ನವದೆಹಲಿ: ವೈದ್ಯಕೀಯ ಬಳಕೆಯ ಆಮ್ಲಜನಕದ ಉತ್ಪಾದನೆಗೆ ಅಗತ್ಯವಾದ ಪ್ರಮುಖ ಘಟಕವಾದದ ಜಿಯೋಲೈಟ್ ಮಾಲಿಕ್ಯುಲರ್ ಸೀವ್ಸ್ ಪೂರೈಕೆ ಹೆಚ್ಚಿಸಲು ಕೈಗಾರಿಕಾ ಅನಿಲ ತಯಾರಕ ಎಂವಿಎಸ್ ಎಂಜಿನಿಯರಿಂಗ್ ಸರ್ಕಾರದ ಹಸ್ತಕ್ಷೇಪವನ್ನು ಕೋರಿದೆ.
ನವದೆಹಲಿ ಮೂಲದ ಎಂವಿಎಸ್ ಎಂಜಿನಿಯರಿಂಗ್ ಭಾರತದ ಪ್ರಮುಖ ಕೈಗಾರಿಕಾ ಅನಿಲ ವ್ಯವಸ್ಥೆಗಳ ಕಂಪನಿಯಾಗಿದ್ದು, ಒಂದು ವರ್ಷದೊಳಗೆ ದೇಶಾದ್ಯಂತ 40 ಪಿಎಸ್‌ಎ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಿದೆ.
ಸೂಕ್ತ ಸಾಮಗ್ರಿಗಳ ಕೊರತೆ; ಅಗತ್ಯ ಪೂರೈಕೆಗೆ ಅಡೆತಡೆ
ಎಂವಿಎಸ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ಧಾರ್ಥ್ ರಸ್ತೋಗಿ, ತಮ್ಮ ಕಂಪನಿಯು ದೆಹಲಿ - ಎನ್‌ಸಿಆರ್ ಸೇರಿದಂತೆ ದೇಶಾದ್ಯಂತ ಹಲವಾರು ಆಸ್ಪತ್ರೆಗಳಿಂದ ಆರ್ಡರ್ಗಳನ್ನು ಹೊಂದಿದೆ. ಆದರೆ ಜಿಯೋಲೈಟ್ ಮಾಲಿಕ್ಯುಲರ್ ಸೀವ್ಸ್ ಲಭ್ಯವಿಲ್ಲದ ಕಾರಣ ಆ ಆರ್ಡರ್ಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಪ್ರೆಶರ್ ಸ್ವಿಂಗ್ ಎಡ್ಸರ್ಪ್ಷನ್ (ಪಿಎಸ್ಎ) ಪ್ರಕ್ರಿಯೆಯ ಅಡಿಯಲ್ಲಿ ಗಾಳಿಯಿಂದ ಆಮ್ಲಜನಕವನ್ನು ಬೇರ್ಪಡಿಸುವ ಜಿಯೋಲೈಟ್ ಮಾಲಿಕ್ಯುಲರ್ ಸೀವ್ಸ್ ಅನ್ನು ಫ್ರಾನ್ಸ್, ಇಟಲಿ ಮುಂತಾದ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ರಸ್ತೋಗಿ ಹೇಳಿದರು.
ಸರ್ಕಾರಿ ಸಂಸ್ಥೆಗಳು ಮತ್ತು ಇತರ ಕೆಲವು ಸಂಸ್ಥೆಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಪೂರೈಕೆದಾರರು ಪೂರೈಕೆಯನ್ನು ರದ್ದುಗೊಳಿಸಿದ್ದಾರೆ. ಇದು ಕಂಪನಿಗೆ ದೊಡ್ಡ ಸವಾಲನ್ನು ಒಡ್ಡುತ್ತಿದೆ ಎಂದು ಅವರು ಹೇಳಿದರು.
"ಕಚ್ಚಾ ವಸ್ತುಗಳ ಸರಬರಾಜಿನಲ್ಲಿನ ಕೃತಕ ಕೊರತೆಯನ್ನು ಪರಿಹರಿಸಲು ನಾವು ತಕ್ಷಣ ಸರ್ಕಾರದ ಮಧ್ಯಪ್ರವೇಶಿಸಿ ಅಗತ್ಯ ವಸ್ತು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದೇವೆ, ವಿಶೇಷವಾಗಿ ಜಿಯೋಲೈಟ್ ಮಾಲಿಕ್ಯುಲರ್ ಸೀವ್ಸ್" ಎಂದು ಅವರು ಹೇಳಿದರು.