • ಬಳಿಕ ಆಗಸ್ಟ್ 18ಕ್ಕೆ ದಿನದ ವಹಿವಾಟಿನಲ್ಲಿ ಮೊದಲ ಬಾರಿಗೆ 56 ಸಾವಿರದ ಗಡಿ ದಾಟಿತ್ತು.

ಆಗಸ್ಟ್ 26ರಂದು 56,198.13 ಅಂಕಗಳೊಂದಿಗೆ ದಿನದ ವಹಿವಾಟು ಮುಗಿದಿದ್ದು, ಇದು ಆಗಸ್ಟ್ 27ರಂದು ಸಹ ಇದೇ ಅಂಕ ಕಾಯ್ದುಕೊಂಡಿದೆ. ಜೊತೆಗೆ ಬಿಎಸ್‌ಇ-ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಬಂಡವಾಳವು ದಾಖಲೆಯ ಗರಿಷ್ಠ 2,43,73,800.36 ಕೋಟಿ ರೂ.ಗೆ ತಲುಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.