ಜೈಪುರ: ಮೀಸಲಾತಿಗಾಗಿ ಗುಜ್ಜರ್ ಸಮುದಾಯ ಪ್ರತಿಭಟನೆ ನಡೆಸಲಿದೆ. ಹೀಗಾಗಿ, ರಾಜಸ್ಥಾನ ಸರ್ಕಾರವು 2ಜಿ /3ಜಿ/4ಜಿ ಡೇಟಾ ಸೇವೆ, ಎಸ್‌ಎಂಎಸ್, ಎಂಎಂಎಸ್, ವಾಟ್ಸ್ಆ್ಯಪ್, ಫೇಸ್‌ಬುಕ್, ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳನ್ನು ಕೆಲವು ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ಸ್ಥಗಿತಗೊಳಿಸಲಿದೆ.
ರಾಜಸ್ಥಾನದ ಕೊಟ್ಪುಟ್ಲಿ, ಪಾವ್ತಾ, ಶಹಪುರ, ವಿರಾಟ್‌ನಗರ ಮತ್ತು ಜಮ್ವಾ ರಾಮ್‌ಗಢದಲ್ಲಿಈ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಧ್ವನಿ ಕರೆಗಳು ಮತ್ತು ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಮುಂದುವರಿಯುತ್ತದೆ.
ಕಳೆದ ಹಲವು ವರ್ಷಗಳಿಂದ ಗುಜ್ಜರ್ ಸಮುದಾಯದವರು ಅತ್ಯಂತ ಹಿಂದುಳಿದ ವರ್ಗ (ಎಂಬಿಸಿ) ವಿಭಾಗದ ಅಡಿ ಶೇ 5ರಷ್ಟು ಮೀಸಲಾತಿಗೆ ಬೇಡಿಕೆ ಇರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಗುಜಾರ್ ಸಮುದಾಯವು ರಾಜಸ್ಥಾನದ ಭಾರತ್ಪುರ ಜಿಲ್ಲೆಯ ಅಡಾ ಗ್ರಾಮದಲ್ಲಿ ಮಹಾ ಪಂಚಾಯತ್ ನಡೆಸಿತು.
ಗುರ್ಜರ್ ಆರಕ್ಷಣ ಸಂಘರ್ಷ ಸಮಿತಿಯು ಅಡಾ ಗ್ರಾಮದಲ್ಲಿ ಸುಮಾರು ಎರಡು ವರ್ಷಗಳ ನಂತರ ಮಹಾ ಪಂಚಾಯತ್ ಕರೆದು ಸಭೆ ನಡೆಸಿತು. ಸಮುದಾಯದ ನಾಯಕರು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನವೆಂಬರ್ 1ರಿಂದ ಆಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.