ETV Bharat / business

ಜಿಯೋಫೋನ್ ನೆಕ್ಸ್ಟ್​​ನಲ್ಲಿ ಗೂಗಲ್ ಪ್ರಸ್ತುತಿಯ ‘ಪ್ರಗತಿ’ ಆಪರೇಟಿಂಗ್ ಸಿಸ್ಟಂ

ರಿಲಯನ್ಸ್ ಜಿಯೋ ಮಾಲಿಕತ್ವದ ಜಿಯೋ​ಫೋನ್ ನೆಕ್ಸ್ಟ್​ ಮಾರುಕಟ್ಟೆಗೆ ಬರಲು ತುದಿಗಾಲಲ್ಲಿದೆ. ಹೀಗಾಗಿ ಈ ಫೋನ್​​​ನ ಒಂದೊಂದೇ ಫೀಚರ್​​ಗಳು ಹೊರಬರುತ್ತಿದ್ದು, ಇದೀಗ ಆಪರೇಟಿಂಗ್ ಸಿಸ್ಟಂ ಯಾವುದಿರಲಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.

author img

By

Published : Oct 25, 2021, 9:05 PM IST

jiophone-next
ಜಿಯೋಫೋನ್ ನೆಕ್ಸ್ಟ್​​

ನವದೆಹಲಿ: ಟೆಲಿಕಾಂ ವಲಯದಲ್ಲಿ ಬೃಹತ್ ಸಂಸ್ಥೆಯಾಗಿ ಬೆಳೆದಿರುವ ಜಿಯೋ ಸಂಸ್ಥೆ ತನ್ನ ಮೊಬೈಲ್ ಫೋನ್ ಸರಣಿಯ ಜಿಯೋ ಫೋನ್ ನೆಕ್ಸ್ಟ್ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಮುಂದಿನ ದೀಪಾವಳಿ ವೇಳೆಗೆ ಮಾರುಕಟ್ಟೆಯಲ್ಲಿ ಜಿಯೋಫೋನ್ ನೆಕ್ಸ್ಟ್​ ಖರೀದಿಗೆ ಲಭ್ಯವಾಗಲಿದೆ ಎಂದು ಈ ಹಿಂದೆಯೇ ಸಂಸ್ಥೆ ತಿಳಿಸಿದೆ.

ಇದೀಗ ಜಿಯೋಫೋನ್​ ನೆಕ್ಸ್ಟ್​ನಲ್ಲಿ ಗೂಗಲ್ ​ಜಂಟಿ ಸಹಯೋಗದೊಂದಿಗೆ ‘ಪ್ರಗತಿ’ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿ ಪಡಿಸಿದ್ದು, ಈ ಓಎಸ್​​ನಿಂದಲೇ ಮೊಬೈಲ್ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆ ತಿಳಿಸಿದೆ. ಈ ಫೋನ್​ನಲ್ಲಿ ಇನ್ಸ್​ಸ್ಟಂಟ್ ಭಾಷಾಂತರ ತಂತ್ರಾಂಶ ಅಳವಡಿಲಾಗಿದ್ದು, ಭಾರತದಲ್ಲಿ ಯಾವ ಮೂಲೆಯಲ್ಲಾದರೂ ಈ ಫೋನ್​ನಿಂದ ಅವರದ್ದೇ ಭಾಷೆಯಲ್ಲಿ ವ್ಯವಹರಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಆದರೆ, ಆ್ಯಂಡ್ರಾಯ್ಡ್​ ಪ್ರಸ್ತುತ ಪಡಿಸಲಿರುವ ಪ್ರಗತಿ ಆಪರೇಟಿಂಗ್ ಸಿಸ್ಟಂ ಆ್ಯಂಡ್ರಾಯ್ಡ್​ ಫೋನ್​ಗಳಂತೆಯೆ ಕಾರ್ಯ ನಿರ್ವಹಿಸಲಿದೆ ಎಂದು ಆ್ಯಂಡ್ರಾಯ್ಡ್​​ ಭಾರತ ವಿಭಾಗದ ಪ್ರಧಾನ ವ್ಯವಸ್ಥಾಪಕ ರಾಮ್​ ಪಾಪಾಟ್ಲ ಹೇಳಿದ್ದಾರೆ. ಇದರ ಜೊತೆಗೆ ಮೊಬೈಲ್ 10 ಪ್ರಾದೇಶಿಕ ಭಾಷೆಯಲ್ಲೂ ಕಾರ್ಯನಿರ್ವಹಿಸಲಿದೆ.

ಆದರೆ, ಈ ಫೋನ್​ನ ಇತರ ಫೀಚರ್​​​ಗಳ ಕುರಿತಂತೆ ಕಂಪನಿ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಜೊತೆಗೆ 5ಸಾವಿರ ಆಸುಪಾಸಿನಲ್ಲಿ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎನ್ನಲಾಗಿದ್ದು, ಅತ್ಯಂತ ಕಡಿಮೆ ಬೆಲೆಯ ಆ್ಯಂಡ್ರಾಯ್ಡ್​ 4ಜಿ ಫೋನ್ ಇದಾಗಿರಲಿದೆ.

ಇದನ್ನೂ ಓದಿ: ಪಿಕ್ಸೆಲ್‌ ಫೋನ್‌ಗಳಿಗೂ ಆಂಡ್ರಾಯ್ಡ್‌ 12 ಲಭ್ಯ - Google

ETV Bharat Logo

Copyright © 2024 Ushodaya Enterprises Pvt. Ltd., All Rights Reserved.