ನವದೆಹಲಿ : ಭಾರತದ ಕೈಗಾರಿಕಾ ಉತ್ಪಾದನೆಯು ನವೆಂಬರ್‌ನಲ್ಲಿ ಶೇ.1.9ರಷ್ಟು ಕುಗ್ಗಿದೆ ಎಂದು ಅಧಿಕೃತ ಅಂಕಿ-ಅಂಶಗಳು ಮಂಗಳವಾರ ತಿಳಿಸಿವೆ.
ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ದತ್ತಾಂಶದ ಪ್ರಕಾರ, 2020ರ ನವೆಂಬರ್‌ನಲ್ಲಿ ಉತ್ಪಾದನಾ ವಲಯದ ಉತ್ಪಾದನೆಯು ಶೇ. 1.7ರಷ್ಟು ಕುಗ್ಗಿತು. ಗಣಿಗಾರಿಕೆ ಉತ್ಪಾದನೆಯು ಶೇ.7.3ರಷ್ಟು ಕುಸಿದಿದ್ರೆ, ವಿದ್ಯುತ್ ಉತ್ಪಾದನೆಯು ಶೇ.3.5ರಷ್ಟು ಏರಿಕೆಯಾಗಿದೆ.
ಐಐಪಿ 2019ರ ನವೆಂಬರ್‌ನಲ್ಲಿ ಶೇ.2.1ರಷ್ಟು ಏರಿಕೆಯಾಗಿತ್ತು. ಕಳೆದ ವರ್ಷ ಮಾರ್ಚ್‌ನಿಂದ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕೈಗಾರಿಕಾ ಉತ್ಪಾದನೆ ಸಂಕಷ್ಟಕ್ಕೊಳಗಾಗಿದೆ.