ETV Bharat / business

ನೀತಿ ಆಯೋಗದ ಇನ್ನೋವೇಷನ್ ಸೂಚ್ಯಂಕ: ದೇಶದಲ್ಲಿ ಕರ್ನಾಟಕದ ಸ್ಥಾನವೆಷ್ಟು ಗೊತ್ತಾ? - NITI Aayog

ಒಕ್ಕೂಟದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಣ್ಣ-ಗುಡ್ಡಗಾಡು ರಾಜ್ಯಗಳು ಒಳಗೊಂಡಂತೆ ನೀತಿ ಆಯೋಗವು ಪ್ರಥಮ ಬಾರಿಗೆ ಭಾರತದ ನಾವೀನ್ಯತೆ ಸೂಚ್ಯಂಕದ ಮೂಲಕ ರಾಜ್ಯಗಳ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ ಪರಿಶೀಲಿಸುವ ಉದ್ದೇಶ ಇರಿಸಿಕೊಂಡಿದೆ. ಇನ್ನೋವೇಷನ್ ಸೂಚ್ಯಂಕದಲ್ಲಿ ಕರ್ನಾಟಕ 35.05 ಅಂಕಗಳ ಮೂಲಕ ಮೊದಲ ಸ್ಥಾನದಲ್ಲಿದೆ. ನೆರೆಯ ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ನಂತರದ ಶ್ರೇಣಿಯಲ್ಲಿವೆ.

ಸಾಂದರ್ಭಿಕ ಚಿತ್ರ
author img

By

Published : Oct 17, 2019, 7:30 PM IST

Updated : Oct 17, 2019, 9:54 PM IST

ನವದೆಹಲಿ: ಕೇಂದ್ರ ಸರ್ಕಾರದ ನೀತಿ ನಿರೂಪಣಾ ಸಂಸ್ಥೆಯಾಗಿರುವ ನೀತಿ ಆಯೋಗವು ತನ್ನ ಪ್ರಪ್ರಥಮ ರಾಜ್ಯವಾರು ಇನ್ನೋವೇಷನ್ ಸೂಚ್ಯಂಕ ಶ್ರೇಣಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕ ನಂ.1 ಸ್ಥಾನ ಪಡೆದಿದೆ.

ಒಕ್ಕೂಟದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಣ್ಣ- ಗುಡ್ಡಗಾಡು ರಾಜ್ಯಗಳು ಒಳಗೊಂಡಂತೆ ನೀತಿ ಆಯೋಗವು ಪ್ರಥಮ ಬಾರಿಗೆ ಇಂಡಿಯಾ ಇನ್ನೋವೇಷನ್ ಇಂಡೆಕ್ಸ್‌ ( ಭಾರತದ ನಾವೀನ್ಯತೆ ಸೂಚ್ಯಂಕ) ಮೂಲಕ ರಾಜ್ಯಗಳ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ ಪರಿಶೀಲಿಸುವ ಉದ್ದೇಶದಿಂದ ಈ ಶ್ರೇಣಿ ಪ್ರಕಟಿಸಿದೆ.

NITI Aayog's India Innovation Index
ನೀತಿ ಆಯೋಗದ ಇನ್ನೋವೇಷನ್ ಸೂಚ್ಯಂಕ

ಸೂಚ್ಯಂಕವು 29 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳನ್ನು ನಾವೀನ್ಯತೆಯ ಮೌಲ್ಯಮಾಪನಕ್ಕೆ ಒಳಪಡಿಸಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸೂಚ್ಯಂಕವನ್ನು ಅಂಕಗಳನ್ನಾಧರಿಸಿ ಶ್ರೇಯಾಂಕ ನೀಡಲಾಗಿದೆ. ಅವಕಾಶಗಳು ಮತ್ತು ಸವಾಲುಗಳನ್ನು ಗುರುತಿಸಿ ಹೊಸತನವನ್ನು ಬೆಳೆಸಲು ಸರ್ಕಾರದ ನೀತಿಗಳು ಸಹ ಇದರಲ್ಲಿವೆ.

ಇನ್ನೋವೇಷನ್​ ಸೂಚ್ಯಂಕವನ್ನು ಐದು ನಿಯತಾಂಕಗಳ ಮೂಲಕ ನಾವೀನ್ಯತೆಯ ಒಳಹರಿವು ಮತ್ತು ಕಾರ್ಯಕ್ಷಮತೆಯ ಉತ್ಪಾದನೆ ಮಾಪನದಡಿ ಅಳೆಯಲಾಗಿದೆ. ಮಾನವ ಸಂಪನ್ಮೂಲದ ಬಂಡವಾಳ, ಹೂಡಿಕೆ, ಕಾರ್ಮಿಕರ ಜ್ಞಾನ, ವ್ಯಾಪಾರಸ್ನೇಹಿ ಪರಿಸರ, ಸುರಕ್ಷತೆ ಮತ್ತು ಕಾನೂನಿನ ವಾತಾವರಣದಂತಹ ಅಂಶಗಳ ಒಳಗೊಂಡಿವೆ.

ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್​ ಸುದ್ದಿಗಾರರೊಂದಿಗೆ ಮಾತನಾಡಿದರು

ಇನ್ನೋವೇಷನ್ ಸೂಚ್ಯಂಕದಲ್ಲಿ ಕರ್ನಾಟಕ 35.05 ಅಂಕಗಳ ಮೂಲಕ ಮೊದಲ ಸ್ಥಾನದಲ್ಲಿದೆ. ನೆರೆಯ ತಮಿಳುನಾಡು (2), ಮಹಾರಾಷ್ಟ್ರ (3), ತೆಲಂಗಾಣ (4), ಹರಿಯಾಣ (5), ಕೇರಳ (6), ಉತ್ತರ ಪ್ರದೇಶ (7), ಪಶ್ಚಿಮ ಬಂಗಾಳ (8) ನಂತರದ ಸ್ಥಾನದಲ್ಲಿವೆ. ಕೇಂದ್ರಾಡಳಿತ ಪ್ರದೇಶ, ಸಣ್ಣ, ಗುಡ್ಡಗಾಡು ರಾಜ್ಯಗಳಲ್ಲಿ ದೆಹಲಿ, ಚಂಡಿಘಡ, ಗೋವಾ, ಪುದುಚೇರಿ ಕ್ರಮವಾಗಿ ಮೊದಲ ಸ್ಥಾನ ಅಲಂಕರಿಸಿವೆ.

ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್​ ಮಾತನಾಡಿ, ಇನ್ನೋವೇಷನ್ ಸೂಚ್ಯಂಕ ದೇಶಾದ್ಯಂತ ನಾವೀನ್ಯತೆಯು ಪ್ರವರ್ಧಮಾನಕ್ಕೆ ಬರಲು ಅನುಕೂಲಕರ ವಾತಾವರಣ ನಿರ್ಮಿಸಲು ಸಹಾಯ ಮಾಡಲಿದೆ. ರಾಜ್ಯಗಳಿಗೂ ನಾವೀನ್ಯತೆ ಸ್ನೇಹಿ ವಾತಾವರಣ ಬೆಳೆಸಲು ತಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸಲು ನೆರವಾಗಲಿದೆ. ರಾಜ್ಯಗಳ ಮಧ್ಯೆ ಕಾರ್ಯಕ್ಷಮತೆಯ ಮಾನದಂಡ ಸಹಕಾರಿಗೆ ಇದು ನೆರವಾಗಲಿದೆ ಎಂದರು.

Intro:Body:Conclusion:
Last Updated : Oct 17, 2019, 9:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.