ಹೈದರಾಬಾದ್: 72 ವರ್ಷದ ಫ್ಯಾಷನ್ ಟೈಕೂನ್ ಆಗಿರುವ ಬರ್ನಾರ್ಡ್ ಅರ್ನಾಲ್ಟ್ ಇದೀಗ ವಿಶ್ವದ ನಂಬರ್ 1 ಶ್ರೀಮಂತನಾಗಿದ್ದು, ಅಮೆಜಾನ್ನ ಜೆಫ್ ಬೆಜೋಸ್ ಹಾಗೂ ಟೆಸ್ಲಾದ ಎಲಾನ್ ಮಸ್ಕ್ ಅವರನ್ನ ಮೀರಿಸಿದ್ದಾರೆ. ಫೋರ್ಬ್ಸ್ನ Real-Time Billionaires List ಪ್ರಕಾರ ಇವರ ಆಸ್ತಿಯ ಒಟ್ಟು ಮೌಲ್ಯ 199 ಬಿಲಿಯನ್ ಅಮೆರಿಕನ್ ಡಾಲರ್(USD 199.8 billion(14.83 ಲಕ್ಷ ಕೋಟಿ ರೂ.) ಎಂದು ತಿಳಿದು ಬಂದಿದೆ.
72 ವರ್ಷದ ಅರ್ನಾಲ್ಟ್ ಫ್ಯಾಷನ್ ಕಂಪನಿಯೊಂದರ ಮುಖ್ಯ ಕಾರ್ಯನಿರ್ವಾಹಕ (Chief Executive)ಹುದ್ದೆಯಲ್ಲಿದ್ದು, ಇದು 70 ಬ್ರ್ಯಾಂಡ್ ಹೊಂದಿದೆ ಎಂದು ತಿಳಿದು ಬಂದಿದೆ. ವಿಶ್ವದ ನಂಬರ್ 1 ಶ್ರೀಮಂತರಾಗಿದ್ದ ಬೆಜೋಸ್ ರಿಯಲ್ ಟೈಮ್ ಅವರ ಆಸ್ತಿ 194.9 ಬಿಲಿಯನ್ ಡಾಲರ್(14.46 ಲಕ್ಷ ಕೋಟಿ ರೂ.) ಆಗಿದ್ದು, ಎಲಾನ್ ಮಸ್ಕ್ ಅವರ ಆಸ್ತಿ ಮೌಲ್ಯ 185.5 ಬಿಲಿಯನ್ ಡಾಲರ್(13.76 ಲಕ್ಷ ಕೋಟಿ ರೂ.) ಆಗಿದೆ.
ಕೊರೊನಾ ವೈರಸ್ ಸಂದರ್ಭದಲ್ಲಿ ಈ ಕಂಪನಿಗೆ ಆದಾಯದಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಆದಾಯದ ಶೇ. 10ರಷ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿರಿ: ಅಕ್ಟೋಬರ್‌ನಲ್ಲಿ ಕೊವಾವ್ಯಾಕ್ಸ್ ಲಸಿಕೆ ; ಮಕ್ಕಳಿಗೆ ಬಳಕೆ ಯಾವಾಗ?
ಈ ವರ್ಷದ ಆರಂಭದಲ್ಲಿ ಅಮೆರಿಕದ ಆಭರಣ ತಯಾರಿಕಾ ಕಂಪನಿ ಟಿಫಾನಿ ಅಂಡ್ ಕೋ ಜತೆಗೆ 15.8 ಬಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದ ಕೂಡ ಮಾಡಿಕೊಂಡಿದ್ದು, ಅತಿ ದೊಡ್ಡ ವಿಲಾಸಿ ಬ್ರ್ಯಾಂಡ್ ಖರೀದಿ ವ್ಯವಹಾರವಾಗಿದೆ. LVMH 46 ಹೋಟೆಲ್, ರೈಲುಗಳು ಮತ್ತು ಕ್ರೂಸ್ ಕೂಡ ಹೊಂದಿದೆ. 25 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಬರ್ನಾರ್ಡ್ ಅರ್ನಾಲ್ಟ್ 2019ರಲ್ಲಿ ಪತ್ನಿಗೆ ಡಿವೋರ್ಸ್ ನೀಡಿದ್ದಾರೆ.