ನವದೆಹಲಿ: 2,500 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂಬೈ-ಅಹಮದಾಬಾದ್ ನಡುವೆ ಹೈ ಸ್ಪೀಡ್ ರೈಲು ಕಾರಿಡಾರ್ ನಿರ್ಮಿಸಲು ಎಲ್ ಅಂಡ್ ಟಿ ಕಂಪನಿ ಮುಂದಾಗಿದೆ.
ಮುಂಬೈ- ಅಹಮದಾಬಾದ್ ನಡುವೆ ಹೈ ಸ್ಪೀಡ್ ರೈಲು ಕಾರಿಡಾರ್ನ ಎರಡು ಪ್ಯಾಕೇಜ್ಗಳ ಒಪ್ಪಂದ ಮಾಡಿಕೊಂಡಿರುವುದಾಗಿ ಎಲ್ ಅಂಡ್ ಟಿ ಕನ್ಸ್ಟ್ರಕ್ಷನ್ನ ನಾಗರಿಕ ಮೂಲ ಸೌಕರ್ಯ ವ್ಯವಹಾರದ ಮೂಲಗಳು ತಿಳಿಸಿವೆ
ಇದೊಂದು ಮಹತ್ವದ ಯೋಜನೆಯಾಗಿದ್ದು, ಪ್ರತ್ಯೇಕವಾಗಿ 1 ಸಾವಿರ ಹಾಗೂ ಎರಡೂವರೆ ಸಾವಿರ ಕೋಟಿ ರೂ.ಮೌಲ್ಯದ ಪ್ಯಾಕೇಜ್ ಎಂದು ತಿಳಿದುಬಂದಿದೆ. 28 ಸೇತುವೆಗಳನ್ನು ನಿರ್ಮಿಸಿ, ಅವುಗಳನ್ನು ಜೋಡಿಸಿ, ಸಾಗಿಸುವುದು ಈ ಯೋಜನೆಯ ಭಾಗ ಎಂದು ಕಂಪನಿ ಹೇಳಿಕೊಂಡಿದೆ.
ಜಪಾನ್‌ನ ಎಲ್ ಅಂಡ್ ಟಿ ಮತ್ತು ಐಹೆಚ್ಐ ಇನ್ಫ್ರಾಸ್ಟ್ರಕ್ಚರ್ ಸಿಸ್ಟಮ್ಸ್ (ಐಐಎಸ್) ಒಕ್ಕೂಟದ ಮೂಲಕ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಎಲ್ ಅಂಡ್ ಟಿ ಮಾಹಿತಿ ಬಹಿರಂಗ ಪಡಿಸಿದೆ.