ETV Bharat / business

ಕ್ರಿಸಿಲ್​ ರೇಟಿಂಗ್​ನಲ್ಲಿ ಇನ್ಫೋಸಿಸ್‌ಗೆ ಅಗ್ರಸ್ಥಾನ!

ರೇಟಿಂಗ್ ಏಜೆನ್ಸಿಯ ಸಂಶೋಧನಾ ವಿಭಾಗವು ಲೆಕ್ಕ ಹಾಕಿದ 225 ಕಂಪನಿಗಳ ಅಂಕಗಳು ಲಿಂಗ ವೈವಿಧ್ಯತೆಯ ಸುಧಾರಣೆಗೆ ಅವಕಾಶವನ್ನು ಸೂಚಿಸಿವೆ. ಮಂಡಳಿಗಳು ಮತ್ತು ಉದ್ಯೋಗಿಗಳೆರಡರಲ್ಲೂ ಮಹಿಳೆಯರ ಪ್ರಾತಿನಿಧ್ಯವು ಶೇ.17ರಷ್ಟಿದೆ. ಸ್ವತಂತ್ರ ನಿರ್ದೇಶಕರು ಮತ್ತು ನವೀಕರಿಸಬಹುದಾದ ವಿದ್ಯುತ್ ಮೂಲಗಳ ಮೇಲೆ ಈ ರೇಟಿಂಗ್​​ ಅವಲಂಬಿತವಾಗಿದೆ..

author img

By

Published : Jun 28, 2021, 10:43 PM IST

Infosys tops the list, with a score of 79 on 100, while among the financial sector players
ಪರಿಸರ, ಸಾಮಾಜಿಕ ಮತ್ತು ಆಡಳಿತ ನಿರ್ವಹಣೆ; ಇನ್ಫೋಸಿಸ್‌ಗೆ ಅಗ್ರಸ್ಥಾನ

ಮುಂಬೈ : ಮಾಹಿತಿ ತಂತ್ರಜ್ಞಾನ ಮತ್ತು ಆರ್ಥಿಕ ಸೇವೆಗಳ ಮೂಲಕ ದೇಶದಲ್ಲಿ ಅತ್ಯಂತ ಪರಿಸರ, ಸಾಮಾಜಿಕ ಮತ್ತು ಆಡಳಿತ (ಇಎಸ್‌ಜಿ) ನಿರ್ವಹಣೆಯಲ್ಲಿ ದೇಶ 2ನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರ ಇನ್ಫೋಸಿಸ್ ಕ್ರಿಸಿಲ್‌ ಸಿದ್ಧಪಡಿಸಿರುವ ಮೆಟ್ರಿಕ್‌ನಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದೆ.

ಕ್ರಿಸಿಲ್ ಸಿದ್ಧಪಡಿಸಿದ ಮಾಹಿತಿ ಪ್ರಕಾರ, ತೈಲ ಮತ್ತು ಅನಿಲ, ರಾಸಾಯನಿಕಗಳು, ಲೋಹಗಳು ಮತ್ತು ಗಣಿಗಾರಿಕೆ ಮತ್ತು ಸಿಮೆಂಟ್ ಕಂಪನಿಗಳು ಅತಿ ಕಡಿಮೆ ಇಎಸ್‌ಜಿ ಅಂಕಗಳನ್ನು ಹೊಂದಿವೆ. ಇವು ಹೆಚ್ಚಿನ ನೈಸರ್ಗಿಕ-ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತವೆ. ಆ ಮೂಲಕ ಹೆಚ್ಚಿನ ಹೊರಸೂಸುವಿಕೆಯೊಂದಿಗೆ ಪರಿಸರ ಮತ್ತು ಸಮುದಾಯಗಳ ಮೇಲೆ ಪರಿಣಾಮ ಬಿರುತ್ತವೆ.

ಸರ್ಕಾರದ ನಿರ್ಧಾರಗಳು, ನಿಯಂತ್ರಕರು, ಹೂಡಿಕೆದಾರರು, ಸಾಲಗಾರರು ಮತ್ತು ಕಾರ್ಪೊರೇಟ್‌ಗಳ ನಿರ್ಧಾರಗಳಲ್ಲಿ ಇಎಸ್‌ಜಿ ಈಗಾಗಲೇ ಭೌತಿಕ ಪಾತ್ರ ವಹಿಸುತ್ತಿದೆ ಎಂದು ಕ್ರಿಸಿಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಶು ಸುಯಾಶ್ ಹೇಳಿದ್ದಾರೆ.

ಇದನ್ನೂ ಓದಿ: ಬಡ ರಾಷ್ಟ್ರಗಳ 99% ಕ್ಕಿಂತಲೂ ಹೆಚ್ಚು ಜನಸಂಖ್ಯೆಗೆ ಇನ್ನೂ ವ್ಯಾಕ್ಸಿನೇಷನ್​ ಸಾಧ್ಯವಾಗಿಲ್ಲ!

ರೇಟಿಂಗ್ ಏಜೆನ್ಸಿಯ ಸಂಶೋಧನಾ ವಿಭಾಗವು ಲೆಕ್ಕ ಹಾಕಿದ 225 ಕಂಪನಿಗಳ ಅಂಕಗಳು ಲಿಂಗ ವೈವಿಧ್ಯತೆಯ ಸುಧಾರಣೆಗೆ ಅವಕಾಶವನ್ನು ಸೂಚಿಸಿವೆ. ಮಂಡಳಿಗಳು ಮತ್ತು ಉದ್ಯೋಗಿಗಳೆರಡರಲ್ಲೂ ಮಹಿಳೆಯರ ಪ್ರಾತಿನಿಧ್ಯವು ಶೇ.17ರಷ್ಟಿದೆ. ಸ್ವತಂತ್ರ ನಿರ್ದೇಶಕರು ಮತ್ತು ನವೀಕರಿಸಬಹುದಾದ ವಿದ್ಯುತ್ ಮೂಲಗಳ ಮೇಲೆ ಈ ರೇಟಿಂಗ್​​ ಅವಲಂಬಿತವಾಗಿದೆ.

ಇನ್ಫೋಸಿಸ್ 100ರಲ್ಲಿ 79 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಹಣಕಾಸು ವಲಯದಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ 75 ಅಂಕಗಳನ್ನು ಹೊಂದಿದೆ. ಅನೇಕ ಐಟಿ ಕಂಪನಿಗಳು ಮತ್ತು ಹಣಕಾಸು ವಲಯದ ಕಂಪನಿಗಳು 70ರ ದಶಕದಲ್ಲಿ ಒಟ್ಟಾರೆ ಇಎಸ್‌ಜಿ ಅಂಕಗಳನ್ನು ಹೊಂದಿವೆ. ನಮ್ಮ ಮೌಲ್ಯಮಾಪನವು ಕಂಪನಿಗಳ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಬಹಿರಂಗಪಡಿಸುವಿಕೆಯನ್ನು ಆಧರಿಸಿದೆ ಎಂದು ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿಶ್ ಮೆಹ್ತಾ ಹೇಳಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.