ETV Bharat / business

ಒಂದೇ ವಾರದಲ್ಲಿ 4.85 ಬಿಲಿಯನ್ ಡಾಲರ್​ ಹೆಚ್ಚಳಗೊಂಡ ವಿದೇಶಿ ವಿನಿಮಯ ನಿಧಿ

ಭಾರತದ ವಿದೇಶೀ ವಿನಿಮಯ ಸಂಗ್ರಹವು ವಿದೇಶಿ ಕರೆನ್ಸಿ ಸ್ವತ್ತು (ಎಫ್‌ಸಿಎ), ಚಿನ್ನದ ಮೀಸಲು, ವಿಶೇಷ ಡ್ರಾಯಿಂಗ್ ರೈಟ್ಸ್​ (ಎಸ್‌ಡಿಆರ್) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆಗೆ ದೇಶದ ಮೀಸಲು ಸ್ಥಾನ ಒಳಗೊಂಡಿದೆ.

foreign exchange
foreign exchange
author img

By

Published : Feb 6, 2021, 2:16 PM IST

ಮುಂಬೈ: ಜನವರಿ 29ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು ಒಂದು ವಾರದಲ್ಲಿ ಸುಮಾರು 4.852 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಪ್ತಾಹಿಕ ಅಂಕಿ ಅಂಶಗಳ ಪ್ರಕಾರ, ಜನವರಿ 22ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ನಿಧಿ 585.334 ಬಿಲಿಯನ್​ ಡಾಲರ್​​ನಿಂದ 590.185 ಬಿಲಿಯನ್​ ಡಾಲರ್​ಗೆ ಹೆಚ್ಚಳವಾಗಿದೆ.

ಭಾರತದ ವಿದೇಶೀ ವಿನಿಮಯ ಸಂಗ್ರಹವು ವಿದೇಶಿ ಕರೆನ್ಸಿ ಸ್ವತ್ತು (ಎಫ್‌ಸಿಎ), ಚಿನ್ನದ ಮೀಸಲು, ವಿಶೇಷ ಡ್ರಾಯಿಂಗ್ ರೈಟ್ಸ್​ (ಎಸ್‌ಡಿಆರ್) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆಗೆ ದೇಶದ ಮೀಸಲು ಸ್ಥಾನ ಒಳಗೊಂಡಿದೆ.

ಸಾಪ್ತಾಹಿಕ ಆಧಾರದ ಮೇಲೆ ವಿದೇಶೀ ವಿನಿಮಯ ನಿಕ್ಷೇಪಗಳ ಅತಿದೊಡ್ಡ ಘಟಕವಾದ ಎಫ್‌ಸಿಎಗಳು 5.026 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಳವಾಗಿ 547.218 ಬಿಲಿಯನ್‌ ಡಾಲರ್​ಗೆ ತಲುಪಿದೆ. ದೇಶದ ಚಿನ್ನದ ನಿಕ್ಷೇಪಗಳ ಮೌಲ್ಯವು 164 ದಶಲಕ್ಷದಿಂದ 36.294 ಶತಕೋಟಿ ಡಾಲರ್​​ಗೆ ಇಳಿದಿದೆ.

ಇದನ್ನೂ ಓದಿ: ರತನ್​​ಗೆ 'ಭಾರತ ರತ್ನ' ಟ್ವಿಟರ್ ಅಭಿಯಾನ: ನೆಟ್ಟಿಗರಿಗೆ ಟಾಟಾ ಉದ್ಯಮಿಯ 'ವಿನಮ್ರ ಮನವಿ' ಹೀಗಿದೆ..!

ಎಸ್‌ಡಿಆರ್ ಮೌಲ್ಯವು 4 ಮಿಲಿಯನ್ ಡಾಲರ್​ ಇಳಿಕೆಯಾಗಿ 1.508 ಬಿಲಿಯನ್ ಆಗಿದೆ. ಇದರ ಜೊತೆಯಲ್ಲಿ ಐಎಂಎಫ್‌ನೊಂದಿಗಿನ ದೇಶದ ಮೀಸಲು ಸ್ಥಾನವು 6 ದಶಲಕ್ಷದಿಂದ 5.165 ಶತಕೋಟಿ ಡಾಲರ್​ಗೆ ಇಳಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.