ETV Bharat / business

ಐದು ಲಕ್ಷ ಯುನಿಟ್ ಮೈಲಿಗಲ್ಲು ದಾಟಿದ ಕಿಯಾ ಇಂಡಿಯಾ - ಆಂಧ್ರದ ಕಿಯಾ ಇಂಡಿಯಾ ಪ್ಲಾಂಟ್​​

ಸುಮಾರು 5 ಲಕ್ಷ ವಾಹನಗಳನ್ನು ಕಿಯಾ ಇಂಡಿಯಾ ಮಾರಾಟ ಮಾಡಿದ್ದು, ಒಂದು ಲಕ್ಷ ಯುನಿಟ್​ಗಳನ್ನು ವಿದೇಶದಲ್ಲಿಯೂ, 4 ಲಕ್ಷ ಯುನಿಟ್​​ಗಳನ್ನು ದೇಶಿಯವಾಗಿಯೂ ಮಾರಾಟ ಮಾಡಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

Kia India crosses 5 lakh dispatch mark from Anantapur plant in Andhra
ಐದು ಲಕ್ಷ ಯುನಿಟ್ ಮೈಲಿಗಲ್ಲು ದಾಟಿದ ಕಿಯಾ ಇಂಡಿಯಾ
author img

By

Published : Feb 23, 2022, 6:14 PM IST

ಅನಂತಪುರ(ಆಂಧ್ರಪ್ರದೇಶ): ವಾಹನ ತಯಾರಕ ಸಂಸ್ಥೆಯಾದ ಕಿಯಾ ಇಂಡಿಯಾ, ಸುಮಾರು 5 ಲಕ್ಷ ವಾಹನಗಳನ್ನು ಆಂಧ್ರಪ್ರದೇಶದ ಅನಂತಪುರದಲ್ಲಿರುವ ಪ್ಲಾಂಟ್​​​ನಿಂದ ರಫ್ತು ಮಾಡಿದೆ ಎಂದು ಮಂಗಳವಾರ ಮಾಹಿತಿ ನೀಡಿದೆ. ಈ ರಫ್ತು ದೇಶಿಯವಾಗಿ ಜನರಿಗೆ ಪೂರೈಕೆ ಮಾಡಿರುವುದು ಮಾತ್ರವಲ್ಲದೇ, ವಿದೇಶಿಗಳಿಗೆ ರಫ್ತು ಮಾಡುವ ಮಾರುಕಟ್ಟೆಗೆ ಪೂರೈಸುವುದನ್ನು ಒಳಗೊಂಡಿದೆ ಎಂದು ಕಿಯಾ ಸ್ಪಷ್ಟನೆ ನೀಡಿದೆ.

ಇದರೊಂದಿಗೆ ದೇಶದಲ್ಲಿ ನಾಲ್ಕು ಲಕ್ಷ ಯುನಿಟ್​ಗಳನ್ನು ಕಿಯಾ ಮಾರಾಟ ಮಾಡಿದೆ. 2019ರ ಸೆಪ್ಟೆಂಬರ್​ನಲ್ಲಿ ಸೆಲ್ಟೋಸ್ ಕಾರನ್ನು ಮಾರಾಟ ಮಾಡಲು ಆರಂಭ ಮಾಡಿದ ನಂತರ 91ಕ್ಕೂ ಹೆಚ್ಚು ದೇಶಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಕಾರುಗಳನ್ನು ರಫ್ತು ಮಾಡಲಾಗಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಮೂಲಕ ಒಟ್ಟು 5 ಲಕ್ಷ ಯುನಿಟ್​ಗಳನ್ನು ಮಾರಲಾಗಿದೆ.

ಕಿಯಾ ಇಂಡಿಯಾವು 2021ರ ವಾಹನ ರಫ್ತು ವಹಿವಾಟಿನಲ್ಲಿ ಶೇಕಡಾ 25ಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿದ್ದು, ಈ ಮೂಲಕ ದೇಶದಲ್ಲಿ ವಾಹನಗಳ ರಫ್ತುಗಳಲ್ಲಿ ಪ್ರಮುಖ ಕಂಪನಿಯಾಗಿ ಮಾರ್ಪಟ್ಟಿದೆ.

5 ಲಕ್ಷ ಯುನಿಟ್​ಗಳ ಮಾರಾಟ ಅತ್ಯಂತ ದೊಡ್ಡ ಸಂಖ್ಯೆಯಾಗಿದ್ದು, ಕಡಿಮೆ ಅವಧಿಯಲ್ಲಿ ಈ ಮೈಲಿಗಲ್ಲನ್ನು ತಲುಪಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಭಾರತದಲ್ಲಿ ಪ್ರಾರಂಭದಿಂದಲೂ ನಮ್ಮ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸಲು ನಾವು ಗಮನಹರಿಸಿದ್ದೇವೆ. ಪ್ರಸ್ತುತ ಕಿಯಾ 4 ಲಕ್ಷ ಭಾರತೀಯ ಕುಟುಂಬಗಳ ಭಾಗವಾಗಿದೆ. ಗ್ರಾಹಕರು ನಮಗೆ ನೀಡಿದ ಪ್ರೀತಿಗಾಗಿ ನಾವು ಅತ್ಯಂತ ಕೃತಜ್ಞರಾಗಿರುತ್ತೇವೆ ಎಂದು ಕಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಟೇ-ಜಿನ್ ಪಾರ್ಕ್ ಧನ್ಯವಾದ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ಇಂಧನ ಸೌರ ಮತ್ತು ಹೈಡ್ರೋಜನ್ ಶಕ್ತಿಯ ಪ್ರಮುಖ ಸಂಪನ್ಮೂಲವಾಗಲಿದೆ: ಅಂಬಾನಿ

ಇತ್ತೀಚೆಗಷ್ಟೇ ಅಂದರೆ ಫೆಬ್ರವರಿ 15ರಂದು ಕಿಯಾ ಕ್ಯಾರೆನ್ಸ್ ಕಾರನ್ನು ಬಿಡುಗಡೆ ಮಾಡಿದ್ದು, ಇದು ಕಿಯಾ ಇಂಡಿಯಾದ ನಾಲ್ಕನೇ ಉತ್ಪನ್ನವಾಗಿದೆ. ಈಗಾಗಲೇ ಭಾರತೀಯರಿಂದ ಕ್ಯಾರೆನ್ಸ್​ಗೆ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ ಎಂದು ಕಿಯಾ ಹೇಳಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.