ಮುಂಬೈ: ಮಿಲಿಯನ್ ಡಾಲರ್ನಷ್ಟು ಸಂಪತ್ತು ಹೊಂದಿರುವ 56,000 ಕುಟುಂಬಗಳು ಮಹಾರಾಷ್ಟ್ರದಲ್ಲಿದ್ದು, ಇದು ದೇಶದ ಸಂಪತ್ತಿನ ಸೃಷ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಮಹಾರಾಷ್ಟ್ರ ಬಳಿಕ ಉತ್ತರ ಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಗುಜರಾತ್ ನಂತರದ ಸ್ಥಾನದಲ್ಲಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ.
ದೇಶದ ಒಟ್ಟಾರೆ 4.12 ಲಕ್ಷ ಮಿಲಿಯನೇರ್ ಕುಟುಂಬಗಳ ಪೈಕಿ ಶೇ 46ರಷ್ಟು ಕುಟುಂಬಗಳು ಈ ಐದು ರಾಜ್ಯಗಳಲ್ಲಿ ನೆಲೆಸಿದ್ದಾರೆ. ದೇಶದಲ್ಲಿ ಕಳೆದ ವರ್ಷ 4.12 ಲಕ್ಷ ಡಾಲರ್ ಮಿಲಿಯನೇರ್ ಕುಟುಂಬಗಳು ಇದ್ದವು. ಇದು ವಾರ್ಷಿಕವಾಗಿ ಮೂರನೇ ಅತಿ ಹೆಚ್ಚು ಶತಕೋಟ್ಯಾಧಿಪತಿಗಳನ್ನು ಉತ್ಪಾದಿಸುವ ವೇಗದ ಸಂಪತ್ತು ಸೃಷ್ಟಿಸುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಹುರುನ್ ಇಂಡಿಯಾ ವರದಿ ತಿಳಿಸಿದೆ.
1 ಮಿಲಿಯನ್ ಡಾಲರ್‌ಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಡಾಲರ್-ಮಿಲಿಯನೇರ್ ಕುಟುಂಬವೆಂದು ವರದಿಯಲ್ಲಿ ಪರಿಗಣಿಸಲಾಗಿದೆ.
ರಾಷ್ಟ್ರೀಯ ಜಿಡಿಪಿಯಲ್ಲಿ ಶೇ 16ರಷ್ಟು ಕೊಡುಗೆ ನೀಡುವ ಎಲ್ಲ ರಾಜ್ಯಗಳಲ್ಲಿ ಅತಿ ಹೆಚ್ಚು ಜಿಎಸ್‌ಡಿಪಿ ಹೊಂದಿರುವ ಮಹಾರಾಷ್ಟ್ರ, ಕಳೆದ ವರ್ಷ 56,000 ಡಾಲರ್-ಮಿಲಿಯನೇರ್ ಕುಟುಂಬಸ್ಥರನ್ನು ಹೊಂದಿದೆ. 2013ರ ಹಣಕಾಸು ವರ್ಷದಿಂದ 2019ರ ಆರ್ಥಿಕ ವರ್ಷದ ನಡುವೆ, ಆರ್ಥಿಕತೆಯು ವಾರ್ಷಿಕವಾಗಿ ಶೇ 6.9ರಷ್ಟು ಬೆಳೆಯುತ್ತಿದೆ. ಈ ರಾಜ್ಯವು 247 ಶ್ರೀಮಂತ ವ್ಯಕ್ತಿಗಳಿಗೆ ನೆಲೆಯಾಗಿದೆ.
ಇದನ್ನೂ ಓದಿ: ಆದಾಯ ತೆರಿಗೆ ಪಾವತಿ: ಏಪ್ರಿಲ್ 1ರಿಂದ ಬದಲಾಗಲಿವೆ ಈ 5 ನಿಯಮಗಳು..
ಉತ್ತರಪ್ರದೇಶವು 36,000 ಮಿಲಿಯನೇರ್ ಕುಟುಂಬಗಳ ಮೂಲಕ ಎರಡನೇ ಸ್ಥಾನದಲ್ಲಿದೆ. ಕಳೆದ ಒಂದು ದಶಕದಲ್ಲಿ ಇದರ ಆರ್ಥಿಕತೆಯು ವಾರ್ಷಿಕವಾಗಿ ಶೇ 10.6ರಷ್ಟಿದೆ. ಮೂರನೇ ಸ್ಥಾನದಲ್ಲಿ 35,000 ಡಾಲರ್-ಮಿಲಿಯನೇರ್ ಕುಟುಂಬಗಳೊಂದಿಗೆ ತಮಿಳುನಾಡು ಇದೆ. ಕಳೆದ ಐದು ಹಣಕಾಸು ವರ್ಷಗಳಲ್ಲಿ, ಅದರ ಆರ್ಥಿಕತೆಯು ವಾರ್ಷಿಕವಾಗಿ ಶೇ 12.2ರಷ್ಟಿದೆ. ಈ ರಾಜ್ಯವು 65 ಶ್ರೀಮಂತ ಭಾರತೀಯರಿಗೆ ನೆಲೆಯಾಗಿದೆ.
ಕರ್ನಾಟಕವು ಈ ಶ್ರೇಣಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, 33,000 ಕುಟುಂಬಗಳು ವಾರ್ಷಿಕ 1 ಮಿಲಿಯನ್ ಡಾಲರ್ ಆದಾಯ ಹೊಂದಿದ್ದಾರೆ. ಕರ್ನಾಟಕ ಇತ್ತೀಚುನ ಹಲವು ವರ್ಷಗಳಿಂದ ಶೇ 10ರಷ್ಟು ಬೆಳೆಯುತ್ತಿದೆ. ಕಳೆದ ಎರಡು ದಶಕಗಳಲ್ಲಿ ಅದರ ತಲಾ ಆದಾಯವು 11 ಪಟ್ಟು ಹೆಚ್ಚಾಗಿದ್ದು, 72 ಶ್ರೀಮಂತ ವ್ಯಕ್ತಿಗಳು ರಾಜ್ಯದಲ್ಲಿ ನೆಲೆಸಿದ್ದಾರೆ.
ಗುಜರಾತ್ 29,000 ಡಾಲರ್-ಮಿಲಿಯನೇರ್ ಕುಟುಂಬಗಳಿಗೆ ನೆಲೆಯಾಗಿದ್ದು, ಐದನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 60 ಶ್ರೀಮಂತ ಭಾರತೀಯರಿದ್ದಾರೆ.
ನಗರಗಳ ಪೈಕಿ ರಾಷ್ಟ್ರೀಯ ಜಿಡಿಪಿಯ ಶೇ 6.2ರಷ್ಟು ಉತ್ಪಾದಿಸುವ ಮುಂಬೈ. 16,933 ಮಿಲಿಯನೇರ್ ಕುಟುಂಬಗಳೊಂದಿಗೆ ಮುನ್ನಡೆ ಸಾಧಿಸಿದೆ. ದೆಹಲಿಯಲ್ಲಿ 15,861 ಮಿಲಿಯನೇರ್ ಕುಟುಂಬಗಳಿದ್ದು, ಜಿಡಿಪಿಯಲ್ಲಿ ಶೇ 4.94ರಷ್ಟಿದೆ.
ಕೋಲ್ಕತ್ತಾ ರಾಜ್ಯದ 24,000 ಮಿಲಿಯನೇರ್ ಕುಟುಂಬಗಳ ಮುಖೇನ 3ನೇ ಸ್ಥಾನ ಹಾಗೂ ಸುಮಾರು 7,582 ಮಿಲಿಯನೇರ್ ಕುಟುಂಬಗಳೊಂದಿಗೆ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ.